1:13 AM Sunday24 - January 2021
ಬ್ರೇಕಿಂಗ್ ನ್ಯೂಸ್
ವಿ.ವಿ ಕಾಲೇಜಿನಲ್ಲಿ ಪ್ರೌಢ ಶಾಲಾ ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿಗಳಿಗೆ ರಾಜ್ಯ ಮಟ್ಟದ ಕಾರ್ಯಾಗಾರ ಬಲ್ಯ ಸಮೀಪ ಕಾರು- ಬೊಲೆರೋ ಅಪಘಾತ:  ಒಬ್ಬ ಸಾವು, 4 ಮಂದಿ ತೀವ್ರ… ಕಾಸರಗೋಡು: ಮೆಡಿಕಲ್ ಶಾಪ್ ಗೆ ಔಷಧ ಖರೀದಿಸಲು ಬಂದ ವ್ಯಕ್ತಿಯನ್ನು ಗುಂಪೊಂದು ಥಳಿಸಿ… ಕಾಳು ಹಾಕಿ ಕೋಳಿ ಕದಿಯುವ ಭಿಕ್ಷುಕರಿದ್ದಾರೆ ಎಚ್ಚರಿಕೆ: ನಿಮ್ಮ ಮನೆಗೂ ಬಂದಾರು ಜೋಕೆ!… ವಿವಾದಾತ್ಮಕ ವಾಟ್ಸಾಪ್ ಚಾಟ್ : ಮಹಾರಾಷ್ಟ್ರ ಸರಕಾರದಿಂದ ಅರ್ನಾಬ್ ಮತ್ತೆ ಬಂಧನ ಸಾಧ್ಯತೆ ವೈರಲ್ ಆಗುತ್ತಿದೆ ಕೆ.ಎಲ್. ರಾಹುಲ್ – ಆಶಿಕಾ ರಂಗನಾಥ್ ಜೋಡಿಯ ಫೋಟೋ: ನೆಟ್ಟಿಗರಿಂದ… ಗಣರಾಜ್ಯೋತ್ಸವ ದಿನ ಬೆಂಗಳೂರಿನಲ್ಲೂ ನಡೆಯಲಿದೆ ರೈತ- ಕಾರ್ಮಿಕರ ಟ್ರ್ಯಾಕ್ಟರ್ ಪರೇಡ್  ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಕೆಪಿಎಸ್ ಇ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ಬಂಧಿತರಿಂದ 24 ಲಕ್ಷ ರೂ.… ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆಯಿತೇ ರಹಸ್ಯ ಸಭೆ: ಬಿಜೆಪಿಯೊಳಗಿನ ಮುನಿಸು ತಣ್ಣಗಾಗಿಲ್ವೇ? 

ಇತ್ತೀಚಿನ ಸುದ್ದಿ

ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾ ನಗರದ ಅಭ್ಯಾಸ ವರ್ಗ ಸಮಾರೋಪ

January 6, 2021, 7:03 PM

ಮಂಗಳೂರು(reporterkarnataka news): ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಮಹಾನಗರದ ಅಭ್ಯಾಸ ವರ್ಗದ ಸಮಾರೋಪ ಸಮಾರಂಭವು ಶಕ್ತಿನಗರದ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನದ ಸುಮನಸ ಸಭಾಭವನದಲ್ಲಿ ನೆರವೇರಿತು .

ಸಮಾರೋಪ ಭಾಷಣ ಮಾಡಿದ ಅಭಾವಿಪ ವಿಭಾಗ ಸಂಘಟನಾ ಕಾರ್ಯದರ್ಶಿ ಬಸವೇಶ್ ಕೋರಿ ಮಾತನಾಡಿ, ವಿದ್ಯಾರ್ಥಿ ಪರಿಷತ್ ನ ಬಗ್ಗೆ , ಕಾರ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು .  

ಸಮಾರೋಪ ಸಮಾರಂಭದಲ್ಲಿ ವಿಭಾಗ ಪ್ರಮುಖರಾದ ಕೇಶವ ಬಂಗೇರ ಮಂಗಳೂರು ಮಹಾನಗರದ ನೂತನ ಕಾರ್ಯಕಾರಿಣಿ ಘೋಷಿಸಿದರು. ಮಂಗಳೂರು ಮಹಾನಗರದ ಅಧ್ಯಕ್ಷರಾಗಿ ಭಾರತಿ ಪ್ರಭು ಅವರು ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಉಪನ್ಯಾಸಕ ಚಂದ್ರಶೇಖರ್ , ಯತೀಶ್ , ಶ್ರೀನಿವಾಸ್ ಆಯ್ಕೆಯಾದರು.

ಮಂಗಳೂರು ಮಹಾನಗರದ ಕಾರ್ಯದರ್ಶಿಯಾಗಿ ಎಸ್ಡಿಎಂ ಕಾನೂನು ಕಾಲೇಜಿನ ಶ್ರೇಯಸ್ ಶೆಟ್ಟಿ ಆಯ್ಕೆಯಾದರು. ಸಹ ಕಾರ್ಯದರ್ಶಿಗಳಾಗಿ ಶ್ರೇಯಸ್ , ಕಿರಣ್ , ಸ್ವಸ್ತಿಕ್  , ಆತ್ಮಿಕ ಆಯ್ಕೆಯಾದರು . 

ಜಿಲ್ಲಾ  ವಿದ್ಯಾರ್ಥಿನಿ ಪ್ರಮುಖ್ ಆಗಿ ಸುಶಾನ , ತಾಲೂಕು ಸಂಚಾಲಕರಾಗಿ ನಿಶಾನ್ ಆಳ್ವ , ನಗರ ವಿದ್ಯಾರ್ಥಿನಿ ಪ್ರಮುಖ್ ಶ್ರೀ ಲಕ್ಷ್ಮಿ, ಹಾಸ್ಟೆಲ್ ಪ್ರಮುಖ ಕೀರ್ತನ್ , ಸೇವಾ ಪ್ರಮುಖ್ ಸಂತೋಷ್ , ಕಲಾಮಂಚ್ ಪಮುಕ್ ವಿನ್ಯಾಸ , ವೃತ್ತಿಪರ ಶಿಕ್ಷಣ ಪ್ರಮುಖ ಶ್ರೀಪಾದ್ ತಂತ್ರಿ , ಸಾಮಾಜಿಕ ಜಾಲತಾಣ ಪ್ರಮುಖ ಆದಿತ್ಯ, ಕಾರ್ಯಾಲಯ ಕಾರ್ಯದರ್ಶಿ ಆದಿತ್ಯ ಶೆಟ್ಟಿ , ಎಸ್.ಎಫ್.ಡಿ ಪ್ರಮುಖ್ ವರುಣ ಸಿಂಗಾಲ ಹೋರಾಟ ಪ್ರಮುಖ್ ಪ್ರಣಾಮ್ ಮತ್ತು ನೀಲೇಶ್ ಆಯ್ಕೆಯಾದರು .

ನೂತನವಾಗಿ ಆಯ್ಕೆಯಾದ ನಗರ ಕಾರ್ಯದರ್ಶಿ ಅವರಿಗೆ ನಗರ ಕಾರ್ಯದರ್ಶಿಯಾಗಿದ್ದ ಮಣಿಕಂಠ ಕಳಸ ಅವರು ಎಬಿವಿಪಿಯ ಧ್ವಜವನ್ನು ನೀಡುವ ಮೂಲಕ ಜವಾಬ್ದಾರಿಯನ್ನು ಹಸ್ತಾಂತರಿಸಿದರು .

ಅಭಾವಿಪ ಹಿರಿಯರಾದ ಡಾ.ಚ.ನ ಶಂಕರರಾಯ ಉಪಸ್ಥಿತರಿದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು