ಇತ್ತೀಚಿನ ಸುದ್ದಿ
ಸಚಿವ ಅಲ್ಲ, ಎಮ್ಮೆಲ್ಲೆ ಆಗಲೂ ನೀನು ನಾಲಾಯಕ್ಕು: ಸಚಿವರಿಗೆ ಏಕ ವಚನದಲ್ಲೇ ಬೈದ ಬಿಜೆಪಿ ಶಾಸಕ ಯಾರು?
September 21, 2020, 8:37 PM

ಬೆಂಗಳೂರು(reporterkarnataka news) ವಿಧಾನಸಭೆ ಅಧಿವೇಶನದ ಮೊದಲ ದಿನವೇ ಆಡಳಿತ ಪಕ್ಷ ಬಿಜೆಪಿಯ ಸಚಿವ- ಶಾಸಕರು ಎಗರಾಡಿಕೊಂಡಿದ್ದಾರೆ. ಏಕ ವಚನದಲ್ಲಿ ಪರಸ್ಪರ ನಿಂದಿಸಿಕೊಂಡ ಅವರು ಕೈಕೈ ಮಿಲಾಯಿಸಲು ಕೂಡ ಸಿದ್ದರಾಗಿದ್ದರು.
ಇದೆಲ್ಲ ನಡೆದದ್ದು ರಾಜ್ಯ ವಿಧಾನಸಭೆ ಸೆಂಟ್ರಲ್ ಹಾಲ್ ಲಾಂಜ್ ನಲ್ಲಿ. ಟೀ ಬ್ರೇಕ್ ಸಮಯದಲ್ಲಿ ಸಚಿವ ನಾರಾಯಣ ಗೌಡ ಹಾಗೂ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ನಡುವೆ ಸಮರ ನಡೆದಿದೆ. ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಅವರು ತನ್ನದೇ ಪಕ್ಷದ ಸಚಿವ ನಾರಾಯಣ ಗೌಡ ಅವರ ಮೇಲೆ ಹರಿಹಾಯ್ದಿದ್ದಾರೆ. ನೀನು ಸಚಿವ ಅಲ್ಲ, ಎಂ ಎಲ್ ಎ ಆಗಲು ಕೂಡ ನಾಲಾಯಕ್ಕು ಎಂದು ನಿಂದಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ನಾರಾಯಣ ಗೌಡ ಅವರು ಕೂಡ ಏಕ ವಚನದಲ್ಲೇ ಬೆಳ್ಳಿ ಪ್ರಕಾಶ್ ಅವರನ್ನು ಬೈದಿದ್ದಾರೆ. ಇನ್ನೇನು ದೈಹಿಕ ಹಲ್ಲೆ ನಡೆಯುತ್ತದೆ ಎನ್ನುವಷ್ಟರಲ್ಲಿ ಮಿಕ್ಕ ಶಾಸಕರು ಮಧ್ಯ ಪ್ರವೇಶಿಸಿ ಘಟನೆಯನ್ನು ತಣ್ಣಗೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ.
ಸಚಿವ ನಾರಾಯಣ ಗೌಡ ಅವರು ತನ್ನ ಕ್ಷೇತ್ರಕ್ಕೆ ಸರಿಯಾಗಿ ಅನುದಾನ ಮಂಜೂರು ಮಾಡುತ್ತಿಲ್ಲ ಎನ್ನುವುದು ಬೆಳ್ಳಿ ಪ್ರಕಾಶ್ ಅವರ ಆರೋಪವಾಗಿದೆ.