ಇತ್ತೀಚಿನ ಸುದ್ದಿ
ವೀರಾಂಜನೇಯ ಸೇವಾ ಸಮಿತಿಯಿಂದ ಮತ್ತೆ ಅಸಕ್ತ ಕುಟುಂಬಕ್ಕೆ ಸಹಾಯಧನ ಹಸ್ತಾಂತರ
December 8, 2020, 10:07 PM

ಬೆಳ್ತಂಗಡಿ(reporterkarnataka news):
ವಿದ್ಯಾದಾನ ಹಾಗೂ ಬಡವರ ಸೇವೆಯೇ ನಮ್ಮ ಧ್ಯೇಯ ಎಂಬ ಪರಿಕಲ್ಪನೆಯೊಂದಿಗೆ 3 ವರ್ಷ 11 ತಿಂಗಳ ಪಯಣದ ಸಾರ್ಥಕತೆಯೊಂದಿಗೆ ಸುಮಾರು 43 ಅಶಕ್ತ ಬಡಕುಟುಂಬಗಳಿಗೆ ಸಹಾಯಹಸ್ತ ನೀಡಿ ಯುವಕರ ಸ್ಪೂರ್ತಿಯ ಚಿಲುಮೆಯಾದ “ವೀರಾಂಜನೇಯ ಸೇವಾ ಸಮಿತಿ”
ಮತ್ತೆ ಒಂದು ಬಡಕುಟುಂಬಕ್ಕೆ ಸಹಾಯಹಸ್ತ ನೀಡಿ ಬಡವರಪಾಲಿನ ಆಪತ್ಪಾಂಧವ ಎನಿಸಿದೆ.
ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಜಯಂತ ಅವರು ಕಳೆದ ಕೆಲವು ತಿಂಗಳುಗಳಿಂದ ಗಂಟಲಿನ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರು. ಇದುವರೆಗೆ ಸುಮಾರು 7-8 ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದ್ದು, ಮುಂದಿನ ಚಿಕಿತ್ಸೆಗೆ ಈ ಬಡಕುಟುಂಬಕ್ಕೆ ಅಷ್ಟೊಂದು ದೊಡ್ಡ ಮೊತ್ತ ಭರಿಸಲು ಸಾಧ್ಯವಿಲ್ಲ. ಈ ಬಡ ಕುಟುಂಬದ ಕಷ್ಟವನ್ನು ಗುರುತಿಸಿದ ಶ್ರೀ ವೀರಾಂಜನೇಯ ಸೇವಾ ಸಮಿತಿಯು ತಮ್ಮ ತಂಡದಿಂದ ಸಂಗ್ರಹಿಸಿದ 15,000 ರೂ. ಸಹಾಯಧನದ ಚೆಕ್ಕನ್ನು ತಂಡದ ಸಹೋದರರ ಸಮ್ಮುಖದಲ್ಲಿ ಜಯಂತ ಅವರ ಬಡಕುಟುಂಬಕ್ಕೆ ಹಸ್ತಾಂತರಿಸಿದೆ. ಈ ಯೋಜನೆಯ ಯಶಸ್ಸಿನೊಂದಿಗೆ 39 ಮಾಸಿಕ ಸೇವಾಯೋಜನೆ ಹಾಗೂ 5 ತುರ್ತು ಯೋಜನೆ ಯಶಸ್ವಿಯಾಗಿದೆ.