ಇತ್ತೀಚಿನ ಸುದ್ದಿ
ಯುವರಾಜ್ ಪ್ರಕರಣ: ನಟಿ ರಾಧಿಕಾ ಕುಮಾರಸ್ವಾಮಿಗೆ ಇಂದು ಸಿಸಿಬಿ ಡ್ರಿಲ್
January 8, 2021, 8:28 AM

ಬೆಂಗಳೂರು(reporterkarnataka news): ವಂಚಕ ಯುವರಾಜ್ ನಿಂದ ಭಾರೀ ಮೊತ್ತದ ಹಣ ಪಡೆದ ಆರೋಪಕ್ಕೆ ಗುರಿಯಾಗಿರುವ ನಟಿ ರಾಧಿಕಾ ಕುಮಾರ ಸ್ವಾಮಿ ಇಂದು ಸಿಸಿಬಿ ವಿಚಾರಣೆ ಎದುರಿಸಲಿದ್ದಾರೆ.
ಪ್ರಕರಣದ ಕುರಿತು ಸಿಸಿಬಿ ಹಿರಿಯ ಅಧಿಕಾರಿಗಳು ಅವರನ್ನು ವಿಚಾರಣೆಗೆ ಗುರಿಪಡಿಸಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟಿಯ ಸಂಭಾವನೆ ಗರಿಷ್ಟ 20 ಲಕ್ಷ ರೂಪಾಯಿಗಳಾಗಿವೆ. ಈಗಿರುವಾಗ ಒಂದು ಚಿತ್ರಕ್ಕೆ 75 ಲಕ್ಷ ಪಡೆದಿರುವುದು ಹಲವು ಸಂಶಯಗಳನ್ನು ಮೂಡಿಸಿದೆ.
ಇದು ಬೇನಾಮಿ ವ್ಯವಹಾರ ಎಂಬ ಸಂಶಯ ತಲೆದೋರಿದೆ.