4:48 PM Thursday25 - February 2021
ಬ್ರೇಕಿಂಗ್ ನ್ಯೂಸ್
ಅಡುಗೆ ಅನಿಲ ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ: ಒಂದೇ ತಿಂಗಳಲ್ಲಿ 3ನೇ ಬಾರಿ… ಇಂಧನ ಬೆಲೆಯೇರಿಕೆ, ಇ- ವೇ ಬಿಲ್ ಖಂಡಿಸಿ ನಾಳೆ ಭಾರತ ಬಂದ್ :… ಶ್ರೀನಿವಾಸಪುರ: ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿರ್ಮೂಲನೆ ಕಾರ್ಯಕ್ರಮ ರೋವರ್ ನಿಂದ ಮಂಗಳನ ಮಣ್ಣು ಹಾಗೂ ಕಲ್ಲಿನ  ಸ್ಯಾಂಪಲ್ ಸಂಗ್ರಹ: ಹಾಗಾದರೆ ಅದನ್ನು… ಕಟೀಲು ಮೇಳ ಸೇವೆ ಆಟಗಳು: ಎಲ್ಲಿ ಏನೇನು? ನೀವೇ ಓದಿ ನೋಡಿ ತಂಬಾಕು ಜಾಗೃತಿ ಮೂಡಿಸಲು ‘ಗುಲಾಬಿ ಅಭಿಯಾನ’:  ಬೆಳುವಾಯಿ ಶಾಲಾ ಮಕ್ಕಳಿಂದ ಜಾಥಾ ಪೇಜಾವರ ಶ್ರೀಗಳಿಗೆ ಗುರು ವಂದನೆ: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ… ಆವಿಷ್ಕಾರ ಮತ್ತು ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಮಂಗಳೂರು ಅಭಿವೃದ್ಧಿ: ಡಿಸಿಎಂ ಡಾ. ಅಶ್ವಥನಾರಾಯಣ ಜನರು ಮಾಸ್ಕ್ ಧರಿಸದಿದ್ದರೆ ಮತ್ತೆ ಲಾಕ್ ಡೌನ್: ಮುಖ್ಯಮಂತ್ರಿ ನಾಗರಿಕರಿಗೆ ಎಚ್ಚರಿಕೆ ಕೊರೊನಾ ಭಯಕ್ಕೆ ಗಡಿಯಲ್ಲಿ ಹೈ ಅಲರ್ಟ್: ಕರ್ನಾಟಕ – ಮಹಾರಾಷ್ಟ್ರ ಗಡಿಗಳಲ್ಲಿ ಚೆಕ್…

ಇತ್ತೀಚಿನ ಸುದ್ದಿ

ಯೋಗಿ ಆದಿತ್ಯನಾಥ್ ಒಬ್ಬ ರಾಜಕಾರಣಿ, ಸ್ವಾಮೀಜಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ: ದ.ಕ. ಕಾಂಗ್ರೆಸ್

October 15, 2020, 6:11 PM

ಮಂಗಳೂರು(reporterkarnataka news):

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಒಬ್ಬ ರಾಜಕಾರಣಿ. ಅವರನ್ನು ಸ್ವಾಮೀಜಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.

ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿತ್ಯನಾಥ್ ಅವರು ಒಬ್ಬ ರಾಜಕಾರಣಿ. ಅವರನ್ನು ಸ್ವಾಮೀಜಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಕೂಡ ಒಬ್ಬ ರಾಜಕಾರಣಿ. ಹಾಗಾದರೆ ಅವರಿಗೆ ಒಬ್ಬ ಮುಖ್ಯಮಂತ್ರಿಯನ್ನು ಪ್ರಶ್ನಿಸುವ ಹಕ್ಕಿಲ್ಲವೇ ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.

ಮಿಥುನ್ ರೈ ಅವರು ಬಿಜೆಪಿಯಿಂದ ಹಿಂದುತ್ವ ಕಲಿಯಬೇಕೇ ಎಂದು ಪ್ರಶ್ನಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಬಿಜೆಪಿಯವರು ಮಿಥುನ್ ರೈ ಅವರಿಂದ ಹಿಂದುತ್ವ, ಸಾಮಾಜಿಕ ನ್ಯಾಯ, ಎಲ್ಲ ಧರ್ಮವನ್ನು ಹೇಗೆ ಪ್ರೀತಿಸಬೇಕೆಂಬುವುದನ್ನು ಕಲಿಯಬೇಕು. ದ್ವೇಷದ ರಾಜಕಾರಣ ಒಳ್ಳೆಯದಲ್ಲ. ಟೀಕೆಗಳನ್ನು ಎದುರಿಸುವ ಶಕ್ತಿ ಇರಬೇಕು ಎಂದು ನುಡಿದರು.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಂಗಳೂರಿಗೆ ಬಂದರೆ ಮಸಿ‌ ಬಳಿಯುತ್ತೇವೆ ಎಂದು ಹೇಳಿಕೆ ನೀಡಿದ್ದ ದಕ್ಷಿಣ ಕನ್ನಡ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ವಿರುದ್ಧ ‌ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ದೂರು ನೀಡಿದ್ದು, ಇದನ್ನು ಖಂಡಿಸಿ ಹರೀಶ್ ಕುಮಾರ್ ಪ್ರತಿಕ್ರಿಯೆ ನೀಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು