6:01 AM Saturday23 - January 2021
ಬ್ರೇಕಿಂಗ್ ನ್ಯೂಸ್
ಕಾಳ ಸಂತೆಯಲ್ಲಿ ಆಹಾರ ದಾಸ್ತಾನು ಹೆಚ್ಚಾಗುವ ಭೀತಿಯಿದೆ: ಮಾಜಿ ಸಚಿವ ಯು.ಟಿ ಖಾದರ್ ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಬಗ್ಗೆ ಕೇಂದ್ರ ಯಾಕೆ ಮಾತನಾಡುತ್ತಿಲ್ಲ: ಸೋನಿಯಾ ಪ್ರಶ್ನೆ  ಒತ್ತಡ ರಾಜಕೀಯಕ್ಕೆ ಮಣಿದು ಖಾತೆ ಮರು ಹಂಚಿಕೆ  ಮಾಡಿದ ಮುಖ್ಯಮಂತ್ರಿ ಬಿಎಸ್ ವೈ ಶಿವಮೊಗ್ಗದಲ್ಲಿ ನಡೆದದ್ದು ಭೂ ಕಂಪನವಲ್ಲ, ರೈಲ್ವೆ ಕ್ರಷರ್ ಸ್ಫೋಟ: 10ಕ್ಕೂ ಅಧಿಕ ಸಾವು… ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಇಂದು ಸುಬ್ರಹ್ಮಣ್ಯದಲ್ಲಿ ಉದ್ಘಾಟನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದು ರಾಜ್ಯ ಧಾರ್ಮಿಕ ಪರಿಷತ್ ವಿಶೇಷ… ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರಿನಲ್ಲಿ ಭೂ ಕಂಪನದ ಅನುಭವ: ಮನೆಯಿಂದ ಬೀದಿಗೆ ಓಡಿದ ಜನರು ಮಂಗಳೂರಿನಲ್ಲಿ  ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ 5ನೇ ಪುಣ್ಯತಿಥಿ ಆಚರಣೆ ಮಡಿಕೇರಿ ತಾಲೂಕು ಅಕ್ರಮ- ಸಕ್ರಮ ಸಮಿತಿ ಸಭೆಯಲ್ಲಿ ಹಲವು ಅರ್ಜಿಗಳ ವಿಲೇವಾರಿ  … ನಟಿ ರಾಗಿಣಿ ದ್ವಿವೇದಿಗೆ ಕೊನೆಗೂ ಸಿಕ್ಕಿತು ಜಾಮೀನು: 140 ದಿನಗಳ ಬಳಿಕ ಬಿಡುಗಡೆ…

ಇತ್ತೀಚಿನ ಸುದ್ದಿ

ರಾಜ್ಯದಲ್ಲಿ ಬಿಜೆಪಿ ಅಂದ್ರೆ ಯಡಿಯೂರಪ್ಪ,  ಯಡಿಯೂರಪ್ಪ ಅಂದ್ರೆ ಬಿಜೆಪಿ: ಈಗ ಹೇಳಿ ಸಿಎಂ ಬದಲಾಗುತ್ತಾರಾ?

November 25, 2020, 10:22 AM

  • ರಾಜೀವಿಸುತ ಬೆಂಗಳೂರು

Info.reporterkarnataka@gmail.com

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯ ಮತ್ತೆ ಪ್ರವರ್ಧಮಾನಕ್ಕೆ ಬಂದಿದೆ. ಒಂದು ಕಡೆ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿಲ್ಲ. ಮತ್ತೊಂದು ಕಡೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ನಡುವೆ ಮೈಸೂರಿನಲ್ಲಿ ಮಾತನಾಡಿದ ಸಚಿವ ಸೋಮಶೇಖರ್ ಅವರು ರಾಜ್ಯದಲ್ಲಿ ಸಿಎಂ ಬದಲಾವಣೆ ಪ್ರಸ್ತಾಪ ಕೇವಲ ವದಂತಿ ಎಂದು ಪ್ರತಿಕ್ರಿಯಿಸಿದ್ದಾರೆ.

ಇಲ್ಲಿ ಸಚಿವ ಸೋಮಶೇಖರ್ ಅವರ ಹೇಳಿಕೆಗೆ ಯಾವುದೇ ಬೆಲೆ ಇಲ್ಲ. ಅವರೇನು ಪಕ್ಷದ ರಾಜ್ಯಾಧ್ಯಕ್ಷರೂ ಅಲ್ಲ, ಕರ್ನಾಟಕದ ಉಸ್ತುವಾರಿಯೂ ಅಲ್ಲ. ಯಡಿಯೂರಪ್ಪ ಸಂಪುಟದ ಪ್ರಭಾವಿಯಲ್ಲದ ಒಬ್ಬ ಸಚಿವ ಅಷ್ಟೇ. ಸೋಮಶೇಖರ್ ವಿಷಯ ಹಾಗೆ ಇರಲಿ. ಇನ್ನು ವಾಸ್ತವದತ್ತ ದೃಷ್ಟಿ ಹರಿಸಿದರೆ ಎರಡೂವರೆ ವರ್ಷದೊಳಗೆ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ. ಎರಡೂವರೆ ವರ್ಷದಲ್ಲಿ 6 ತಿಂಗಳು ಚುನಾವಣಾ ಸಿದ್ಧತೆಗೆ ಹೋಗುತ್ತದೆ. ಇನ್ನು ಉಳಿದಿರುವುದು ಬರೇ ಎರಡು ವರ್ಷ ಮಾತ್ರ.

ಅದಲ್ಲದೆ ಪ್ರಸ್ತುತ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿರುವುದು ಸ್ವಂತ ಬಲದಿಂದ

ಅಲ್ಲ, ಆಪರೇಶನ್ ಕಮಲ ಹಾಗೂ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಸಮಯಸಾಧಕ ರಾಜಕಾರಣಿಗಳಿಂದ ಎನ್ನುವುದು ಬಿಜೆಪಿ ನಾಯಕರಿಗೂ ಚೆನ್ನಾಗಿ ಗೊತ್ತಿದೆ. ಕಾಂಗ್ರೆಸ್ ಮುಕ್ತ ದೇಶ ಎಂದು ಹೇಳುವ ಬಿಜೆಪಿಯೊಳಗೆ ಕಾಂಗ್ರೆಸ್ ನಿಂದ ಬಂದ ಸಾಕಷ್ಟು ಶಾಸಕರಿದ್ದಾರೆ. ಇವರೆಲ್ಲ ಸಂಘ ಪರಿವಾರದಿಂದ ಬಂದವರಲ್ಲ.

ಹಾಗೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕೂಡ ಹೇಳಿಕೊಳ್ಖುವಂತಹ ಸಾಧನೆ ಏನೂ ಅಲ್ಲ. ಹೆಚ್ಚಾಗಿ ಯಾವ ಸರಕಾರ ಅಧಿಕಾರದಲ್ಲಿರುತ್ತದೆಯೋ ಆ ಪಕ್ಷದ ಅಭ್ಯರ್ಥಿಗಳನ್ನು

ಉಪ ಚುನಾವಣೆಯಲ್ಲಿ ಗೆಲ್ಲುವುದು ವಾಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಆರ್. ಆರ್. ನಗರ ಹಾಗೂ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿದ್ದು ದೊಡ್ಡ ಸಾಧನೆಯ ಅಲ್ಲ ಎನ್ನುವುದು ಪಕ್ಷದ ವರಿಷ್ಠರಿಗೆ ಚೆನ್ನಾಗಿ ಗೊತ್ತಿದೆ. ವಾಸ್ತವ ಅಂಶ ಹೀಗಿರುವಾಗ ಸಿಎಂ ಬದಲಾವಣೆಯ ದುಸ್ಸಾಹಸಕ್ಕೆ ಪಕ್ಷದ

ವರಿಷ್ಠರು ಕೈಹಾಕುವ ಸಾಧ್ಯತೆ ಬಹಳ ಕಡಿಮೆ. ಬದಲಿಗೆ ಸಂಪುಟ ವಿಸ್ತರಣೆಯನ್ನು ಮುಂದಿಡುತ್ತಾನೆ ಹೋಗಬಹುದು. ಇನ್ನು ಯಡಿಯೂರಪ್ಪ ಅವರ ವಿಷಯಕ್ಕೆ ಬಂದರೆ ಅವರು ರಾಜ್ಯ ಬಿಜೆಪಿಗೆ ದೊಡ್ಡ ಶಕ್ತಿ. ಅವರು ರಾಜ್ಯದ ಪ್ರಭಾವೀ ನಾಯಕ. ಸದಾನಂದ ಗೌಡ, ಪ್ರಹ್ಲಾದ್ ಜೋಷಿ ಅಥವಾ ಜಗದೀಶ ಶೆಟ್ಟರ್ ತರಹ ಅಲ್ಲ. ಯಡಿಯೂರಪ್ಪ ಅವರ ಹಿಂದೆ ಬೆಂಬಲಿಗರ ದೊಡ್ಡ ಗುಡಾಣವೇ ಇದೆ. ಅದಲ್ಲದೆ ರಾಜ್ಯದ ಪ್ರಭಾವೀ ಲಿಂಗಾಯಿತ ಸಮುದಾಯ ಯಡಿಯೂರಪ್ಪ ಅವರ ಹಿಂದೆ ಇದೆ. ಇವರು ಒಂದು ರೀತಿಯಲ್ಲಿ ಎಸ್. ಬಂಗಾರಪ್ಪ ತರಹ. ಬಂಗಾರಪ್ಪ ಅವರು ಕಾಂಗ್ರೆಸ್ ಬಿಟ್ಟು ಹೋದಾಗಲೆಲ್ಲ ರಾಜ್ಯದಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದೆ. ಹಾಗೆ 2014ರ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗ ರಾಜ್ಯದಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿತ್ತು. ಇದೆಲ್ಲ ಉದಾಹರಣೆಗಳು ಜೀವಂತವಿರುವಾಗ ಪಕ್ಷದ ಹೈಕಮಾಂಡ್ ಬಲವಂತವಾಗಿ ಮುಖ್ಯಮಂತ್ರಿ ಬದಲಾವಣೆಗೆ ಹೋಗಲಾರದು. ಬದಲಾವಣೆ ಮಾಡುವುದಿದ್ದರೂ ರಾಜಿ ಸೂತ್ರದ ಮೇಲೆ ಯಡಿಯೂರಪ್ಪ ಅವರ ಒಪ್ಪಿಗೆ ಪಡೆದೇ ಬದಲಾವಣೆ ನಡೆಸುವ ಸಾಧ್ಯತೆ ಹೆಚ್ಚು.

ಇತ್ತೀಚಿನ ಸುದ್ದಿ

ಜಾಹೀರಾತು