ಬೆಂಗಳೂರು(reporterkarnataka news): ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಎರಡನೇ ಅಲೆಯ ಸೋಂಕು ತಡೆಗೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರಕಾರಕ್ಕೆ ಕೆಲವು ಶಿಫಾರಸುಗಳನ್ನು ಮಾಡಿ ವರದಿ ನೀಡಿದ್ದು, ಅದರಲ್ಲಿ ಏನೆಲ್ಲ ಶಿಫಾರಸು ಮಾಡಿದೆ ಎಂಬುದನ್ನು ತಿಳಿದುಕೊಳ್ಳೋಣ.

ರಾಜ್ಯಾದ್ಯಂತ 144 ಸೆಕ್ಷನ್ ಜಾರಿ, ರಾತ್ರಿ ಕಠಿಣ ಕರ್ಫ್ಯೂ, ಶಾಲೆ ಕಾಲೇಜು ಬಂದ್ ಸೇರಿದಂತೆ ಹಲವು ವಿಚಾರಗಳನ್ನು ಈ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.ಪ್ರಮುಖ ಶಿಫಾರಸುಗಳು

* ರಾಜ್ಯದ 7 ನಗರಗಳಲ್ಲಿ ಸದ್ಯ ಜಾರಿಯಿರುವ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರಿಗಿನ ಕರ್ಫ್ಯೂವನ್ನು ರಾತ್ರಿ 8 ರಿಂದ ಬೆಳಿಗ್ಗೆ 6ರ ವರೆಗೆ ವಿಸ್ತರಿಸುವುದು.

* ಸೋಂಕು ತಡೆಗೆ ರಾಜ್ಯಾದ್ಯಂತ 144 ಸೆಕ್ಷನ್ ಜಾರಿ

* ಶಾಲಾ – ಕಾಲೇಜು ಹಾಗೂ ಚಿತ್ರಮಂದಿರ ಬಂದ್

* ಬೆಂಗಳೂರಲ್ಲಿನ ಧಾರ್ಮಿಕ ಕೇಂದ್ರಗಳಿಗೆ ನಿರ್ಬಂಧ.

*ಬಾರ್- ಪಬ್ ಬಂದ್.

Leave a Reply

Your email address will not be published. Required fields are marked *