ಇತ್ತೀಚಿನ ಸುದ್ದಿ
ವೆಂಕಟರಮಣನಿಗೆ ಮೊರೆ ಹೋದ ಬಳಿಕ ಮಾಜಿ ಸಚಿವ ರಮಾನಾಥ ರೈ ಮತ ಚಲಾವಣೆ
December 22, 2020, 1:04 PM

ಬಂಟ್ವಾಳ(reporterkarnataka news): ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಬಿ. ರಮಾನಾಥ ರೈ ಅವರು ಮಂಗಳವಾರ ವೆಂಕಟರಮಣ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತ ಚಲಾಯಿಸಿದರು.
ಮಾಜಿ ಉಸ್ತುವಾರಿ ಸಚಿವರಾದ ರೈ ಅವರು ಬಂಟ್ವಾಳ ವೆಂಕಟರಮಣ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಬಳಿಕ ಮಾಜಿ ಸಚಿವರ ಕಳ್ಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಡಂಬಿಲ ಶಾಲೆಯ ಮತ ಗಟ್ಟೆಯಲ್ಲಿ ಮತ ಚಲಾಯಿಸಿದರು.
ರಮಾನಾಥ ರೈ ಅವರು ಕ್ಯೂನಲ್ಲಿ ನಿಂತು ಮತ ಚಲಾಯಿಸಿದರು.