ಇತ್ತೀಚಿನ ಸುದ್ದಿ
ಯತ್ನಾಳ್ ವಿರುದ್ದ ಅರುಣ್ ಸಿಂಗ್ ಗೆ ದೂರು: ಬಹಿರಂಗ ಹೇಳಿಕೆ ನಿರ್ಬಂಧಿಸಲು ಒತ್ತಾಯ
January 2, 2021, 3:10 PM

ಬೆಂಗಳೂರು(reporterkarnataka news): ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರಾಜ್ಯ ಬಿಜೆಪಿ ನಾಯಕರು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರಿಗೆ ದೂರು ನೀಡಿದ್ದಾರೆ.
ಯತ್ನಾಳ್ ಅವರ ಬಹಿರಂಗ ಹೇಳಿಕೆಯಿಂದ ಪಕ್ಷ ಮುಜುಗರ ಅನುಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡದಂತೆ ನಿರ್ಬಂಧಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪಕ್ಷದ ವಿಶೇಷ ಸಭೆಯಲ್ಲಿ ಭಾಗವಹಿಸಲು ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಿದ್ದಾರೆ. ಇದೀಗ ಶಿವಮೊಗ್ಗ ತಲುಪಿರುವ ಅರುಣ್ ಸಿಂಗ್ ವಿಶೇಷ ಸಭೆಯಲ್ಲಿ ಭಾಗವಹಿಸಲಿದ್ದಾರೆ.