8:25 AM Wednesday27 - January 2021
ಬ್ರೇಕಿಂಗ್ ನ್ಯೂಸ್
ರೇಡಿಯೋ ಸಾರಂಗ್ ಮತ್ತು ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಬೆಂಗ್ರೆ ಬೀಚ್ ಸ್ವಚ್ಛತೆ ಜಾನಪದ ಕ್ರೀಡೆ ಕಂಬಳ ಜನವರಿ ಅಂತ್ಯದಿಂದ ಪ್ರಾರಂಭ: ಸಂಸದ ನಳಿನ್ ಕುಮಾರ್ ಕಟೀಲ್ ಎಸ್‌ಡಿಪಿಐ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ರೈತ ಐಕ್ಯತಾ ಸಂಗಮ ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ: ಕುಟುಂಬದ ಸಮಸ್ಯೆ ಕಾರಣ? ಮಂಗಳೂರಿನ ನರ್ಸಿಂಗ್ ಕಾಲೇಜಿನ 4 ಮಂದಿ ವಿದ್ಯಾರ್ಥಿನಿಯರಿಗೆ ಕೊರೊನಾ: ಪಾಲಕರಲ್ಲಿ ಮತ್ತೆ ಭೀತಿ… ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾದ ಕರ್ನಾಟಕದ ಟ್ಲಾಬ್ಲೊದಲ್ಲಿ ಕನ್ನಡ ಧ್ವಜ ನಾಪತ್ತೆ ಕಟೀಲು ಮೇಳ ಸೇವೆ ಆಟಗಳು:  ಇಂದು ಎಲ್ಲೆಲ್ಲಿ?  ನೀವೇ ನೋಡಿ ಬಡವರನ್ನು ಬೀದಿ ಪಾಲು ಮಾಡಿದರೆ ಜೋಕೆ: ಪಾಲಿಕೆಗೆ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್… ವಿ.ವಿ ಕಾಲೇಜಿನಲ್ಲಿ ಪ್ರೌಢ ಶಾಲಾ ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿಗಳಿಗೆ ರಾಜ್ಯ ಮಟ್ಟದ ಕಾರ್ಯಾಗಾರ ಬಲ್ಯ ಸಮೀಪ ಕಾರು- ಬೊಲೆರೋ ಅಪಘಾತ:  ಒಬ್ಬ ಸಾವು, 4 ಮಂದಿ ತೀವ್ರ…

ಇತ್ತೀಚಿನ ಸುದ್ದಿ

ವಿದ್ಯುತ್ ಸಂಪರ್ಕವೇ ಕಾಣದ 2 ಮನೆಗಳಿಗೆ  ಕೊನೆಗೂ ಬಂತು ಬೆಳಕು !

November 26, 2020, 11:18 PM

ಸುರತ್ಕಲ್(reporterkarnataka news):

ಮಂಗಳೂರು:ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಮಹಾನಗರ ಪಾಲಿಕೆ ವ್ಯಾಪ್ತಿಯ ಮೂರನೇ ವಾರ್ಡಿನಲ್ಲಿ ಪಾಲಿಕೆಯ ‘ಸ್ವಾಸ್ಥ ಕುಟೀರ ಜ್ಯೋತಿ’ ಯೋಜನೆಯನ್ವಯ ಗಣೇಶಪುರದ

ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಸಂಯೋಜನೆಯಲ್ಲಿ ಎರಡು ಕುಟುಂಬಗಳಿಗೆ ವಿದ್ಯುತ್ ಸಂಪರ್ಕವನ್ನು ಶಾಸಕ ಡಾ.ವೈ ಭರತ್ ಶೆಟ್ಟಿ ಹಾಗೂ ಟ್ರಸ್ಟ್ ನ ಅಧ್ಯಕ್ಷ ಕೂಸಪ್ಪ ಶೆಟ್ಟಿಗಾರ್  ಅವರು ಗುರುವಾರ ಸಂಜೆ ಸ್ವಿಚ್ ಆನ್ ಮಾಡುವ ಮೂಲಕ ಒದಗಿಸಿದರು. ಪಾಲಿಕೆ ಚುನಾವಣೆಯ ಪೂರ್ವದಲ್ಲಿ ಈ ಕುಟುಂಬಗಳಿಗೆ ನೀಡಿದ ಭರವಸೆಯನ್ನು ಈಡೇರಿಸುವ ಮೂಲಕ ನಮ್ಮ ಈ ಭಾಗದ ಕಾರ್ಪೋರೇಟರ್ ಹಾಗೂ ಅಭ್ಯುದಯ ಭಾರತಿ ಸೇವಾ  ಟ್ರಸ್ಟ್ ಮತ್ತು ನಮ್ಮ ಕಾರ್ಯಕರ್ತರು ಉತ್ತಮ ಕಾರ್ಯ ಮಾಡಿದ್ದಾರೆ. ಅವರೆಲ್ಲರನ್ನು ಅಭಿನಂದಿಸುವುದಾಗಿ ಶಾಸಕರು ತಿಳಿಸಿದರು.

ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ನ‌‌ ಅಧ್ಯಕ್ಷರು ಕೂಸಪ್ಪ‌‌ ಶೆಟ್ಟಿಗಾರ್, ಟ್ರಸ್ಟ್ ನ ಸದ್ಯಸರಾದ ವಸಂತ್ ರಾವ್ , ಮನಪಾ ಸದಸ್ಯರಾದ ಲೋಕೇಶ್ ಬೊಳ್ಳಾಜೆ, ಗಣೇಶಪುರ ಮಹಾಗಣಪತಿ ದೇವಸ್ಥಾನ ದ ವ್ಯವಸ್ಥಾನ ಸಮಿತಿಯ ಸದಸ್ಯರಾದ ಧರ್ಮೆಂದ್ರ ಗಣೇಶಪುರ, ಮಹಾಂಕಾಳಿ ದೈವಸ್ಥಾನ ಶಾಂತ ಗುರಿಕಾರ ಹಾಗೂ ದಯಾನಂದ ಗುರಿಕಾರ ಹಿಂದು ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷರಾದ ಎ.ವಾದಿರಾಜ್, ಉಪಾಧ್ಯಕ್ಷರಾದ ಕರುಣಾಕರ ಶೆಟ್ಟಿ, ಉತ್ತರ ಮಂಡಲ ಉಪಾಧ್ಯಕ್ಷರಾದ ರತ್ನ ದೇವದಾಸ್, ಮಂಡಲ ಮಹಿಳಾ ಮೊರ್ಚಾ ಕಾರ್ಯದರ್ಶಿಯಾದ ಶೈಲಜಾ ಗಣೇಶಕಟ್ಟೆ, ಮಂಡಲ‌ ಸದ್ಯಸರಾದ ಜಯಕುಮಾರ್‌ ಗಣೇಶಪುರ, ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ‌ನ‌ ಸದಸ್ಯರು, ಭಾರತೀಯ ಜನತಾ ಪಾರ್ಟಿ 3 ನೇ ವಾರ್ಡ್ ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರು, ಫಲಾನುಭವಿಯಾದ  ಗುಲಾಬಿ ಮತ್ತು ಪ್ರೇಮ್ ಕುಮಾರ್ ಮನೆಯವರು ಉಪಸ್ಥಿತಿ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು