1:15 PM Sunday28 - February 2021
ಬ್ರೇಕಿಂಗ್ ನ್ಯೂಸ್
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಸಚಿವ ಅಂಗಾರ ತವರಿನಲ್ಲಿ ಭಿನ್ನಮತ ಸ್ಫೋಟ: 3 ಮಂದಿ ಹಿರಿಯ ನಾಯಕರು ಬಿಜೆಪಿಯಿಂದ… ಅಥಣಿ ತಾಲೂಕಿನ ರಡೇರಹಟ್ಟಿ ಗ್ರಾಮದಲ್ಲಿ  ಆಕಸ್ಮಿಕವಾಗಿ ಬೆಂಕಿ ತಗುಲಿ ಗುಡಿಸಲು ಭಸ್ಮ: 4… ಒಂದೂವರೆ ತಿಂಗಳ ಅವಧಿಯಲ್ಲಿ 10 ಬಾರಿ ಇಂಧನ ದರ ಏರಿಕೆ: ಕೆಪಿಸಿಸಿ ಅಧ್ಯಕ್ಷ… ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆ: ಮಿನಿ ವಿಧಾನ ಸೌಧದ ಎದುರು ಎಬಿವಿಪಿ ಪ್ರತಿಭಟನೆ;… ಮಂಗಳೂರು ಮಹಾನಗರಪಾಲಿಕೆ  2020-21ನೇ  ಸಾಲಿನ ತೆರಿಗೆ ಪೂರ್ತಿ ಪಾವತಿಸಿದರೆ ಶೇ. 5% ವಿನಾಯಿತಿ ಮಹಿಳಾ ಸಿಬ್ಬಂದಿಗೆ ಮಾನಸಿಕ ಕಿರುಕುಳ ಪ್ರಕರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಕಾನೂನಿನ ಸಮರ್ಪಕ ಜಾರಿಯಿಂದ ಮಾತ್ರ ಸಮಾಜದಲ್ಲಿ ಅಪರಾಧಗಳನ್ನು ನಿಯಂತ್ರಿಸಲು ಸಾಧ್ಯ: ಗಾಂವ್ಕರ್ ಪಂಚ ರಾಜ್ಯಗಳ ಎಲೆಕ್ಷನ್ ಘೋಷಣೆ: ಪಶ್ಚಿಮ ಬಂಗಾಳದಲ್ಲಿ 8 ಹಂತಗಳ ಚುನಾವಣೆ; ಮೇ…

ಇತ್ತೀಚಿನ ಸುದ್ದಿ

ಏನಿದು ಮಹಾಲಯ ಅಮಾವಾಸ್ಯೆ?: ಪಿತೃ ಪಕ್ಷ ಎಂದರೇನು? ಯಾಕಾಗಿ ಇಂದು ಪಿಂಡ ಪ್ರದಾನ ಮಾಡುತ್ತಾರೆ? 

September 17, 2020, 9:35 AM

ಮಂಗಳೂರು(reporterkarnataka news):

ಮಹಾಲಯ ಅಮಾವಾಸ್ಯೆ ಇಂದು ಆಚರಿಸಲಾಗುತ್ತಿದೆ. ಕರಾವಳಿಯಲ್ಲಿ ಕೂಡ ಮಹಾಲಯ ಅಮಾವಾಸ್ಯಗೆ ಬಹಳ ಪ್ರಾಧನ್ಯತೆ ಇದೆ.  ಗತಿಸಿದ ಹಿರಿಯರ ನೆನಪಿಸಿ ಅವರಿಗೆ ಇಂದು ಪಿಂಡ ಪ್ರದಾನ ಮಾಡಲಾಗುತ್ತದೆ. 

ಪಿತೃ ಪಕ್ಷಕ್ಕೂ ಮಹಾಭಾರತ ಕರ್ಣನಿಗೂ ಏನೋ ನಂಟು. ಕರ್ಣ ಸತ್ತ ನಂತರವೂ ಭೂಮಿಗೆ ಬಂದಿದ್ದ ಆ 14 ದಿನಗಳೇ ಬಾದ್ರಪದ ಮಾಸದ ಕೃಷ್ಣ ಪಕ್ಷದ ಪಿತೃಪಕ್ಷ.

ಕರ್ಣ ಎಂದ ಕೂಡಲೇ ನಮ್ಮ ಕಣ್ಣೆದುರಿಗೆ ಬರುವುದು ಮಹಾನ್ ದಾನಿ, ಮಹಾಭಾರತದ ದುರಂತ ನಾಯಕ. ಗತಿಸಿದ ನಂತರವೂ ಭೂಲೋಕಕ್ಕೆ ಬಂದಿದ್ದನಂತೆ ಕರ್ಣ. ಭಾದ್ರಪದ ಮಾಸದ ಕೃಷ್ಣ ಪಕ್ಷದಲ್ಲಿ ಕರ್ಣ ಭೂಲೋಕಕ್ಕೆ ಬಂದಿದ್ದನಂತೆ.

