7:05 PM Friday4 - December 2020
ಬ್ರೇಕಿಂಗ್ ನ್ಯೂಸ್
ದೇಶದ ಜನರಿಗೆ ಶೀಘ್ರವೇ ಕೊರೊನಾ ಲಸಿಕೆ ಸಿದ್ಧ:  ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ… ಕನಕ ದಾಸರ ಸಂದೇಶ ಸಮಾಜದ ಕಣ್ಣು ತೆರೆಸುವಂತಿದೆ: ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌ ಅನಾಥ ಮಕ್ಕಳ್ಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ಉತ್ತಮ ಭವಿಷ್ಯ ರೂಪಿಸಿ: ಡಾ.ಶಾಂತ ಜಾತಿಯ ಹೆಸರಲ್ಲಿ ನಡೆಯುವ ಶೋಷಣೆ ಸಮಾಜ ಹಿತಕ್ಕೆ ಮಾರಕ: ಕುರುಬರ ಅಧ್ಯಕ್ಷ ಎಂ.ವೇಮಣ್ಣ  ಹಿಂಸಾಚಾರ: ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ, ಬಿಗಿ ಬಂದೋಬಸ್ತ್  ಮಾರಕ ಕೊರೊನಾಕ್ಕೆ ಒಂದೇ ದಿನ 540 ಮಂದಿ ಬಲಿ: 42, 916 ಮಂದಿ… ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: 30 ವಾರ್ಡ್ ಗಳಲ್ಲಿ ಬಿಜೆಪಿ ಮುನ್ನಡೆ ದುರ್ಬಲವಾಗುತ್ತಿರುವ ಬುರೆವಿ ಚಂಡಮಾರುತ: ನಿಟ್ಟುಸಿರು ಬಿಟ್ಟ ಕೇರಳದ ಜನತೆ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ: ಇಂದು ಪ್ರಧಾನಿ ಸರ್ವ ಪಕ್ಷ ಸಭೆ ಪ್ರತಿಷ್ಠಿತ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: ಬಿಗಿ ಭದ್ರತೆಯಲ್ಲಿ ಇಂದು ಮತ ಎಣಿಕೆ

ಇತ್ತೀಚಿನ ಸುದ್ದಿ

ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ಮುಖಂಡ ಗಂಭೀರ ಆರೋಪಕಾಂಗ್ರೆಸ್ ಮುಖಂಡ ಗಂಭೀರ ಆರೋಪ

August 26, 2020, 4:31 PM

ಬೆಂಗಳೂರು(reporterkarnataka news): ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ದ ಕಾಂಗ್ರೆಸ್ ಮುಖಂಡ ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ. ಭ್ರಷ್ಟಾಚಾರದ ಆರೋಪ ಹೊರಿಸಿರುವ ಲಕ್ಷ್ಮಣ್ ಇದು ನನ್ನ ಆರೋಪವಲ್ಲ. ಬಿಜೆಪಿ ಶಾಸಕರು ಪಕ್ಷದ ಹೈಕಮಾಂಡ್ ಗೆ ರವಾನಿಸಿರುವ ಮಾಹಿತಿ ಎಂದು ಹೇಳಿದ್ದಾರೆ. 

ಬಿಜೆಪಿ ಶಾಸಕರು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಾನು ದಾಖಲೆ ಸಂಗ್ರಹಿಸಿದ್ದೇನೆ. ಅದರ ಸ್ವಲ್ಪ ಭಾಗ ಇದೀಗ ಬಿಡುಗಡೆ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಮುಖ್ಯವಾಗಿ ವರ್ಗಾವಣೆಯಲ್ಲಿ ವಿಜಯೇಂದ್ರ ಭಾರೀ ಹಸ್ತಕ್ಷೇಪ ಮಾಡುತ್ತಿದ್ದಾರೆ. ಸುಮಾರು 5000 ಕೋಟಿ ರೂಪಾಯಿಗಳ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಮೈಸೂರು ಕಾಂಗ್ರೆಸ್ ವಕ್ತಾರ ಕೂಡ ಆಗಿರುವ ಲಕ್ಷ್ಮಣ್  ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಅಧಿಕಾರಿಗಳ ಪೋಸ್ಟಿಂಗ್ ಗೆ ಸಂಬಂಧಿಸಿದಂತೆ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ. ಇದರ ಜತೆ ಜತೆಗೆ ಇದೆಲ್ಲ ನನ್ನ ಆರೋಪವಲ್ಲ. ಎಲ್ಲವೂ ಬಿಜೆಪಿ ಶಾಸಕರ ಆರೋಪ. ಅದನ್ನು ನಾನು ಪುನುರುಚ್ಚರಿಸಿದ್ದೇನೆ  ಎಂದು ಸಮರ್ಥನೆ ನೀಡಿದ್ದಾರೆ. ಸಪ್ಟೆಂಬರ್ ತಿಂಗಳ ಮಧ್ಯಭಾಗದಲ್ಲಿ ದೆಹಲಿಯಲ್ಲಿ ಪೂರ್ಣ ಪ್ರಮಾಣದ ದಾಖಲೆ ಬಿಡುಗಡೆ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ

ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ದ ಕಾಂಗ್ರೆಸ್ ಮುಖಂಡ ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ. ಭ್ರಷ್ಟಾಚಾರದ ಆರೋಪ ಹೊರಿಸಿರುವ ಲಕ್ಷ್ಮಣ್ ಇದು ನನ್ನ ಆರೋಪವಲ್ಲ. ಬಿಜೆಪಿ ಶಾಸಕರು ಪಕ್ಷದ ಹೈಕಮಾಂಡ್ ಗೆ ರವಾನಿಸಿರುವ ಮಾಹಿತಿ ಎಂದು ಹೇಳಿದ್ದಾರೆ. ಬಿಜೆಪಿ ಶಾಸಕರು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಾನು ದಾಖಲೆ ಸಂಗ್ರಹಿಸಿದ್ದೇನೆ. ಅದರ ಸ್ವಲ್ಪ ಭಾಗ ಇದೀಗ ಬಿಡುಗಡೆ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಮುಖ್ಯವಾಗಿ ವರ್ಗಾವಣೆಯಲ್ಲಿ ವಿಜಯೇಂದ್ರ ಭಾರೀ ಹಸ್ತಕ್ಷೇಪ ಮಾಡುತ್ತಿದ್ದಾರೆ. ಸುಮಾರು 5000 ಕೋಟಿ ರೂಪಾಯಿಗಳ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಮೈಸೂರು ಕಾಂಗ್ರೆಸ್ ವಕ್ತಾರ ಕೂಡ ಆಗಿರುವ ಲಕ್ಷ್ಮಣ್  ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಅಧಿಕಾರಿಗಳ ಪೋಸ್ಟಿಂಗ್ ಗೆ ಸಂಬಂಧಿಸಿದಂತೆ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ. ಇದರ ಜತೆ ಜತೆಗೆ ಇದೆಲ್ಲ ನನ್ನ ಆರೋಪವಲ್ಲ. ಎಲ್ಲವೂ ಬಿಜೆಪಿ ಶಾಸಕರ ಆರೋಪ. ಅದನ್ನು ನಾನು ಪುನುರುಚ್ಚರಿಸಿದ್ದೇನೆ  ಎಂದು ಸಮರ್ಥನೆ ನೀಡಿದ್ದಾರೆ. ಸಪ್ಟೆಂಬರ್ ತಿಂಗಳ ಮಧ್ಯಭಾಗದಲ್ಲಿ ದೆಹಲಿಯಲ್ಲಿ ಪೂರ್ಣ ಪ್ರಮಾಣದ ದಾಖಲೆ ಬಿಡುಗಡೆ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು