ಇತ್ತೀಚಿನ ಸುದ್ದಿ
ವಿಧಾನ ಪರಿಷತ್ ನಲ್ಲಿ ಭಾರೀ ಕೋಲಾಹಲ: ಸಭಾಪತಿ ಪೀಠದಿಂದ ಉಪ ಸಭಾಪತಿಯ ಎಳೆದಾಡಿದರು!
December 15, 2020, 4:04 PM

ಬೆಂಗಳೂರು (reporterkarnataka news): ವಿಧಾನಪರಿಷತ್ ನಲ್ಲಿ ಭಾರೀ ಗದ್ದಲ ಏರ್ಪಟ್ಟಿದೆ. ಇದುವರೆಗೂ ಕಾಣದ ಕೋಲಾಹಲ ಇಂದು ನಡೆದಿದೆ. ಉಪ ಸಭಾಪತಿ ಧರ್ಮೇಗೌಡ ಅವರನ್ನು ಕಾಂಗ್ರೆಸ್ ಸದಸ್ಯರು ಬಲವಂತವಾಗಿ ಸಭಾಧ್ಯಕ್ಷರ ಪೀಠದಿಂದ ಎಬ್ಬಿಸಿ ಕರೆದುಕೊಂಡು ಹೋಗಿದ್ದಾರೆ.
ಬಿಜೆಪಿ ಸದಸ್ಯರು ಮತ್ತೆ ಅವರನ್ನು ಅಲ್ಲಿ ಆಸೀನರನ್ನಾಗಿ ಮಾಡಲು ಯತ್ನ ನಡೆಸಿದ್ದಾರೆ. ಇಡೀ ಸದನದಲ್ಲಿ ಭಾರೀ ಗದ್ದಲ ಕೋಲಾಹಲ ನಿರ್ಮಾಣವಾಗಿದೆ.
ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಿರುವುದೇ ಈ ಕೋಲಾಹಲಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.