7:00 AM Friday4 - December 2020
ಬ್ರೇಕಿಂಗ್ ನ್ಯೂಸ್
ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ತಡವೇಕೆ?: ಮಾಜಿ ಸಚಿವ ಖಾದರ್… ದೋಣಿ ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ತಲಾ 6 ಲಕ್ಷ ರೂ. ಪರಿಹಾರ… ರೈತರ ಬೆಂಬಲಕ್ಕೆ ನಿಂತ ಅಕಾಲಿ ನಾಯಕ  ಬಾದಲ್ :  ಪದ್ಮವಿಭೂಷಣ ಪ್ರಶಸ್ತಿ ವಾಪಸ್ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕನಕ ಜಯಂತಿ ಆಚರಣೆ ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ: ಫುಡ್ ಡೆಲಿವರಿ ಬಾಯ್ ಪೊಲೀಸ್ ವಶಕ್ಕೆ ಪಿಎಫ್ಐ ಅಧ್ಯಕ್ಷರ ಎರಡೂ ನಿವಾಸಗಳ ಮೇಲೆ ಇಡಿ ದಾಳಿ: ಶೋಧ ಕಾರ್ಯ ಆರಂಭ ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣ: ಓರ್ವನ ವಿಚಾರಣೆ ಆರದಿರಲಿ ಬದುಕು ಆರಾಧನ ತಂಡದ ನವೆಂಬರ್ ತಿಂಗಳ ಸಹಾಯ ಧನ ಹಸ್ತಾಂತರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ರೈತ ಮುಖಂಡರೊಂದಿಗೆ ಇಂದು ಕೇಂದ್ರ ಸರಕಾರ ಚರ್ಚೆ: 35 ಸಂಘಟನೆಗಳಿಗೆ ಆಹ್ವಾನ

ಇತ್ತೀಚಿನ ಸುದ್ದಿ

ಏನಿದು ಕಪಲ್ ಚಾಲೆಂಜ್…?  ಇದರ ಉದ್ದೇಶವೇನು? ಎಲ್ಲಿ ಆರಂಭವಾಯಿತು?  

September 24, 2020, 8:13 AM

ಅಶೋಕ್ ಕಲ್ಲಡ್ಕ ಮಂಗಳೂರು

info.reporterkarnataka @gmail.com

ಇದೀಗ ಸೊಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ವೈರಲ್ ಆಗುತ್ತಿರುವ ವಿಷಯ ಅಂದ್ರೆ ಕಪಲ್ ಚಾಲೆಂಜ್. ಫೇಸ್ ಬುಕ್ ತೆರೆದಾಗಲೆಲ್ಲ ಗಂಡ-ಹೆಂಡತಿ ಫೋಟೋ ಕಪಲ್ ಚಾಲೆಂಜ್ ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಕಾಣಸಿಗುತ್ತದೆ. ಕೆಲವು ಮಿತ್ರರ ಹೆಂಡಿರನ್ನು ಹಾಗೂ ಕೆಲವರ ಗಂಡಂದಿರನ್ನು ಬಹಳ ಅಪರೂಪದಲ್ಲಿ ಕಾಣುವ ಸೌಭಾಗ್ಯ ಒದಗಿಬಂದಿದೆ.

ಹಾಗಾದರೆ ಕಪಲ್ ಚಾಲೆಂಜ್ ಅಂದ್ರೆ ಏನು?  ಇದು ಹುಟ್ಟಿಕೊಂಡದ್ದು ಎಲ್ಲಿ?  ಇದರ ಉದ್ದೇಶವೇನು ಎಂಬುದನ್ನು ತಿಳಿದುಕೊಳ್ಳುವುದು ಬೇಡ್ವೇ? ಹಾಗಾದರೆ ಮುಂದಕ್ಕೆ ಓದಿ.

ಹಾಲಿವುಡ್ ನ ಜನಪ್ರಿಯ ಜೋಡಿ ಜೆನ್ನಿಫರ್ ಮತ್ತು ಅಲೆಕ್ಸ್ ಅವರು ಕಪಲ್ ಚಾಲೆಂಜ್ ಕಾನ್ಸೆಪ್ಟ್ ಹುಟ್ಟು ಹಾಕಿದರು. ಇದನ್ನು ಯಾವಾಗ ಮತ್ತೆ ಯಾಕೆ ಹುಟ್ಟು ಹಾಕಿದರು ಗೊತ್ತೇ ?

ಕೊರೊನಾ ಸೋಂಕಿನಿಂದ ಇಡೀ ವಿಶ್ವ ಲಾಕ್ ಡೌನ್ ನತ್ತ ಮುಖ ಮಾಡುವಾಗ ಈ ದಂಪತಿಗೆ ಕಪಲ್ ಚಾಲೆಂಜ್ ಹೊಳೆಯಿತು. ಇದು ಒಂದು ರೀತಿಯಲ್ಲಿ ಲಾಕ್ ಡೌನ್ ನಿಂದ ಉಂಟಾಗಿರುವ ಬೋರ್, ಬೇಸರನ್ನು ಮರೆಮಾಡಲು ಶುರು ಮಾಡಿದರು.

ದಂಪತಿ ನಡುವಿನ ಕೆಮಿಸ್ಟ್ರೀಯೇ ಈ ಚಾಲೆಂಜ್ ನ ಮುಖ್ಯ ಉಸಿರು. ಇದರೊಂದಿಗೆ ತಮಾಷೆಯೂ ಸೇರಿರುತ್ತದೆ. ಟಿಕ್ ಟಾಕ್ ಆ್ಯಪ್ ಬಳಸಿ ಈ ಅಸ್ತ್ರವನ್ನು ಮೊದಲಿಗೆ ಎಸೆಯಲಾಯಿತು. ವಿದೇಶದಲ್ಲಿ ಇದು ತುಂಬಾ ಜನಪ್ರಿಯತೆಗಳಿಸಿತ್ತು.

ಆದರೆ ಟಿಕ್ ಟಾಕ್ ಬ್ಯಾನ್ ಆದ ಬಳಿಕ ಫೇಸ್ ಬುಕ್ ನಲ್ಲಿ ಫೋಟೋಸ್ ಅಪ್ ಲೋಡ್ ಮಾಡಲು ಶುರುವಾಯಿತು. ಇದೀಗ ದಿನಾ ಬೆಳಗಾದರೆ ಅದರ ಭಾಗವಾಗಿ ನಾವು ದಂಪತಿಗಳ ನಗುಮೊಗದ ಫೋಟೋಗಳನ್ನು ನೋಡುತ್ತಿದ್ದೇವೆ.

ಇತ್ತೀಚಿನ ಸುದ್ದಿ

ಜಾಹೀರಾತು