ಇತ್ತೀಚಿನ ಸುದ್ದಿ
ವೇಷ ಬದಲಾಯಿಸಿ ಮುಂಬೈನಲ್ಲಿ ತರಕಾರಿ ಮಾರುತ್ತಿದ್ದ ಯುಪಿ ಗ್ಯಾಂಗ್ ಸ್ಟರ್ ಸೆರೆ
September 6, 2020, 5:54 AM

ಮುಂಬೈ(reporterkarnataka news): ಎನ್ ಕೌಂಟರ್ ಗೆ ಹೆದರಿ ಮುಂಬೈನಲ್ಲಿ ಅಡಗಿದ್ದ ಕುಖ್ಯಾತ ಗ್ಯಾಂಗ್ ಸ್ಟರ್ ನೊಬ್ಬನನ್ನು ಬಂಧಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಸತತವಾಗಿ ಸುದ್ದಿಯಾಗುತ್ತಿದ್ದ ಎನ್ ಕೌಂಟರ್ ಭೀತಿಯಿಂದ ಆರೋಪಿ ಉತ್ತರ ಪ್ರದೇಶದಿಂದ ಪಲಾಯನ ಮಾಡಿದ್ದ. ಬಂಧಿತ ಪಾತಕಿಯನ್ನು ಆಶು ಜಾಟ್ ಎಂದು ಗುರುತಿಸಲಾಗಿದೆ. 40 ಕೊಲೆ ಪ್ರಕರಣಗಳಲ್ಲಿ ಅಶು ಜಾಟ್ ಆರೋಪಿಯಾಗಿದ್ದಾನೆ.
ಕಾಪೋರೇಟ್ ಸಂಸ್ಥೆಯ ಹಿರಿಯ ಅಧಿಕಾರಿ ಗೌರಬ್ ಚಾಂದೇಲ್ ಹತ್ಯೆ ಪ್ರಕರಣದಲ್ಲಿ ಆಶು ಜಾಟ್ ಪ್ರಮುಖ ಆರೋಪಿಯಾಗಿದ್ದಾನೆ. ಉತ್ತರಪ್ರದೇಶ ಸರ್ಕಾರ ಇತನ ಬಂಧನಕ್ಕೆ 2. 50 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.
ಮುಂಬೈನ ವಿಲೆ ಪಾರ್ಲೆಯಲ್ಲಿ ವೇಷ ಬದಲಾಯಿಸಿ ಆರೋಪಿ ಆಶು ಜಾಟ್ ತರಕಾರಿ ಮಾರಾಟ ಮಾಡುತ್ತಿದ್ದ ಎಂದು ವರದಿಯಾಗಿದೆ.