ಇತ್ತೀಚಿನ ಸುದ್ದಿ
ಎಲ್ಲೆಡೆ ಕ್ರಿಸ್ಮಸ್, ಭಾರಿ ಖುಷ್ ಖುಷ್: ತುಳುನಾಡಿನಲ್ಲಿ ಕುಸ್ವಾರ್ ಘಮಘಮ
December 24, 2020, 12:25 PM

ಮಂಗಳೂರು(reporterkarnataka): ನಾಡಿನಾದ್ಯಂತ ಕ್ರಿಸ್ಮಸ್ ಸಂಭ್ರಮ ಉತ್ತುಂಗಕ್ಕೇರಿದೆ. ಚರ್ಚ್, ಮನೆಗಳ ಮುಂದೆ ವಿವಿಧ ರೀತಿಯ ಕ್ರಿಬ್(ಗೋದೋಳಿ)ಗಳು ತಲೆ ಎತ್ತುವೆ. ಚರ್ಚ್, ಮನೆಗಳೆಲ್ಲ ವಿದ್ಯುತ್ ದೀಪದಿಂದ ಅಲಂಕಾರಗೊಂಡಿವೆ. ಮನೆ ಮನೆಗಳಲ್ಲಿ ಘಮಘಮ ಪರಿಮಳ ಬೀರುವ ತಿಂಡಿಗಳು ಸಿದ್ಧವಾಗಿವೆ.
ಕ್ರಿಸ್ಮಸ್ ಹಬ್ಬದ ತಿಂಡಿಗಳಲ್ಲಿ ಕೇಕ್ ಮತ್ತು ಕುಸ್ವಾರ್ ಪ್ರಧಾನ ಪಾತ್ರ ವಹಿಸುತ್ತವೆ. ಕರಾವಳಿಯ
ಯಾವುದೇ ಭಾಗಕ್ಕೆ ಹೋದರೂ ಕೂಡ ಕ್ರಿಸ್ಮಸ್ ಕುಸ್ವಾರ್ ಎಂದು ಹೇಳುತ್ತಾ ತುಳುನಾಡಿನ ಕ್ರೈಸ್ತರು ಸಿಹಿ ತಿಂಡಿಯನ್ನು ನೀಡುತ್ತಾರೆ. ಇದು ವಿಶೇಷವಾಗಿ ತುಳುನಾಡಿನಲ್ಲಿ ಮಾತ್ರ ಕಾಣಸಿಗುತ್ತದೆ. ಉಳಿದ ಭಾಗದಲ್ಲಿ ಕ್ರಿಸ್ಮಸ್ ಕೇಕ್ ನೀಡುವ ಪರಿಪಾಠವಿದೆ. ಕುಸ್ವಾರ್ ಬಹಳಷ್ಟು ಮನೆಯಲ್ಲಿಯೇ ತಯಾರಿಸುತ್ತಾರೆ.
ಕುಟುಂಬದ ಸದಸ್ಯರು ಜತೆಯಾಗಿ ಸೇರಿಕೊಂಡು ಇಂತಹ ಸಿಹಿ ತಿಂಡಿ ತಯಾರಿಸುತ್ತಾರೆ. ಸಿಟಿ ಲೈಫ್ ನ ಬ್ಯುಸಿ ಕೆಲಸದಲ್ಲಿ ಇರುವವರು ಮಾತ್ರ ಬೇಕರಿಗಳಿಂದ ತಂದು ಕೊಡುವ ಕೆಲಸ ಮಾಡುತ್ತಾರೆ. ಏನೇ ಅಗಲಿ ಕಿಸ್ಮಸ್ ಸಮಯ ದ ಕುಸ್ವಾರ್ ನಿಜಕ್ಕೂ ತುಂಬಾ ಉತ್ತಮವಾಗಿರುತ್ತದೆ.
#kuswar #chrismas #reporterkarnataka #karnataka #Indian Christian #kudla #mangalore