ಇತ್ತೀಚಿನ ಸುದ್ದಿ
ಯಡಿಯೂರಪ್ಪ ಸಂಪುಟ ವಿಸ್ತರಣೆ: ಸುಳ್ಯ ಶಾಸಕ ಅಂಗಾರಗೆ ಕೊನೆಗೂ ಕೂಡಿ ಬಂದ ಮಂತ್ರಿ ಯೋಗ
January 13, 2021, 4:33 PM

ಬೆಂಗಳೂರು(reporterkarnataka news):
ರಾಜಭವನದಲ್ಲಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಹಿರಿಯ ಶಾಸಕ ಎಸ್. ಅಂಗಾರ ಸೇರಿದಂತೆ 7 ಮಂದಿ ನೂತನ ಸಚಿವರು ಪ್ರಮಾಣವನ್ನು ವಚನ ಸ್ವೀಕರಿಸಿದರು.
ಸುಳ್ಯ ಕ್ಷೇತ್ರದಿಂದ ಸತತ 6 ಬಾರಿ ಆಯ್ಕೆಯಾದ ಅಂಗಾರ ಅವರಿಗೆ ಕೊನೆಗೂ ಮಂತ್ರಿ ಯೋಗ ಕೂಡಿ ಬಂತು. ಕಳೆದ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೊನೆ ಕ್ಷಣದಲ್ಲಿ ಅವರ ಹೆಸರು ಕೈಬಿಡಲಾಯಿತ್ತು.
ರಾಜ್ಯಪಾಲ ವಜುಭಾಯಿ ರುಡಭಾಯಿ ವಾಲ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಸಿ. ಪಿ.ಯೋಗೀಶ್ವರ್, ಮುರುಗೇಶ್ ನಿರಾಣಿ ಸೇರಿದಂತೆ 7 ಮಂದಿ ನೂತನ ಸಚಿವರಿಗೆ ರಾಜ್ಯಪಾಲರು ಪ್ರಮಾಣ ವಚನ. ಬೋಧಿಸಿದರು.