ಇತ್ತೀಚಿನ ಸುದ್ದಿ
ವಿಶ್ವದ ಅತ್ಯಂತ ಬಲಿಷ್ಠ ವಾಯುಪಡೆಯ 83ನೇ ಸಂಸ್ಥಾಪನಾ ದಿನಾಚರಣೆ: ಪ್ರಧಾನಿ ಮೋದಿ ಶುಭ ಹಾರೈಕೆ
October 8, 2020, 8:53 AM

ನವದೆಹಲಿ(reporterkarnataka news): ಭಾರತೀಯ ವಾಯುಪಡೆ ಇಂದು ಸಂಸ್ಥಾಪನಾ ದಿನವನ್ನು ಆಚರಿಸುತ್ತಿದೆ. ವಿಶ್ವದ ಅತ್ಯಂತ ಬಲಶಾಲಿ ವಾಯುಪಡೆಗಳಲ್ಲಿ ಭಾರತದ ವಾಯುಪಡೆ ಮುಂಚೂಣಿಯಲ್ಲಿದೆ. ಫ್ರಾನ್ಸ್ ನಿಂದ ಖರೀದಿಸಲಾದ ರಫೇಲ್ ಯುದ್ಧ ವಿಮಾನ ಈ ಬಾರಿಯ ವಿಶೇಷ ಆಕರ್ಷಣೆ.
ರಫೇಲ್ ಸೇರಿದಂತೆ ಭಾರತದ ವಾಯುಪಡೆ ತನ್ನ ಬತ್ತಳಿಕೆಯಲ್ಲಿರುವ ಅತ್ಯಾಧುನಿಕ ಯುದ್ದ ವಿಮಾನಗಳನ್ನು ಇಂದು ಪ್ರದರ್ಶಿಸಲಿದೆ.
ಇದೇ ವೇಳೆ ವಾಯುಪಡೆ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಆಕಾಶದ ರಕ್ಷಣೆ ಜತೆಗೆ ಪ್ರಾಕೃತಿಕ ವಿಕೋಪದ ವೇಳೆ ಮಾದರಿ ಸೇವೆ ಸಲ್ಲಿಸಿದೆ ಎಂದು ಪ್ರಧಾನಿ ಶ್ಲಾಘಿಸಿದ್ದಾರೆ