ಯಮ ಪುರಿಯಿಂದ ಭೂಲೋಕಕ್ಕೆ ಬಂದಿದ್ದ ಕರ್ಣ 14 ದಿನಗಳ ಕಾಲ ವಾಸ್ತವ್ಯ ಇಲ್ಲಿಯೇ ಹೂಡಿದ್ದನಂತೆ. ಆ 14 ದಿನಗಳೇ ಮಹಾಲಯ ಪಕ್ಷದ ಬಾದ್ರಪದ ಮಾಸದ 14 ದಿನಗಳು ಎಂದು ಹೇಳಲಾಗುತ್ತದೆ. 

ಯಮನಿಂದ ಅನುಮತಿಯನ್ನು ಪಡೆದು ಭೂಲೋಕಕ್ಕೆ ಬಂದು 14 ದಿನಗಳ ಕಾಲ ಭೂಲೋಕದಲ್ಲಿ ಇದ್ದು, ಹಿರಿಯರಿಗೆ ,ಬಡವರಿಗೆ ಯತೇಚ್ಛವಾಗಿ ಅನ್ನ-ನೀರು ಭೋಜನ, ವಸ್ತ್ರ ದಾನ ಮಾಡಿದ. ಅಪಾರವಾದ ಪುಣ್ಯ ಸಂಪಾದನೆ ಮಾಡಿ ಮತ್ತೆ ಸ್ವರ್ಗ ಲೋಕಕ್ಕೆ ಮರಳಿದನಂತೆ ಕರ್ಣ. 

ಭಾದ್ರಪದ ಮಾಸದ, ಕೃಷ್ಣ ಪಕ್ಷವನ್ನು, ಪಿತೃಪಕ್ಷ ಅಥವಾ ಮಹಾಲಯ ಪಕ್ಷ ಎಂದು ಕರೆಯಲಾಗುತ್ತದೆ. ಪಿತೃ ಪಕ್ಷದ ಈ ಹದಿನೈದು ದಿನಗಳ ಕಾಲ ನಮ್ಮನ್ನು ಅಗಲಿದ ಹಿರಿಯರಿಗೆ ಶ್ರಾದ್ಧ ಕಾರ್ಯ ಮತ್ತು ತರ್ಪಣವನ್ನು ಕೊಡಲಾಗುತ್ತದೆ. ಪಿತೃಪಕ್ಷದ ಕೊನೆಯ ದಿನವಾದ ಅಮಾವಾಸ್ಯೆಗೆ “ಮಹಾಲಯ ಅಮಾವಾಸ್ಯೆ” ಎಂದು ಹೇಳಲಾಗುತ್ತದೆ. ಇದಕ್ಕೆ “ಸರ್ವಪಿತೃ ಅಮಾವಾಸ್ಯೆ” ಎಂದೂ ಕೂಡ ಹೆಸರಿದೆ. ಪಿತೃಗಳಿಗೆ ಶ್ರಾದ್ಧ ಕಾರ್ಯ ಮಾಡುವುದರಿಂದ ಹಿರಿಯರಿಗೆ ಸಂಪೂರ್ಣ ಚೈತನ್ಯ ಸಿಗುತ್ತದೆ. ಇದರಿಂದ ಸಂತೃಪ್ತರಾಗುವ ಪಿತೃಗಳು ಸಂಪೂರ್ಣವಾಗಿ ಇಡೀ ಕುಟುಂಬಕ್ಕೆ ಆಶೀರ್ವಾದ ಮಾಡುತ್ತಾರೆ. ಈ ಬಗ್ಗೆ ಧರ್ಮ ಶಾಸ್ತ್ರದಲ್ಲಿ ಪುರಾಣಗಳಲ್ಲಿ ಹಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ.

ಪಿತೃ ಪಕ್ಷದಲ್ಲಿ ಅನ್ನ ದಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಪಿತೃಪಕ್ಷದಲ್ಲಿ ಪಿಂಡ ಪ್ರಧಾನ, ತರ್ಪಣಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ, ಅಷ್ಟೇ ಪ್ರಾಮುಖ್ಯತೆ ಅನ್ನದಾನಕ್ಕೆ ಇದೆ. 

ಇತ್ತೀಚಿನ ಸುದ್ದಿ

ಜಾಹೀರಾತು