ಇತ್ತೀಚಿನ ಸುದ್ದಿ
ಬೆಂಗಳೂರು ಹಿಂಸಾಚಾರ: ಇಂದು ಕಾರ್ಪೋರೇಟರ್ ಝಾಕೀರ್ ಮತ್ತೆ ವಿಚಾರಣೆ
October 12, 2020, 8:21 AM

ಬೆಂಗಳೂರು(reporterkarnataka news): ನಗರದಲ್ಲಿ ಭೀತಿಯ ಅಲೆ ಸೃಷ್ಚಿಸಿದ್ದ ಕೆ ಜಿ ಹಳ್ಳಿ ಮತ್ತು ಡಿ ಜೆ ಹಳ್ಳಿಯಲ್ಲಿ ನಡೆದ ಹಿಂಸಾಚಾರದ ತನಿಖೆ ಬಿರುಸು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾರ್ಪೋರೇಟರ್ ಝಾಕೀರ್ ಅವರನ್ನು ಇಂದು ಪೊಲೀಸರು ಮತ್ತೆ ವಿಚಾರಣೆ ನಡೆಸಲಿದ್ದಾರೆ.
ಝಾಕೀರ್ ಮೊಬೈಲ್ ನಲ್ಲಿದ್ದ ಮಾಹಿತಿಗಳನ್ನು ಮತ್ತೆ ಸಂಗ್ರಹಿಸಲಾಗಿದೆ. ಕಳೆದ ಬಾರಿ ವಿಚಾರಣೆ ಸಂದರ್ಭದಲ್ಲಿ ಝಾಕೀರ್ ಮೊಬೈಲ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದರು.