ಇತ್ತೀಚಿನ ಸುದ್ದಿ
ವಿವಿಧ ಬೇಡಿಕೆ ಆಗ್ರಹಿಸಿ ಮಂಗಳೂರಿನಲ್ಲಿ ದೇಶ ಉಳಿಸಿ ದಿನಾಚರಣೆ
August 10, 2020, 9:23 AM

ಮಂಗಳೂರು(reporterkarnataka news):
ರೈತ ಕಾರ್ಮಿಕರ ಬೇಡಿಕೆಗಳ ಈಡೇರಿಕೆ, ಉದ್ಯೋಗ ಸೃಷ್ಟಿ- ನಿರುದ್ಯೋಗದ ನಿವಾರಣೆ, ನೂತನ ಶಿಕ್ಷಣ ನೀತಿ ವಾಪಸಾತಿ, ಉಪಕರಣ ಖರೀದಿ ಹಗರಣದ ಸಮಗ್ರ ತನಿಖೆ ಮುಂತಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶಾದ್ಯಂತ ಜರುಗಿದ ದೇಶ ಉಳಿಸಿ ದಿನಾಚರಣೆಯು ಮಂಗಳೂರಿನಲ್ಲಿಯೂ ಸೋಮವಾರ ನಡೆಯಿತು.ಪ್ರತಿಭಟನಾ ಸಭೆಯನ್ನುದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನಾಯಕರಾದ ವಾಸುದೇವ ಉಚ್ಚಿಲ್, ಎಐಟಿಯುಸಿ ಮುಖಂಡರಾದ ಸೀತಾರಾಮ ಬೇರಿಂಜ, ಸಿಐಟಿಯಿ ನಾಯಕರಾದ ಜೆ.ಬಾಲಕೃಷ್ಣ ಶೆಟ್ಟಿ, ಡಿವೈಎಫ್ ಐ ನಾಯಕರಾದ ಮುನೀರ್ ಕಾಟಿಪಳ್ಳ, ಎಸ್ ಎಫ್ ಐ ನಾಯಕಿ ಮಾಧುರಿ ಬೋಳಾರ ಮುಂತಾದವರು ಮಾತನಾಡಿದರು.

ಹೋರಾಟದ ನೇತೃತ್ವವನ್ನು ಸಿಐಟಿಯು ನಾಯಕರಾದ ಸುನಿಲ್ ಕುಮಾರ್ ಬಜಾಲ್, ಬಾಬು ದೇವಾಡಿಗ, ದಿನೇಶ್ ಶೆಟ್ಟಿ, ದಯಾನಂದ ಶೆಟ್ಟಿ, ಸಂತೋಷ್ ಆರ್.ಎಸ್., ಎಐಟಿಯುಸಿ ಮುಖಂಡರಾದ ವಿ.ಕುಕ್ಯಾನ್, ಕರುಣಾಕರ್, ಸುಧಾಕರ್, ಮಹಿಳಾ ಸಂಘಟನೆಯ ಮುಖಂಡರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ, ಸುಲೋಚನಾ, ರೇಣುಕಾ, ಚಿತ್ರಾ, ಪ್ರಮೀಳಾ ದೇವಾಡಿಗ, ಡಿವೈಎಫ್ ಐ ನಾಯಕರಾದ ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ಸಾಧಿಕ್ ಕಣ್ಣೂರು, ಪ್ರಶಾಂತ್ ಉರ್ವಾಸ್ಟೋರ್,
ಎಸ್ ಎಫ್ ಐ ನಾಯಕರಾದ ವಿಕಾಸ್ ಕುತ್ತಾರ್, ದಲಿತ ಸಂಘಟನೆಯ ಮುಖಂಡರಾದ ತಿಮ್ಮಯ್ಯ ಕೊಂಚಾಡಿ, ಕೃಷ್ಣ ತಣ್ಣೀರುಬಾವಿ, ಸಮುದಾಯದ ಯಶವಂತ ಮರೋಳಿ, ಬ್ಯಾಂಕ್ ನೌಕರರ ಸಂಘಟನೆಯ ಮುಖಂಡರಾದ ವಿನ್ಸೆಂಟ್ ಡಿಸೋಜ ಮುಂತಾದವರು ವಹಿಸಿದ್ದರು.