7:17 PM Saturday23 - January 2021
ಬ್ರೇಕಿಂಗ್ ನ್ಯೂಸ್
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಬೆಳಗಾವಿ ಲೋಕಸಭೆ ಉಪ ಚುನಾವಣೆ: ಬಿಜೆಪಿ ಟಿಕೆಟ್ ಗೆ ಪ್ರಮೋದ್ ಮುತಾಲಿಕ್ ಹಕ್ಕೊತ್ತಾಯ ಮಹಿಳಾ ಪೊಲೀಸ್ ಮೇಲೆ ಹಲ್ಲೆ ಆರೋಪ: ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ವಿರುದ್ಧ… ಕಾಳ ಸಂತೆಯಲ್ಲಿ ಆಹಾರ ದಾಸ್ತಾನು ಹೆಚ್ಚಾಗುವ ಭೀತಿಯಿದೆ: ಮಾಜಿ ಸಚಿವ ಯು.ಟಿ ಖಾದರ್ ಅರ್ನಾಬ್ ಗೋಸ್ವಾಮಿ ವಾಟ್ಸಾಪ್ ಚಾಟ್ ಬಗ್ಗೆ ಕೇಂದ್ರ ಯಾಕೆ ಮಾತನಾಡುತ್ತಿಲ್ಲ: ಸೋನಿಯಾ ಪ್ರಶ್ನೆ  ಒತ್ತಡ ರಾಜಕೀಯಕ್ಕೆ ಮಣಿದು ಖಾತೆ ಮರು ಹಂಚಿಕೆ  ಮಾಡಿದ ಮುಖ್ಯಮಂತ್ರಿ ಬಿಎಸ್ ವೈ ಶಿವಮೊಗ್ಗದಲ್ಲಿ ನಡೆದದ್ದು ಭೂ ಕಂಪನವಲ್ಲ, ರೈಲ್ವೆ ಕ್ರಷರ್ ಸ್ಫೋಟ: 10ಕ್ಕೂ ಅಧಿಕ ಸಾವು… ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನವನ ಇಂದು ಸುಬ್ರಹ್ಮಣ್ಯದಲ್ಲಿ ಉದ್ಘಾಟನೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಇಂದು ರಾಜ್ಯ ಧಾರ್ಮಿಕ ಪರಿಷತ್ ವಿಶೇಷ… ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರಿನಲ್ಲಿ ಭೂ ಕಂಪನದ ಅನುಭವ: ಮನೆಯಿಂದ ಬೀದಿಗೆ ಓಡಿದ ಜನರು

ಇತ್ತೀಚಿನ ಸುದ್ದಿ

ವಿಮಾನ ದುರಂತದಲ್ಲಿ ಸಹ ಪೈಲಟ್ ಅಖಿಲೇಶ್ ಸಾವನ್ನಪ್ಪಿರುವುದು ಗರ್ಭಿಣಿ ಪತ್ನಿ ಮೀರಾಗೆ ಇನ್ನೂ ತಿಳಿದೇ ಇಲ್ಲ!

August 9, 2020, 3:37 AM

ಕಾಸರಗೋಡು(reporterkarnatakanews): ಕೇರಳದ ಕೊಯಿಕೋಡ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ದುರಂತದಲ್ಲಿ ಸಹ ಪೈಲೆಟ್ ಅಖಿಲೇಶ್ ಕುಮಾರ್ ಶರ್ಮ ಮೃತಪಟ್ಟಿರುವ ವಿಷಯ ಅವರ ಗರ್ಭಿಣಿ ಪತ್ನಿಗೆ ಇನ್ನೂ ತಿಳಿದಿಲ್ಲ. ಆಕೆಯ ಕುಟುಂಬದವರು ಸದ್ಯಕ್ಕೆ ಈ ವಿಷಯವನ್ನು ಮುಚ್ಚಿಟ್ಟಿದ್ದಾರೆ.

ಶರ್ಮ ಅವರು ಉತ್ತರ ಪ್ರದೇಶದ ಮಥುರಾಕ್ಕೆ ಸೇರಿದವರು. ಅವರ ಅಪ್ಪ – ಅಮ್ಮ, ಪತ್ನಿ ಅಲ್ಲೇ ನೆಲೆಸಿದ್ದಾರೆ. ಶರ್ಮ ಅವರ ಪಾರ್ಥಿವ ಶರೀರ ಇದೀಗ ದೆಹಲಿ ತಲುಪಿದೆ. ಅಲ್ಲಿಂದ ಉತ್ತರ ಪ್ರದೇಶದ ಮಥುರಾಕ್ಕೆ ಕೊಂಡೊಯ್ಯಲಾಗುವುದು.ಮಥುರಾದ ಗೋವಿಂದ್ ನಗರದ ನಿವಾಸಿಯಾಗಿರುವ ಅಖಿಲೇಶ್ ಕುಮಾರ್ ಶರ್ಮ ಶುಕ್ರವಾರ ರಾತ್ರಿ ಕೊಯಿಕೋಡ್ ನ ಕರಿಪುರಂನಲ್ಲಿ ಸಂಭವಿಸಿದ ಭೀಕರ ವಿಮಾನದ ದುರಂತದಲ್ಲಿ ಮೃತಪಟ್ಟಿದ್ದರು. ಇತರ 17 ಮಂದಿ ಕೂಡ ಸಾವನ್ನಪ್ಪಿದ್ದರು.

ಅಖಿಲೇಶ್ ಎರಡು ವರ್ಷಗಳ ಹಿಂದೆಯಷ್ಟೇ  ವಿವಾಹವಾಗಿದ್ದರು. ಪತ್ನಿ ಮೀರಾ ಗರ್ಭಿಣಿಯಾಗಿದ್ದು, ಪತಿ ನಿಧನ ವಾರ್ತೆಯನ್ನು ಕುಟುಂಬಸ್ಥರು ಗಮನಕ್ಕೆ ತಂದಿಲ್ಲ. ದುಖದ ಸುದ್ದಿಯನ್ನು ಆಕೆಗೆ ಕುಟುಂಬಸ್ಥರು ಹೇಳಿಲ್ಲ.

ಅಖಿಲೇಶ್ ತಂದೆ ತುಳಸಿ ರಾಮ್ ಶರ್ಮ ಮಾತನಾಡಿ, ಶುಕ್ರವಾರ ರಾತ್ರಿ 10.30ರ ಸುಮಾರಿಗೆ ಏರ್ ಇಂಡಿಯಾ ಸಂಸ್ಥೆಯಿಂದ ವಿಮಾನ ದುರಂತದಲ್ಲಿ ಮಗ ಮೃತಪಟ್ಟಿರುವ ವಿಷಯ ತಿಳಿಯಿತು. ಆದರೆ ಸೊಸೆಗೆ ಈ ವಿಷಯ ತಿಳಿಸದೇ ಮುಚ್ಚಿಟ್ಟಿದ್ದೇವೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು