ಇತ್ತೀಚಿನ ಸುದ್ದಿ
ತಂದೆಯಾದ ವಿರಾಟ್ ಕೊಹ್ಲಿ, ಹೆಣ್ಣು ಮಗುವಿಗೆ ಜನನ ನೀಡಿದ ಅನುಷ್ಕಾ
January 11, 2021, 6:45 PM

ಮುಂಬೈ(Reporter Karnataka News)
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಿಹಿ ಸುದ್ದಿಯನ್ನು ಸ್ವತ: ವಿರಾಟ್ ಕೊಹ್ಲಿ ಹಂಚಿಕೊಂಡಿದ್ದಾರೆ.
ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಪತ್ನಿ ಹಾಗೂ ಮಗಳು ಪೂರ್ಣ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
‘ಇಂದು ಮಧ್ಯಾಹ್ನ ನಾವು ಹೆಣ್ಣು ಮಗುವಿನೊಂದಿಗೆ ಆಶೀರ್ವದಿಸಲ್ಪಟ್ಟಿದ್ದೇವೆ. ಈ ಸಿಹಿ ಸುದ್ದಿಯನ್ನು ಅತ್ಯುತ್ಸುಕತೆಯಿಂದ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಿಮ್ಮ ಪ್ರೀತಿ, ಪ್ರಾರ್ಥನೆ ಹಾಗೂ ಶುಭಾಶಯಗಳಿಗೆ ನಾವು ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಅನುಷ್ಕಾ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದು, ಜೀವನದಲ್ಲಿ ಈ ಸೌಭಾಗ್ಯವನ್ನು ಅನುಭವಿಸಲು ಸಾಧ್ಯವಾಗಿರುವುದಕ್ಕೆ ನಾವು ಅದೃಷ್ಟವಂತರು. ಈ ಸಂದರ್ಭದಲ್ಲಿ ನಮ್ಮ ಖಾಸಗಿತನವನ್ನು ನೀವೆಲ್ಲರು ಗೌರವಿಸುವುದಾಗಿ ಭಾವಿಸುತ್ತೇನೆ. ಪ್ರೀತಿಯಿಂದ ವಿರಾಟ್’ ಎಂದು ಉಲ್ಲೇಖ ಮಾಡಿದ್ದಾರೆ.