7:20 PM Tuesday9 - June 2026
ಬ್ರೇಕಿಂಗ್ ನ್ಯೂಸ್
ಶಕ್ತಿ ಯೋಜನೆಯಿಂದ ವ್ಯಾಪಾರ ನಷ್ಟ, ಸಾಲಗಾರರ ಕಾಟ: ಮಂಡ್ಯದಲ್ಲಿ ಪತ್ನಿ, ಮಗನನ್ನು ಕೊಂದು… ರಾಜ್ಯಸಭೆ ಚುನಾವಣೆ: ರಾಜ್ಯದಿಂದ ಕಾಂಗ್ರೆಸ್ಸಿನ ಮೂವರು, ಓರ್ವ ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ ಬಿಪಿಎಲ್ ಮಾತ್ರವಲ್ಲ, ಎಪಿಎಲ್ ಕುಟುಂಬಗಳಿಗೂ ಗುಡ್‌ನ್ಯೂಸ್: ಆರೋಗ್ಯ ಸಚಿವ ಖಾದರ್ ಜಲಸಂಪನ್ಮೂಲ ಖಾತೆಯಲ್ಲೇ ಮುಂದುವರಿಯುವೆ; ನಂಗೆ ಬೆಂಗಳೂರು ಉಸ್ತುವಾರಿಯೂ ಬೇಡ, ಏನೂ ಬೇಡ: ರಾಮಲಿಂಗಾ… ಇಂಡಿಯಾ ಮೈತ್ರಿಕೂಟದ ಸಭೆ: ಎಸ್ ಐಆರ್ ವಿರುದ್ಧ ಸುಪ್ರೀಂಕೋರ್ಟ್ ಸಿಜೆಗೆ ದೂರು ಸೇರಿದಂತೆ… ಮಳೆಗಾಲ ಎಫೆಕ್ಟ್: ಜೂನ್ 10ರಿಂದ ಕೊಡಗು ಜಿಲ್ಲೆಯಲ್ಲಿ ಬುಲೆಟ್ ಟ್ಯಾಂಕರ್ ಸಹಿತ ಭಾರೀ… ಸೈಟ್ ಇಲ್ಲದವರಿಗೆ ಉಚಿತ ಸೈಟ್ ಭಾಗ್ಯ: ಮುಖ್ಯಮಂತ್ರಿ ಡಿಕೆಶಿ ಮಹತ್ವದ ಘೋಷಣೆ Mangaluru | ನೂತನ ಆರೋಗ್ಯ ಸಚಿವ ಯು.ಟಿ.ಖಾದರ್ ಗೆ ಕಡಲನಗರಿಯಲ್ಲಿ ಭಾರೀ ಸ್ವಾಗತ Chikkamagaluru | ಅಧಿಕಾರಿಗಳ ನಿರ್ಲಕ್ಷ: ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿಗೆ ಮುಂದಾದ ಕಡಿದಾಳು… ತೀರ್ಥಹಳ್ಳಿ ತಾಲೂಕಿನ ಫಾರಂ ಹೌಸ್ ನಲ್ಲಿ ಕಳ್ಳತನ: 1 ಲಕ್ಷಕ್ಕೂ ಹೆಚ್ಚು ಮೌಲ್ಯದ…

ಇತ್ತೀಚಿನ ಸುದ್ದಿ

ನೋಂದಣಿ ಪತ್ರ ಸಿದ್ಧವಾಗಿಡಲು ಹೇಳಿ: ಆರೆಸ್ಸೆಸ್ ಕುರಿತು ಬಿಜೆಪಿಗೆ ಗೃಹ ಪ್ರಿಯಾಂಕ್ ಖರ್ಗೆ ಟಾಂಗ್

09/06/2026, 19:05

ಬೆಂಗಳೂರು(reporterkarnataka.com): ತಮಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ‘ರಾಜಕೀಯ ಪಕ್ಷ’ಕ್ಕೆ ನೋಂದಣಿ ಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ತಿಳಿಸಿ ಎಂದು ಅವರು ಬಿಜೆಪಿಗೆ ವ್ಯಂಗ್ಯವಾಡಿದ್ದಾರೆ. ಫೇಸ್‌ಬುಕ್‌ನಲ್ಲಿ ತಮಗೆ ಕೊಲೆ ಬೆದರಿಕೆ ಒಡ್ಡಿದ್ದ ಸುಧೀರ್ ಬಂಗೇರ ಎಂಬಾತನನ್ನು ಕಾರ್ಕಳ ಪೊಲೀಸರು ಬಂಧಿಸಿದ ಬೆನ್ನಲ್ಲೇ ಗೃಹ ಸಚಿವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನನ್ನು ಗುರಿಯಾಗಿಸಲು ಮತ್ತು ಹೆದರಿಸಲು ಬಿಜೆಪಿ ಸಂಘಟನೆಯ ಕಾರ್ಯಕರ್ತರನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ‘ಆರ್‌ಎಸ್‌ಎಸ್ ಇನ್ನು ಮುಂದಾದರೂ ಅಧಿಕೃತವಾಗಿ ನೋಂದಣಿ ಮಾಡಿಕೊಳ್ಳಲು ಸಿದ್ಧತೆ ನಡೆಸಬೇಕು’ ಎಂದು ಸಲಹೆ ನೀಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು