ಇತ್ತೀಚಿನ ಸುದ್ದಿ
ಯುವರಾಜ್ ನೀಡಿದ್ದು ಕೇವಲ 15 ಲಕ್ಷ ರೂಪಾಯಿ: ರಾಧಿಕಾ ಕುಮಾರ ಸ್ವಾಮಿ
January 6, 2021, 5:55 PM

ಬೆಂಗಳೂರು(reporterkarnataka news): ವಂಚನೆ ಆರೋಪದಲ್ಲಿ ಬಂಧಿತನಾಗಿರುವ ಯುವರಾಜ್ ನನಗೆ ನೇರವಾಗಿ ಕೇವಲ 15 ಲಕ್ಷ ರೂಪಾಯಿ ಮಾತ್ರ ನೀಡಿದ್ದಾನೆ. ಇದು ನನ್ನ ಬ್ಯಾಂಕ್ ಅಕೌಂಟ್ ಗೆ ಸಂದಾಯವಾದ ಹಣವಾಗಿದೆ.
ಬಳಿಕ ಅವರ ಸಂಬಂಧಿ ಕೂಡ ಸ್ವಲ್ಪ ಹಣ ಜಮೆಮಾಡಿದ್ದಾರೆ. ಯುವ ರಾಜ್ ಅವರ ಪತ್ನಿ ಪ್ರೊಡಕ್ಷನ್ ಹೌಸ್ ಹೊಂದಿದ್ದಾರೆ. ಚಿತ್ರದಲ್ಲಿ ಅಭಿನಯಿಸಲು ಮುಂಗಡವಾಗಿ ಈ ಹಣ ನೀಡಿದ್ದಾರೆ. ಇದರ ಹೊರತಾಗಿ ಬೇರೆ ಯಾವುದೇ ಹಣ ಪಡೆದಿಲ್ಲ ಎಂದು ರಾಧಿಕಾ ಕುಮಾರ ಸ್ವಾಮಿ ಹೇಳಿದ್ದಾರೆ.
ಕಳೆದ 17 ವರ್ಷಗಳಿಂದ ಯುವರಾಜ್ ಪರಿಚಯ ಇದೆ. ಅವರು ಕುಟುಂಬದ ಆಪ್ತರಲ್ಲಿ ಒಬ್ಬರಾಗಿದ್ದಾರೆ ಎಂದು ರಾಧಿಕಾ ಕುಮಾರ ಸ್ವಾಮಿ ಹೇಳಿದ್ದಾರೆ.
ನಿಗಮ ಅಧ್ಯಕ್ಷ ಸ್ಥಾನ ಸೇರಿದಂತೆ ಹಲವು ಭರವಸೆಗಳನ್ನು ನೀಡಿ ಸಾರ್ವಜನಿಕರಿಂದ ಯುವರಾಜ್ ಕೋಟ್ಯಂತರ ರೂಪಾಯಿ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.