8:18 PM Wednesday25 - November 2020
ಬ್ರೇಕಿಂಗ್ ನ್ಯೂಸ್
ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾಗಿ ಭೃಂಗೀಶ್ ನೇಮಕ ಡಿಸೆಂಬರ್ 5 ರಾಜ್ಯ ಬಂದ್:  ಕನ್ನಡ ಪರ ಸಂಘಟನೆಗಳ ಸಭೆ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಶ್ರೀರಾಮುಲು ಭೇಟಿ ಕಾಂಗ್ರೆಸ್ ನ ತಂತ್ರಗಾರಿಕೆ ನಾಯಕ ಅಹಮ್ಮದ್ ಪಟೇಲ್ ಮಾರಕ ಕೊರೊನಾಕ್ಕೆ ಬಲಿ ನಿವಾರ್ ಚಂಡಮಾರುತ: ರಾಜ್ಯದ ಹಲವೆಡೆ ಇನ್ನೆರಡು ದಿನ ಭಾರೀ ಮಳೆ ನಿರೀಕ್ಷೆ, ಯಲ್ಲೋ… ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಬಯಲು: ಬೆಂಗಳೂರಿನಲ್ಲಿ ಬೃಹತ್  ಪ್ರಮಾಣದ ಮಾದಕ ದ್ರವ್ಯ ವಶ ಒಂದೇ ದಿನ ಮಾರಕ ಕೊರೊನಾಕ್ಕೆ 480 ಬಲಿ: 86,04,955 ಮಂದಿ ಗುಣಮುಖ ರೆಬೆಲ್ ಸ್ಟಾರ್  ಅಂಬರೀಷ್ ಎರಡನೆ ಪುಣ್ಯತಿಥಿ ಇಂದು ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಆಯ್ಕೆ ಪ್ರಶ್ನಿಸಿ ಅರ್ಜಿ: ಇಂದು ಸುಪ್ರೀಂ ಕೋರ್ಟ್… ಸಹಕಾರ ಹಾಲು ಡೈರಿಗೆ ಕ್ಷೀರ ನೀಡುವ ಮೂಲಕ ವಿವಿಧ ಸೌಲಭ್ಯ ಪಡೆಯಲು ಸಲಹೆ

ಯಕ್ಷಗುರು ಗಣೇಶ ಕೊಲೆಕಾಡಿಯವರಿಗೆ ರಂಗಭಾಸ್ಕರ ಪ್ರಶಸ್ತಿ ಪ್ರದಾನ

October 27, 2020, 1:36 PM

ಮಂಗಳೂರು(reporterkarnataka news): ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸದಾ ಕ್ರಿಯಾಶೀಲವಾಗಿರುವ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ, ದಿ.ಭಾಸ್ಕರ ನೆಲ್ಲಿತೀರ್ಥರವರ ನೆನಪಲ್ಲಿ ನೀಡಲಾಗುವ 2020 ನೇ ಸಾಲಿನ ರಂಗಭಾಸ್ಕರ ಪ್ರಶಸ್ತಿಯನ್ನು ಪ್ರಸಿದ್ಧ ಯಕ್ಷಗುರು ಶ್ರೀ ಗಣೇಶ ಕೊಲೆಕಾಡಿಯವರಿಗೆ ನೀಡಿ ಗೌರವಿಸಲಾಯಿತು.

ಕೋವಿಡ್ ಕಾರಣದಿಂದ ಸರಳವಾಗಿ ಸಂಯೋಜಿಸಿದ ಆಪ್ತ ಕಾರ್ಯಕ್ರಮದಲ್ಲಿ ಕೊಲೆಕಾಡಿ ಅವರಿಗೆ ಸ್ವಗೃಹದಲ್ಲಿ ಶಾಲು ಹೊದೆಸಿ, ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ನೀಡಲಾಯಿತು. 

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಡಾ.ನಾ.ದಾಮೋದರ ಶೆಟ್ಟಿಯವರು ಮಾತನಾಡಿ ‘ಗಣೇಶ ಕೊಲೆಕಾಡಿಯವರು ಮೂಲತಃ ರಂಗಭೂಮಿಯಿಂದ ಬಂದವರು. ನಿಜ ಅರ್ಥದಲ್ಲಿ ಕಲಾತಪಸ್ವಿ. ದೈಹಿಕ ಅನಾರೋಗ್ಯವಿದ್ದರೂ, ಕಳೆದ ಹಲವಾರು ವರ್ಷಗಳಿಂದ ಯಕ್ಷಗಾನ ಆಸಕ್ತರಿಗೆ ಉಚಿತ ತರಬೇತಿ ನೀಡುವ ಮೂಲಕ ಯಕ್ಷಲೋಕಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಛಂದಸ್ಸಿನಲ್ಲಿ ವಿಶೇಷ ಸಂಶೋದನಾತ್ಮಕ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡುತ್ತಿದ್ದಾರೆ. ರಂಗಭೂಮಿ ಮತ್ತು ಯಕ್ಷಗಾನ ಒಂದು ನಾಣ್ಯದ ಎರಡು ಮುಖಗಳು ಎಂಬಂತೆ, ಎರಡೂ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಯಶಸ್ಸು ಸಾಧಿಸಿದ ಈ ಪ್ರಶಸ್ತಿಯನ್ನು ಅರ್ಹವಾಗಿಯೇ ಪಡೆದಿದ್ದಾರೆ.’ ಎಂದು ಡಾ. ನಾಸಾ ನುಡಿದರು. 

ಪ್ರಶಸ್ತಿ ಸ್ವೀಕರಿಸಿದ ಗಣೇಶ ಕೊಲೆಕಾಡಿ ‘ನನಗೆ ಇದೊಂದು ಅನಿರೀಕ್ಷಿತ ಪ್ರಶಸ್ತಿ. ನಾನು ಯಾವುದೇ ಅರ್ಜಿ ಹಾಕದೆ ಸಿಕ್ಕಿದ ಪ್ರಶಸ್ತಿ. ಹಾಗಾಗಿ ಇದರ ಮೌಲ್ಯ ಹಿರಿದು’ ಎಂದರು.

ಪ್ರಗತಿಪರ ಕೃಷಿಕ ಯಶವಂತ ಶೆಟ್ಟಿ ಪಡುಬೀಡು, ರಂಗಸಂಗಾತಿಯ ಗೋಪಾಲಕೃಷ್ಣ ಶೆಟ್ಟಿ, ಕರುಣಾಕರ ಶೆಟ್ಟಿ, ಮೈಮ್ ರಾಮದಾಸ್, ನಾಗೇಶ್ ಶೆಟ್ಟಿ ಬಜಾಲ್, ಸುರೇಶ್ ಬೆಳ್ಚಡ ಮತ್ತು ಕೊಲೆಕಾಡಿ ಟ್ರಸ್ಟ್‌ನ ಅಧ್ಯಕ್ಷರಾದ ಸದಾಶಿವ ಶೆಟ್ಟಿಗಾರ್ ಮತ್ತಿತರರು ಹಾಗೆಯೇ ಕೊಲೆಕಾಡಿಯವರ ಶಿಷ್ಯಂದಿರು ಉಪಸ್ಥಿತರಿದ್ದರು.

ಜಾಹೀರಾತು