ಇತ್ತೀಚಿನ ಸುದ್ದಿ
Big Breaking : ವಿಧಾನ ಪರಿಷತ್ ಉಪ ಸಭಾಪತಿ ಎಚ್.ಎಲ್. ಧರ್ಮೇಗೌಡ ಆತ್ಮಹತ್ಯೆ
December 29, 2020, 8:18 AM

ಬೆಂಗಳೂರು(reporterkarnataka news):
ವಿಧಾನ ಪರಿಷತ್ ಉಪ ಸಭಾಪತಿ ಎಚ್.ಎಲ್. ಧರ್ಮೇಗೌಡ(65) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಗುಣಸಾಗರ ಎಂಬಲ್ಲಿ ಅವರು ರೈಲಿಗೆ ತಲೆಕೊಟ್ಟು ಸಾವು ಕಂಡುಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿಯವರಿಗೆ ಅತ್ಯಂತ ಆಪ್ತರಾದ ಅವರು ಜಾತ್ಯತೀತ ಜನತಾ ದಳದಿಂದ ವಿಧಾನ ಪರಿಷತ್ ಗೆ ಆಯ್ಕೆಗೊಂಡಿದ್ದರು. ಇತ್ತೀಚೆಗೆ ವಿಧಾನ ಪರಿಷತ್ ನಲ್ಲಿ ನಡೆದ ಕೋಲಾಹಲದ ವೇಳೆ ಸಭಾಪತಿ ಸ್ಥಾನದಲ್ಲಿ ಕೂತಿದ್ದ ಅವರನ್ನು ಎಳೆದು ಎಬ್ಬಿಸಲಾಗಿತ್ತು.