8:12 AM Saturday28 - November 2020
ಬ್ರೇಕಿಂಗ್ ನ್ಯೂಸ್
ಉಗ್ರ ಸಂಘಟನೆ ಪರ ಗೋಡೆ ಬರಹದ ತನಿಖೆಗೆ ಪ್ರತ್ಯೇಕ ತಂಡ ರಚನೆ: ಪೊಲೀಸ್ ಯಕ್ಷಗಾನ ದೇವ ಪರಂಪರೆಯ ಮೂಲ ಕಲೆಯಾಗಿದ್ದು ಅಧ್ಯಯನ ಅಗತ್ಯ: ನಿತ್ಯಾನಂದ  ಸಂಸದರ ಜತೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಚರ್ಚೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಕಚೇರಿ ಇಂದು ಉದ್ಘಾಟನೆ ನಿವಾರ್ ಚಂಡಮಾರುತದ ಪ್ರಭಾವ: ಬೆಂಗಳೂರಿನಲ್ಲಿ  ಸೇರಿ 6 ಜಿಲ್ಲೆಗಳಲ್ಲಿ ಯಲ್ಲೊ ಅಲರ್ಟ್  ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ: 5 ಮಂದಿ ರೋಗಿಗಳು ಸಜೀವ ದಹನ, ತನಿಖೆಗೆ ಆದೇಶ ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ಇಂದು: ವಿಜಯ ನಗರ ಜೆಲ್ಲೆ ರಚನೆ… ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ನೂತನ ಮೇಳದ ಪ್ರಥಮ ವರ್ಷದ ತಿರುಗಾಟ 27ರಂ ವಿದ್ಯುತ್ ಸಂಪರ್ಕವೇ ಕಾಣದ 2 ಮನೆಗಳಿಗೆ  ಕೊನೆಗೂ ಬಂತು ಬೆಳಕು ! ಶ್ರೀನಗರದಲ್ಲಿ ಭದ್ರತಾ ಪಡೆಯ ಮೇಲೆ ಭಯೋತ್ಪಾದಕರ ದಾಳಿ: ಸ್ಥಳಕ್ಕೆ ಹೆಚ್ಚುವರಿ ಸೇನೆ

ಇತ್ತೀಚಿನ ಸುದ್ದಿ

ವ್ಯಕ್ತಿತ್ವ ವಿಕಸನದಲ್ಲಿ ಎನ್ನೆಸ್ಸೆಸ್ ಪಾತ್ರ: ಆನ್ ಲೈನ್ ವಿಶೇಷ ಉಪನ್ಯಾಸ

September 25, 2020, 8:34 PM

ಪುಂಜಾಲಕಟ್ಟೆ( reporterkarnataka news)

ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ ಅಂಗವಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇದರ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ ೧ ಮತ್ತು ಘಟಕ ೨ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆಯ ಪ್ರಯುಕ್ತ ವ್ಯಕ್ತಿತ್ವ ವಿಕಸನದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ “ಆನ್‌ ಲೈನ್‌ ವಿಶೇಷ ಉಪನ್ಯಾಸ ಕಾರ್ಯಕ್ರಮ ಗೂಗಲ್‌ ಮೀಟ್‌ ಮಾಧ್ಯಮದಲ್ಲಿ ನಡೆಯಿತು. 

ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಯಾನ ‘ಸದೃಢ ಭಾರತ ಸಪ್ತಾಹಕ್ಕೆ’ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಕೆ.ಗಣಪತಿ ಭಟ್ ಅವರು ಚಾಲನೆಯನ್ನು ನೀಡಿದರು.

ಯೋಜನಾಧಿಕಾರಿ ಸಂತೋಷ್ ಪ್ರಭು ಪ್ರಾಸ್ತಾವಿಕ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಸಹ್ಯಾದ್ರಿ ಕಾಲೇಜಿನ ಸಹ  ಪ್ರಾಧ್ಯಪಕರಾದ ಪ್ರೊ. ರಮೇಶ್‌ ಕೆ.ಜಿ. ಅವರು ಮಾತನಾಡಿ ವ್ಯಕ್ತಿತ್ವ ವಿಕಸನದಲ್ಲಿ ಎನ್‌ ಎಸ್‌ ಎಸ್‌ ಯಾವ ರೀತಿ ಪಾತ್ರವನ್ನು ವಹಿಸುತ್ತದೆ ಮತ್ತುವಿದ್ಯಾರ್ಥಿ ಗಳ ಬೆಳವಣಿಗೆಗೆ ಎನ್‌ ಎಸ್‌ ಎಸ್‌ ಎಷ್ಟು ಉಪಯುಕ್ತವಾಗಿದೆ ಎಂದು ಅವರ ಅನುಭವವನ್ನು ಹಂಚಿಕೊಂಡರು. 

ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ.ರವಿಶಂಕರ್‌ ಬಿ ರವರು ಸದೃಢ ಭಾರತ ಸಪ್ತಾಹದ ಬಗ್ಗೆ ಮಾಹಿತಿ ನೀಡಿದರು.

ಪ್ರಾಂಶುಪಾಲ ಪ್ರೊ. ಕೆ. ಗಣಪತಿ ಭಟ್‌ ಅವರು ಅಧ್ಯಕ್ಷೀಯ ನೆಲೆಯಲ್ಲಿ ಶುಭ ಹಾರೈಸಿ ಸದೃಢ ಭಾರತ ಪ್ರತಿಜ್ಞೆಯನ್ನು ಬೋಧಿಸಿದರು. ಯೋಜನಾಧಿಕಾರಿ ಪ್ರೊ .ರಾಜೇಶ್ವರಿ ಎಚ್‌. ಎಸ್‌ . ಅವರು ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆಯ ಕುರಿತು ಆಯೋಜಿಸಿದ ಸ್ಪರ್ಧಿಗಳ ವಿವರಗಳನ್ನು ನೀಡಿದರು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಗಳು ಮತ್ತು 85 ಸ್ವಯಂಸೇವಕರು ಭಾಗವಹಿಸಿದ್ದರು. ಸ್ಮಿತಾ

 ಕಾರ್ಯಕ್ರಮ ನಿರೂಪಿಸಿದರು. ಚೇತನ್‌  ಸ್ವಾಗತಿಸಿದರು ಮತ್ತು ಮಲ್ಲಿಕಾ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು