8:19 AM Saturday28 - November 2020
ಬ್ರೇಕಿಂಗ್ ನ್ಯೂಸ್
ಉಗ್ರ ಸಂಘಟನೆ ಪರ ಗೋಡೆ ಬರಹದ ತನಿಖೆಗೆ ಪ್ರತ್ಯೇಕ ತಂಡ ರಚನೆ: ಪೊಲೀಸ್ ಯಕ್ಷಗಾನ ದೇವ ಪರಂಪರೆಯ ಮೂಲ ಕಲೆಯಾಗಿದ್ದು ಅಧ್ಯಯನ ಅಗತ್ಯ: ನಿತ್ಯಾನಂದ  ಸಂಸದರ ಜತೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಚರ್ಚೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಕಚೇರಿ ಇಂದು ಉದ್ಘಾಟನೆ ನಿವಾರ್ ಚಂಡಮಾರುತದ ಪ್ರಭಾವ: ಬೆಂಗಳೂರಿನಲ್ಲಿ  ಸೇರಿ 6 ಜಿಲ್ಲೆಗಳಲ್ಲಿ ಯಲ್ಲೊ ಅಲರ್ಟ್  ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ: 5 ಮಂದಿ ರೋಗಿಗಳು ಸಜೀವ ದಹನ, ತನಿಖೆಗೆ ಆದೇಶ ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ಇಂದು: ವಿಜಯ ನಗರ ಜೆಲ್ಲೆ ರಚನೆ… ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ನೂತನ ಮೇಳದ ಪ್ರಥಮ ವರ್ಷದ ತಿರುಗಾಟ 27ರಂ ವಿದ್ಯುತ್ ಸಂಪರ್ಕವೇ ಕಾಣದ 2 ಮನೆಗಳಿಗೆ  ಕೊನೆಗೂ ಬಂತು ಬೆಳಕು ! ಶ್ರೀನಗರದಲ್ಲಿ ಭದ್ರತಾ ಪಡೆಯ ಮೇಲೆ ಭಯೋತ್ಪಾದಕರ ದಾಳಿ: ಸ್ಥಳಕ್ಕೆ ಹೆಚ್ಚುವರಿ ಸೇನೆ

ಇತ್ತೀಚಿನ ಸುದ್ದಿ

ಯಕ್ಷಗಾನದಲ್ಲಿ ಮಿಂಚುತ್ತಿರುವ15ರ ಹರೆಯದ ಬಾಲೆ: ಬಹುಮುಖ ಪ್ರತಿಭೆಗೆ ಹೆಸರಾದ ಭಾಗ್ಯಶ್ರೀ

August 21, 2020, 12:44 PM

ಕಾಸರಗೋಡಿನ ಕಾಟುಕುಕ್ಕೆಯ ಬಾಲ ಪ್ರತಿಭೆ ಈ ಭಾಗ್ಯಶ್ರೀ. 6ರ ಹರೆಯದಲ್ಲೇ ಗೆಜ್ಜೆ ಕಟ್ಟಿ ಕುಣಿದ ಈಕೆಯದ್ದು ಬಹುಮುಖ ಪ್ರತಿಭೆ. ಪ್ರಸ್ತುತ ಈಕೆ ಪೆರ್ಲದಲ್ಲಿ ಯಕ್ಷಗಾನ ತರಬೇತಿ ಪಡೆಯುತ್ತಿದ್ದಾಳೆ.

ಕುಂಚಿನಡ್ಕ ಚಂದ್ರಶೇಖರ ಶರ್ಮ ಹಾಗೂ ಉಷಾದೇವಿ ದಂಪತಿ ಪುತ್ರಿಯಾದ ಭಾಗ್ಯಶ್ರೀ ಒಂದನೇ ತರಗತಿಯಲ್ಲೇ ಸಬ್ಬಣಕೋಡಿ ರಾಮ ಭಟ್ ಅವರಲ್ಲಿ ಯಕ್ಷಗಾನ ತರಬೇತಿ ಪಡೆದಿದ್ದಾಳೆ. ತೆಂಕುತಿಟ್ಟಿನ ಪ್ರಸಿದ್ದ ಯಕ್ಷಗಾನ ಗುರುಗಳಾದ ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯರು ಪೆರ್ಲದಲ್ಲಿ ಸ್ಥಾಪಿಸಿದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿದಲ್ಲಿ ತರಬೇತಿ ಪಡೆಯುತ್ತಿದ್ದಾಳೆ.

ಪೂತನಿ ಸಂಹಾರ, ಕಂಸ ವಧೆ, ವೀರ ಬಬ್ರುವಾಹನ, ಪಾಂಚಜನ್ಯ, ಚಕ್ರವ್ಯೂಹ, ವೀರವರ್ಮ ಕಾಳಗ, ನರಕಾಸುರ ಮೋಕ್ಷ, ರತಿಕಲ್ಯಾಣ ಪ್ರಸಂಗಗಳಲ್ಲಿ ಭಾಗ್ಯಶ್ರೀ ಶ್ರೀಕೃಷ್ಣನ ಪಾತ್ರ ಮಾಡಿದ್ದಾಳೆ. ಪ್ರಮೀಳಾ ಅರ್ಜುನದ ಪ್ರಮೀಳೆ , ಸುದರ್ಶನ ವಿಜಯದ

ವಿಷ್ಣು, ಮೀನಾಕ್ಷಿ ಕಲ್ಯಾಣದ ಶಿವ, ಶಶಿಪ್ರಭ ಪರಿಣಯದ ಮಾರ್ತಾಂಡ ತೇಜ, ಕಿರಾತ, ಮಧನಾಕ್ಷಿ ಮುಂತಾದ ಪ್ರಸಂಗವನ್ನು ನಿರ್ವಹಿಸಿದ್ದಾಳೆ. ಶಾಲಾ ವಾರ್ಷಿಕೋತ್ಸವದಂದು ಕರಾಸುರ ವಧೆಯ ಲಕ್ಷಣ, ಗುರುದಕ್ಷಿಣೆ ಪ್ರಸಂಗದ ಏಕಲವ್ಯ ಪಾತ್ರ ನಿರ್ವಹಿಸಿದ್ದಾಳೆ. 

ಯಕ್ಷಗಾನ ತಂಡದ ಉಪ ಜಿಲ್ಲಾಮಟ್ಟದ ಪರೀಕ್ಷೆ ಯಲ್ಲಿ ಎ ಗ್ರೇಡ್ ಪಡೆದಿದ್ದಾಳೆ. ಕೇರಳದ ರಾಜ್ಯದ ಸ್ಕೌಟ್ ಆ್ಯಂಡ್ ಗೈಡ್ಸ್ ರಾಜ್ಯ ಪುರಸ್ಕಾರ ಗಳಿಸಿದ್ದಾರೆ. ಪ್ರಸ್ತುತ ಭಾಗ್ಯಶ್ರೀ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥನಿ. ಪೇಪರ್ ಕ್ರಾಪ್ಟ್ ನಲ್ಲಿ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾಳೆ ಮುಂದೆ  ಈ ಬಹುಮುಖ ಪ್ರತಿಭೆ ರಾಷ್ಟ್ರ ಮಟ್ಟದಲ್ಲಿ ಮಿಂಚಲಿ. 

* ಪದ್ಮಶ್ರೀ ಭಟ್  ನಿಡ್ಡೋಡಿ

ಇತ್ತೀಚಿನ ಸುದ್ದಿ

ಜಾಹೀರಾತು