6:12 PM Monday18 - January 2021
ಬ್ರೇಕಿಂಗ್ ನ್ಯೂಸ್
ಮಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್ : ಇಬ್ಬರು ಯುವತಿಯರು ಸೇರಿದಂತೆ 4… ಹಳ್ಳಿ ಹಳ್ಳಿಗೂ ಬಿಜೆಪಿ ಬೇರು ವ್ಯಾಪಿಸಿರುವುದು ಗ್ರಾಮ ಪಂಚಾಯಿತಿ ಚುನಾವಣೆಯಿಂದ ಸಾಬೀತು: ನಳಿನ್… ರಾಜ್ಯವೇ ಬೆಚ್ಚಿ ಬೀಳುವ ರೀತಿಯಲ್ಲಿ ಕಾಂಗ್ರೆಸ್ – ಜೆಡಿಎಸ್ ನೆಲಸಮ: ಬೆಳಗಾವಿ ಸಮಾವೇಶದಲ್ಲಿ… ಮೋದಿ- ಬಿಎಸ್ ವೈ ಜೋಡಿಗೆ ಜನರ ಆಶೀರ್ವಾದ: ಬೆಳಗಾವಿಯಲ್ಲಿ ಗೃಹ ಸಚಿವ ಅಮಿತ್… ವೆನ್ಲಾಕ್ ಆಸ್ಪತ್ರೆಯಲ್ಲಿ ಎಂ ಫ್ರೆಂಡ್ಸ್ ನ ಕಾರುಣ್ಯ ಯೋಜನೆಗೆ ಜಾಗತಿಕ ಬಂಟರ ಸಂಘಗಳ… ಸಚಿವ ಅಂಗಾರ ತವರಿನಲ್ಲಿ ಕಮಲ ಕದನ: ಬಿಜೆಪಿ ಶಕ್ತಿ ಕೇಂದ್ರದಿಂದ ಸುಳ್ಯ ಮಂಡಲ ಸಮಿತಿಗೆ… ಇಟಗಿಹಾಳ: ಮಧ್ಯದಂಗಡಿ ತೆರವಿಗೆ ಆಗ್ರಹಿಸಿ 3ನೇ ಬಾರಿ ಗ್ರಾಮಸ್ಥರಿಂದ ಭಾರಿ ರಸ್ತೆ ತಡೆ… ಕಾಮಾಜೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ವಿವೇಕಾ ಸಂದೇಶ 2021’ ಕಾರ್ಯಕ್ರಮ ರಾಜ್ಯದ ಎಲ್ಲ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ ಭದ್ರಾವತಿ: ಕ್ಷಿಪ್ರ ಕಾರ್ಯಪಡೆ ಕಚೇರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೂಮಿ…

ಇತ್ತೀಚಿನ ಸುದ್ದಿ

ಏಷ್ಯಾದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಮಂಗಳೂರು !! ಹಾಗಾದರೆ ಏನೆಲ್ಲ ಬದಲಾಗಿದೆ?

August 15, 2020, 3:06 AM

ಅಶೋಕ್ ಕಲ್ಲಡ್ಕ ಮಂಗಳೂರು

info.reporterkarnataka.com

ಮಂಗಳೂರು ಬದಲಾಗುತ್ತಿದೆ….ಕುಡ್ಲ ಅಂದರೆ ಬರೀ ಹಂಪನಕಟ್ಟೆ, ಹಳೆ ಬಂದರು, ಕಾರ್ ಸ್ಟ್ರೀಟ್ ಎಂಬ ಕಾಲವೊಂದಿತ್ತು. ಈಗ ಕಾಲ ಬದಲಾಗಿದೆ. ಮಂಗಳೂರು ಬೆಳೆದಿದೆ.  ವಿಕೇಂದ್ರೀಕರಣದತ್ತ ನಗರ ಸಾಗುತ್ತಿದೆ.

ಕಡಲನಗರಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕಳೆದ ಮೂರು ದಶಕಗಳಲ್ಲಿ ಇಲ್ಲಿ ಎಷ್ಟೆಲ್ಲ ಬದಲಾವಣೆಯಾಗಿದೆ ಎನ್ನುವುದನ್ನು ಲೆಕ್ಕ ಇಡುವುದೇ ಕಷ್ಟ. ದೇಗುಲಗಳ ಕಲ್ಲು ಹಾಸುಗಳು ಹೋಗಿ ಗ್ರಾನೈಟ್ ಬಂದಿವೆ. ಹಳೆ ಕಟ್ಟಡಗಳ ಜಾಗದಲ್ಲಿ ಮಾಲ್ ಗಳು, ಕಮರ್ಶಿಯಲ್ ಕಾಂಪ್ಲೆಕ್ಸ್ ಗಳು ತಲೆ ಎತ್ತಿವೆ. ಹಳೆಯ ಚಿತ್ರಮಂದಿರಗಳ ಸ್ಥಳವನ್ನು ಮಲ್ಟಿಪ್ಲೆಕ್ಸ್ ಗಳು ಆಕ್ರಮಿಸಿವೆ. ಗೇರುಬೀಜ, ಹೆಂಚಿನ ಕಾರ್ಖಾನೆ ಜಾಗಕ್ಕೆ ಬೃಹತ್ ಕೈಗಾರಿಕೆಗಳು ವಕ್ಕರಿಸಿವೆ. ಕನ್ನಡ ಶಾಲೆಗಳ ಜಾಗದಲ್ಲಿ ಇಂಗ್ಲಿಷ್ ಮೀಡಿಯಂ ಶಾಲೆಗಳು ಬಂದಿವೆ. ಮಂಗಳೂರು ಆಕಾಶವಾಣಿಯನ್ನು ಖಾಸಗಿ ಎಫ್ ಎಂಗಳು ನುಂಗಿ ಹಾಕಿವೆ. ದೂರದರ್ಶನವನ್ನು ನೂರೆಂಟು ಚಾನೆಲ್ ಗಳು ನಾಮಾವಶೇಷ ಮಾಡಿದೆ. ಮಕ್ಕಳು ಇಡ್ಲಿ, ದೋಸೆ ಬದಲು ಫಿಜಾ, ಬರ್ಗರ್ ತಿನ್ನುತ್ತಿದ್ದಾರೆ. ಶಾಮಿಗೆಯನ್ನು ನೂಡಲ್ಸ್ ಅಣಕಿಸುತ್ತಿದೆ.

ಇದೀಗ ಏಷ್ಯಾ ಖಂಡದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆರಳೆಣಿಕೆಯ ನಗರಗಳಲ್ಲಿ ಮಂಗಳೂರು ಒಂದು. ಇದು ಕಡಲನಗರಿಯ ಹಿರಿಮೆಯೂ ಹೌದು. ಭೂ, ರೈಲ್ವೆ, ವಾಯು ಹಾಗೂ ಜಲ ಸಾರಿಗೆಯನ್ನು ಹೊಂದಿದ ಕರ್ನಾಟಕದ ಏಕೈಕ ನಗರ ಕೂಡ ಇದೇ ಆಗಿದೆ.

ಮಂಗಳೂರಿನ ಬಹುತೇಕ ರಸ್ತೆಗಳು ಡಾಮಾರಿನಿಂದ ಕಾಂಕ್ರೀಟಿಗೆ ಪರಿವರ್ತನೆಗೊಂಡಿದೆ. ನಗರಕ್ಕೆ ಅಂಟಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಗಳು ಚತುಷ್ಪಥಗೊಂಡಿದೆ. ಕುಂಟಿಕಾನ, ಕೊಟ್ಟಾರಚೌಕಿ, ಕೂಳೂರು ಜಂಕ್ಷನ್ ನಲ್ಲಿ ಫ್ಲೈ ಓವರ್‌ ಮೇಲೆ ವಾಹನಗಳು ಓಡಾಡುತ್ತಿವೆ. ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿಯ ಸ್ಮಶಾನ ಪ್ರದೇಶದಲ್ಲಿ ಮೆಸ್ಕಾಂ ಕಚೇರಿ ಬಂದಿದೆ. ಸಣ್ಣ ಸಣ್ಣ ತರಕಾರಿ ಅಂಗಡಿಗಳನ್ನು ಬಿರ್ಲಾ ಗ್ರೂಪ್ ನ ಮಳಿಗೆಗಳು ನುಂಗಿ ನೀರು ಕುಡಿದಿವೆ. ಚಪ್ಪಲಿ ಅಂಗಡಿಗೆ ರಿಲಯನ್ಸ್ ಫೂಟ್ ವೇರ್ ಸ್ಪರ್ಧೆ ನೀಡುತ್ತಿದೆ.

ನಗರದ ಕೆಎಸ್ ರಾವ್ ರೋಡ್ ಮೂರು ದಶಕಗಳ ಹಿಂದೆ ಕಮರ್ಷಿಯಲ್ ಸ್ಟ್ರೀಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ರಸ್ತೆಗೆ ತಾಗಿಕೊಂಡೇ 80ರ ದಶಕದ ಆದಿಭಾಗದವರೆಗೆ ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣಗಳಿದ್ದವು. ರಸ್ತೆಯ ಮತ್ತೊಂದು ಬದಿಯಲ್ಲಿ ಹಳೆಯ ವಿಶ್ವಭವನ ಹೋಟೆಲ್ ಇತ್ತು. ಇದೀಗ ಆ ಜಾಗದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಮಿಸ್ ಚೀಫ್ ಮಾಲ್ ಬಂದಿದೆ. ವುಡ್ ಸೈಡ್ ಪ್ರದೇಶ ಸಿಟಿ ಸೆಂಟರ್ ಆಗಿ ಬದಲಾಗಿದೆ. ಲ್ಯಾಂಡ್ ಫೋನ್ ಗಳೇ ಅಪರೂಪವಾಗಿದ್ದ ಆ ದಿನಗಳಲ್ಲಿ ಬಂಧುಗಳ, ಸ್ನೇಹಿತರ ಸಮಾಗಮಕ್ಕೆ ಹಂಪನಕಟ್ಟೆ ಹಳೆ ಬಸ್ ನಿಲ್ದಾಣ, ವಿಶ್ವಭವನ ಅಥವಾ ಮೋಹಿನಿ ವಿಲಾಸ ಹೋಟೆಲ್ ವೇದಿಕೆ ಒದಗಿಸುತ್ತಿತ್ತು. ಇದೀಗ ಮೀಟಿಂಗ್ ಪಾಯಿಂಟ್ ಮಾಲ್ ಗಳಾಗಿ ಬದಲಾಗಿವೆ.

ಇತ್ತೀಚಿನ ಸುದ್ದಿ

ಜಾಹೀರಾತು