ಇತ್ತೀಚಿನ ಸುದ್ದಿ
ಬಿಜೆಪಿ ಸೇರಿದ ಎಚ್. ವಿಶ್ವನಾಥ್ ಗೆ ಬಿಗ್ ಶಾಕ್: ಸಚಿವನಾಗಲು ಅನರ್ಹ ಎಂದ ರಾಜ್ಯ ಹೈಕೋರ್ಟ್
November 30, 2020, 11:05 PM

ಬೆಂಗಳೂರು (reporterkarnataka news): ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರಿಗೆ ರಾಜ್ಯ ಹೈಕೋರ್ಟ್ ಕಪಾಳ ಮೋಕ್ಷ ಮಾಡಿದೆ. ಸಚಿವನಾಗುವ ಅವರ ಆಕಾಂಕ್ಷೆಗೆ ತಣ್ಣೀರೆರಚಿದೆ.
ಸಚಿವರಾಗಲು ವಿಶ್ವನಾಥ್ ಅನರ್ಹ ಎಂದು ಹೈಕೋರ್ಟ್ ಹೇಳಿದೆ.
ಎಚ್. ವಿಶ್ವನಾಥ್, ಆರ್ ಶಂಕರ್ ಮತ್ತು ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗಿಯ ಪೀಠವು, ಎಚ್.ವಿಶ್ವನಾಥ್ ಸಚಿವರಾಗಲು ಅನರ್ಹರಾಗಿದ್ದಾರೆ ಎಂದು ಹೇಳಿದೆ.
ವಿಶ್ವನಾಥ್ ಅನರ್ಹತೆಯನ್ನು ಮುಖ್ಯಮಂತ್ರಿ ಪರಿಗಣಿಸಬೇಕು. ಕಲಂ 164(1ಬಿ), 361 ಬಿ ಅಡಿ ವಿಶ್ವನಾಥ್ ಅನರ್ಹರು. ಹೀಗಾಗಿ 2021ರವರೆಗೆ ಸಚಿವರಾಗಲು ಅರ್ಹರಲ್ಲ ಎಂದಿದೆ.