5:46 AM Tuesday9 - March 2021
ಬ್ರೇಕಿಂಗ್ ನ್ಯೂಸ್
ಸಾಗರಮಾಲಾ ಯೋಜನೆಯ ಕೋಸ್ಟಲ್ ಬರ್ತ್  ರದ್ದುಪಡಿಸಲು ಒತ್ತಾಯಿಸಿ ಬೆಂಗರೆಯಲ್ಲಿ ಪ್ರತಿಭಟನೆ ಮೂಡುಬಿದರೆ: ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಂದ ಎರಡು ದಿನಗಳ ಶೈಕ್ಷಣಿಕ ಪ್ರವಾಸ, ಚಾರಣ ಮಹಿಳಾ ದಿನಾಚರಣೆ ದಿನದಂದೇ ಶಾಕಿಂಗ್ ನ್ಯೂಸ್: ಪೊದೆಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ 50 ಟನ್ ಬೂದುಗುಂಬಳ ಬೆಳೆಸಿದ ತೀರ್ಥಹಳ್ಳಿ ರೈತ: ಖರೀದಿಗೆ ಸಗಟು ವರ್ತಕರಿಲ್ಲದೆ ಸೋತ!… ಮಂಗಳೂರಿನ ಸಿಮ್ರಾನ್ ಕೋಚಿಂಗ್ ಸೆಂಟರ್ ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ ರಾಜ್ಯ ಬಜೆಟ್ : ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಹೆಚ್ಚಳ ಇಲ್ಲ. 45 ಲಕ್ಷ… ಮಹಿಳೆ ಮತ್ತು ನಾಯಕತ್ವ ಕ್ರೈಸ್ತ ಸಮುದಾಯ ವಿರುದ್ಧ ಸಂಸದ ಪ್ರತಾಪ ಸಿಂಹ ವಿವಾದಿತ ಹೇಳಿಕೆ: ಕಾಂಗ್ರೆಸ್ ಪ್ರತಿಭಟನೆ ಇಂದು ರಾಜ್ಯ ಬಜೆಟ್: ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಮಂಡನೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಥ್ರೋಬಾಲ್ ಪಂದ್ಯಾಟ

ಇತ್ತೀಚಿನ ಸುದ್ದಿ

ಯಡಿಯೂರಪ್ಪ ದೆಹಲಿ ಭೇಟಿ: ಯಾರಿಗೆಲ್ಲ ಸಚಿವ ಹುದ್ದೆ ಸಿಗುತ್ತದೆ? ಯಾರೆಲ್ಲ ಮಂತ್ರಿಗಿರಿ ಕಳೆದುಕೊಳ್ಳುತ್ತಾರೆ?

September 18, 2020, 8:02 AM

ನವದೆಹಲಿ(reporterkarnataka news): ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿ ತಲುಪಿದ್ದು, ಸಂಪುಟ ವಿಸ್ತರಣೆ ಹಾಗೂ ರಾಜ್ಯದ ಇತರ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ನಿರೀಕ್ಷೆ ಹೊಂದಿದ್ದಾರೆ.

ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಪುಟ ಪುನರ್ ರಚನೆ ಮಾಡುವುದಾ? ಅಥವಾ ವಿಸ್ತರಣೆಷ್ಟೇ ಸೀಮಿತಗೊಳಿಸುವುದೇ ಎನ್ನುವ ಕುರಿತು ಪಕ್ಷದ ಉನ್ನತ ನಾಯಕರಲ್ಲಿ ಚರ್ಚಿಸುವ ಉದ್ದೇಶ ಕೂಡ ಈ ಭೇಟಿ ಹೊಂದಿದೆ ಎನ್ನಲಾಗಿದೆ. ಯಾರೆಲ್ಲ ಸಚಿವರಾಗುತ್ತಾರೆ? ಯಾರದೆಲ್ಲ ಖಾತೆ ಕೈಜಾರುತ್ತೆ ಎನ್ನುವ ಬಗ್ಗೆ ಸ್ಪಷ್ಟ ಸುಳಿವು ಇನ್ನಷ್ಟೇ ಸಿಗಬೇಕಾಗಿದೆ.

ಮುಖ್ಯಮಂತ್ರಿಯವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಕಾರ್ಯಕ್ರಮವಿದೆ. ಕೊರೊನಾ ವೈರಸ್, ಭಾರತ- ಚೀನಾ ಗಡಿ ಉದ್ವಿಗ್ನತೆ ಹಾಗೂ ಸಂಸತ್ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಭೇಟಿಗೆ ಅವಕಾಶ ಸಿಗುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಆದರೆ ಯಡಿಯೂರಪ್ಪ ಅವರಿಗೆ ಅವಕಾಶ ದೊರೆತಿದೆ. ಇಂದು ಬೆಳಗ್ಗೆ 9.15ಕ್ಕೆ ಪ್ರಧಾನಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು