ಮಂಗಳೂರು(reporterkarnataka news):

ಕೊವಿಡ್ -೧೯ ರೋಗವನ್ನು ತಡೆಗಟ್ಟುವ ಉದ್ದೇಶದಿಂದ ದೇಶಾದ್ಯಂತ ಲಸಿಕೆ ಆಂದೋಲನ ನಡೆಯುತ್ತಿದ್ದು, ಈ ಪ್ರಯುಕ್ತ ಪ್ರಧಾನ ಮಂತ್ರಿಗಳು ಕರೆನೀಡಿದ ಲಸಿಕೆ ಉತ್ಸವದಲ್ಲಿ ಕೆನರಾ ಕಾಲೇಜಿನ ಎನ್ ಎಸ್ ಎಸ್ ಸ್ವಯಂಸೇವಕರು ಸಕ್ರಿಯವಾಗಿ ಭಾಗವಹಿಸಿದರು.

ಮನೆ ಮನೆಗೆ ತೆರಳಿ ವ್ಯಾಕ್ಸಿನ್ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿ ಅರಿವು ಮೂಡಿಸಿ, ನಲ್ವತೈದು ವರ್ಷ ಮೇಲ್ಪಟ್ಟವರು ಲಸಿಕೆ ತೆಗೆದು ಕೊಳ್ಳುವಂತೆ ಮನವೊಲಿಸಿದರು. ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಸೆಮಿಸ್ಟರ್ ಪರೀಕ್ಷೆ ಜರುಗುತ್ತಿದ್ದರೂ ಬಿಡುವು ಮಾಡಿಕೊಂಡು ತಮ್ಮ ಸೇವಾ ಮನೋಭಾವವನ್ನು ವ್ಯಕ್ತ ಪಡಿಸಿದ ವಿದ್ಯಾರ್ಥಿಗಳ ಈ ಗುಣ ಎಲ್ಲರಿಂದಲೂ  ಮೆಚ್ಚುಗೆಗೆ ಪಾತ್ರವಾಗಿದೆ.

ರಾಜ್ಯದ ‘ಎನ್ ಎಸ್ ಎಸ್  ಆರ್ ಡಿ ಬೆಂಗಳೂರು ‘ ಹಾಗೂ ದೇಶದ ‘ ಎನ್ ಎಸ್ ಎಸ್ ಇಂಡಿಯಾ’ ಅಧಿಕೃತ ಯು ಟ್ಯೂಬ್ ಚಾನಲ್ ಹಾಗೂ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಗೊಂಡಿರುವ ಈ ಕಾರ್ಯಕ್ರಮ ರಾಜ್ಯವ್ಯಾಪ್ತಿ ಮೆಚ್ಚುಗೆ ಪಡೆದುಕೊಂಡಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ರಾ.ಸೇ.ಯೋಜನೆಯ
ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ.ಎ. ನಿರ್ದೇಶನ ಹಾಗೂ ಕೆನರಾ ಕಾಲೇಜಿನ ಪ್ರಾಂಶುಪಾಲರಾದ  ಡಾ. ಪ್ರೇಮಲತಾ ವಿ.ಅವರ ಉಸ್ತುವಾರಿಯಲ್ಲಿ,ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿಗಳಾಗಿರುವ ಸೀಮಾ ಪ್ರಭು ಎಸ್. ಮತ್ತು ಕಾವ್ಯಶ್ರೀ ಅವರುಗಳ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಜರುಗಿತು.

Leave a Reply

Your email address will not be published. Required fields are marked *