ಇತ್ತೀಚಿನ ಸುದ್ದಿ
ಯೋಗೀಶ್ ಗೌಡ ಹತ್ಯೆ ಪ್ರಕರಣ: ಇಂದು ಸಿಬಿಐಯಿಂದ ವಿನಯ ಕುಲಕರ್ಣಿ ವಿಚಾರಣೆ
November 7, 2020, 8:20 AM

ಬೆಳಗಾವಿ(reporterkarnataka news): ಬಿಜೆಪಿ ನಾಯಕ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಮಾಜಿ ಸಚಿವ ವಿನಯ ಕುಲಕರ್ಣಿಯನ್ನು ಸಿಬಿಐ ಇಂದು ವಿಚಾರಣೆಗೆ ಗುರಿಪಡಿಸಲಿದೆ. ಸಿಬಿಐ ಅಧಿಕಾರಿಗಳು ಈಗಾಗಲೇ ಹಿಂಡಲಗಾ ಜೈಲಿಗೆ ಆಗಮಿಸಿದ್ದಾರೆ.
ಮೂರು ಮಂದಿ ಅಧಿಕಾರಿಗಳ ತಂಡ ಇಂದು ಮುಂಜಾನೆ ಜೈಲಿಗೆ ಭೇಟಿ ನೀಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜೈಲಿನ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.