ಮಂಗಳೂರು(reporterkarnataka news): ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ದೊರಕಿದೆ. ರಾಜ್ಯ ಸರಕಾರ ಲಾಕ್ ಡೌನ್ ಘೋಷಿದ ಬಳಿಕವೂ ವಿಟಿಯು ಪರೀಕ್ಷೆ ನಡೆಸಿಯೇ ಸಿದ್ದ ಎಂದು ಸುತ್ತೋಲೆಯನ್ನು ಹೊರಡಿಸಲಾಗಿತ್ತು.

ಇದನ್ನು ಗಮನಿಸಿದ ಎಬಿವಿಪಿ ನಾಯಕರು ವಿಟಿಯು ಕುಲಪತಿಗಳ ಭೇಟಿಗೆ ತೆರಳಿದಾಗ ಕುಲಪತಿಗಳ ಭೇಟಿಗೆ ಅವಕಾಶ ನಿರಾಕರಿಸಲಾಯಿತು. ಎಬಿವಿಪಿ ವಿದ್ಯಾರ್ಥಿಗಳು ವಿಟಿಯುನ ಬಸ್ ಗಳನ್ನು  ತಡೆದು ಲಾಕ್ ಡೌನ್ ಕಾರಣ  ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಪ್ರತಿಭಟನೆ ನಡೆಸಿದರು. ಉನ್ನತ ಶಿಕ್ಷಣ ಸಚಿವರು ಹಾಗೂ ವಿಟಿಯು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಲಾಯಿತು.ನಂತರದಲ್ಲಿ ವಿಟಿಯು ಪರೀಕ್ಷೆಗಳನ್ನು ಮುಂದೂಡಿ ಸುತ್ತೋಲೆಯನ್ನು ಹೊರಡಿಸಿದೆ .

Leave a Reply

Your email address will not be published. Required fields are marked *