ರಾಯಚೂರು(reporterkarnataka news):

ಮಸ್ಕಿ ದಲಿತ ಹೋರಾಟಗಾರ  ಶ್ರಮಜೀವಿ ಎಂದೇ

ಪ್ರಖ್ಯಾತಿ ಪಡೆದ ನಾಗಪ್ಪ  ತತ್ತಿ ಸೋಮವಾರ ನಿಧನರಾದರು.

ಅವರು ಸಮಾಜದಲ್ಲಿ ದಲಿತಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಕ್ರಾಂತಿಗೀತೆಗಳನ್ನು ಹಾಡುವುದರ ಮೂಲಕ ಸಂಘಟನೆಯಲ್ಲಿ ತಮ್ಮದೇ ಆದ ವ್ಯಕ್ತಿತ್ವವನ್ನು ಪಡೆದಿದ್ದರು. ಕೆಲ ದಿನಗಳ ಕಾಲ ಅನಾರೋಗ್ಯದಿಂದ ಇದ್ದವರು ಇಂದು ನಿಧನರಾದರು. ದಲಿತ ಸಮಾಜಕ್ಕೆ ದಲಿತ ಸಂಘಟನೆಗೆ ತುಂಬಲಾರದ ನಷ್ಟವಾಗಿದೆ. ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ. ಅವರು ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ  ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.

ಅವರ ನಿಧನಕ್ಕೆ

ದಲಿತ ಸಮಾಜದ ಹಿರಿಯ ಮುಖಂಡರಾದ

ಅಂಬಣ್ಣ ರೈಚೂರ್, ಹನುಮಂತಪ್ಪ ವೆಂಕಟಾಪುರ್, ದಾನಪ್ಪ ನಿಲಗಲ್, ಸುರೇಶ್ ಅಂತ್ರಗಂಗೆ, ಮಲ್ಲಯ್ಯ ಬಳ್ಳಾ ದೊಡ್ಡಪ್ಪ, ಮುರಾರಿ ಅಶೋಕ್, ಮುರಾರಿ ಮಲ್ಲಯ್ಯ, ಮುರಾರಿ ಎಚ್ಪಿ, ಮುರಾರಿ ರಾಮಯ್ಯ, ಮುರಾರಿ ಪಮಯ್ಯ, ಮುರಾರಿ ಸೇರಿದಂತೆ ಇನ್ನಿತರ ಸಂಘಟನೆ ಮುಖಂಡರು, ದಲಿತ ಪರ ಹೋರಾಟಗಾರರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *