ಇತ್ತೀಚಿನ ಸುದ್ದಿ
ವೆಂಕಟರಮಣ ಭಕ್ತರಿಗೆ ಗುಡ್ ನ್ಯೂಸ್: ಮಂಗಳೂರಿನಿಂದ ತಿರುಪತಿಗೆ ಕೆಎಸ್ಸಾರ್ಟಿಸಿ ವೋಲ್ವೊ ಬಸ್ ಸೇವೆ ಮತ್ತೆ ಆರಂಭ
December 19, 2020, 8:22 AM

ಮಂಗಳೂರು (reporterkarnataka news): ಮಂಗಳೂರು ಬಸ್ಸು ನಿಲ್ದಾಣದಿಂದ ಮಂಗಳೂರು-ತಿರುಪತಿಗೆ ಸಾರ್ವಜನಿಕರ ಬೇಡಿಕೆಗನುಗುಣವಾಗಿ ಕ್ಲಬ್ ಕ್ಲಾಸ್ ವೋಲ್ವೋ ವಾಹನಗಳೊಂದಿಗೆ ಸಾರಿಗೆ ಸೌಲಭ್ಯವನ್ನು ಡಿಸೆಂಬರ್ 20 ರಿಂದ ಆರಂಭಿಸಲಾಗುವುದು.
ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಆರೋಗ್ಯದ ಹಿತದೃಷ್ಟಿಯಿಂದಾಗಿ ನಿಗಮದ ಎಸ್ಒಪಿ ನಿರ್ದೇಶನಗಳಂತೆ ನಿಗಮದ ವಾಹನಗಳಲ್ಲಿ ಪ್ರಯಾಣಿಸಲು ಅವಕಾಶಗಳನ್ನು ಕಲ್ಪಿಸಲಾಗುವುದು.
ಸದರಿ ಮಾರ್ಗದ ಸಾರಿಗೆ ಕಾರ್ಯಾಚರಣೆಯ ವಿವರ: ಕ್ಲಬ್ ಕ್ಲಾಸ್ ವೋಲ್ವೋ ಮಂಗಳೂರಿನಿಂದ 8.50 ಗಂಟೆಗೆ ಹೊರಟು ತಿರುಪತಿಗೆ 11 ಗಂಟೆಗೆ ತಲುಪಲಿದೆ. (ವಯಾ ಹಾಸನ, ಬೆಂಗಳೂರು), ತಿರುಪತಿಯಿಂದ 6 ಗಂಟೆಗೆ ಹೊರು ಮಂಗಳೂರಿಗೆ 6.30 ಕ್ಕೆ ತಲುಪಲಿದೆ.
ಸಾರಿಗೆಗಳಿಗೆ ಆನ್ಲೈನ್ ಮುಂಗಡ ಟಿಕೇಟು ಬುಕ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದ್ದು, ಹತ್ತಿರದ ರಿಸರ್ವೇಶನ್ ಕೌಂಟರ್ ಸಂಪರ್ಕಿಸಬಹುದಾಗಿದೆ ಎಂದು ಮಂಗಳರು ಕರಾರಸಾಸಂ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.