ಇತ್ತೀಚಿನ ಸುದ್ದಿ
ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂನಲ್ಲಿ ಮೇಲ್ಮನವಿ : ಮಾಜಿ ಸಚಿವ ಎಚ್. ವಿಶ್ವನಾಥ್
December 1, 2020, 11:42 AM

ಬೆಂಗಳೂರು(reporterkarnataka news): ಸಚಿವ ಸ್ಥಾನ ಅಲಂಕರಿಸದಂತೆ ನಿರ್ಬಂಧ ವಿಧಿಸಿರುವ ರಾಜ್ಯ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಹೆಚ್ ವಿಶ್ವನಾಥ್ ನಿರ್ಧರಿಸಿದ್ದಾರೆ.
ಬೆಂಗಳೂರಿನಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಹೆಚ್ ವಿಶ್ವನಾಥ್ ತಿಳಿಸಿದರು. ಸೋಮವಾರ ತೀರ್ಪು ನೀಡಿದ್ದ ರಾಜ್ಯ ಹೈಕೋರ್ಟ್, ವಿಶ್ವ ನಾಥ್ ಅವರು ಸಚಿವ ಸ್ಥಾನ ಅಲಂಕರಿಸುವುದಕ್ಕೆ ನಿರ್ಬಂಧ ಹೇರಿತ್ತು.