ಮಂಗಳೂರು(reporterkarnataka): ಕೊರೋನಾ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ರಾಜ್ಯದಯಾಂತ ಲಾಕ್ ಡೌನ್ ಹೇರಿಕೆಯಾಗಿ 2 ದಿನ ಗಳು ಕಳೆದಿದೆ.
ಕೆಲವು ಕಟ್ಟು ನಿಟ್ಟಿನ ಕ್ರಮ ಜಾರಿಯಲ್ಲಿದೆ. ಅದರಂತೆ ದ.ಕ. ಜಿಲ್ಲೆಯಲ್ಲಿ ಎರಡನೇ ದಿನವಾದ ಇಂದು ಕೂಡ ಲಾಕ್ ಡೌನ್ ಜಾರಿಯಲ್ಲಿತ್ತು.

ಆದರೆ ನಗರದ ಹಲವು ಕಡೆಗಳಲ್ಲಿ ಅನಗತ್ಯ ತಿರುಗಾಟಗಳು ಹೆಚ್ಚಾಗಿದೆ. ಅಗತ್ಯ ಸೇವೆ ಹೊರತು ಪಡಿಸಿ ಇನ್ಯಾವ ಸೇವೆಗಳಿಗೂ ಅನುಮತಿ ಇಲ್ಲ, ಶಾಲಾ ಕಾಲೇಜು ಖಾಸಗಿ ಕಛೇರಿಗಳು ಬಂದ್ ಮಾಡುವಂತೆ ನಿರ್ಬಂಧವಿದ್ದರೂ., ಜನರು ನಗರಗಳಿಗೆ ಬರುತ್ತಿದ್ದಾರೆ. ಪೋಲಿಸರು ಅಲ್ಲಲ್ಲಿ ನಾಕಾಬಂದಿ ಹಾಕಿದ್ದರೂ ಲಾಕ್ ಡೌನ್‌ನ ಮಹತ್ವ ಜನರಿಗೆ ತಿಳಿದಿಲ್ಲವೇ. ಅಥವಾ ಇಲಾಖೆ ಮೈ ಮರೆತಿದೆಯೋ ಗೊತ್ತಾಗುತ್ತಿಲ್ಲ. ಪರಿಸ್ಥಿತಿ ಗಮನಿಸಿ ಜನರೇ ಹಿಡಿ ಶಾಪ ಹಾಕುತ್ತಿದ್ದಾರೆ.

ಜನರೇ ಹೇಳುವಂತೆ ಪೊಲೀಸರು ತಪಾಸಣೆ ನಡೆಸುತ್ತಿಲ್ಲ. ಹಾಗಿದ್ದರೆ 54 ಕಡೆ ಔಟ್ ಪೋಸ್ಟ್ ಯಾತಕ್ಕಾಗಿ ಬರಿ ತೋರಿಕೆಗಾಗಿಯೇ. ಅನಗತ್ಯ ಕಾರುಗಳ ಓಡಾಟ ಜಾಸ್ತಿಯಾಗಿದೆ. ತುರ್ತು ಸೇವೆ ರಹಿತ ವಾಹನಗಳು ಓಡಾಡುತ್ತಲಿವೆ.ಕಾಲೇಜು ಬಂದ್ ಎಂದು ಸರ್ಕಾರವೇ ಘೋಷಿಸಿ ದ ಮೇಲೆ ಕೆಲವು ಕಡೆ ಓಪನ್ ಇದೆ ಗುಮಾನಿ ಹರಡಿದ್ಧು ಆತಂಕಕ್ಕೆ ಕಾರಣವಾಗಿದೆ. ಎಲ್ಲಾ ನಿಯಮಗಳನ್ನು ಅಡ್ಡ ಗೋಡೆಯ ಮೇಲೆ ದೀಪ ಇಟ್ಟ ಹಾಗೆ ಈ ಲಾಕ್‌ಡೌನ್ ಪರಿಣಾಮಕಾರಿಯಾಗುವುದು ಸಾಧ್ಯ ಇದೆಯೇ ? ಇದ್ಯಾವ ಲಾಕ್ ಡೌನ್ ಎಂಬುದು ಜನ ಸಾಮಾನ್ಯರ ಪ್ರಶ್ನೆ.

Leave a Reply

Your email address will not be published. Required fields are marked *