10:44 PM Thursday21 - January 2021
ಬ್ರೇಕಿಂಗ್ ನ್ಯೂಸ್
ಮಂಗಳೂರಿನಲ್ಲಿ  ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ 5ನೇ ಪುಣ್ಯತಿಥಿ ಆಚರಣೆ ಮಡಿಕೇರಿ ತಾಲೂಕು ಅಕ್ರಮ- ಸಕ್ರಮ ಸಮಿತಿ ಸಭೆಯಲ್ಲಿ ಹಲವು ಅರ್ಜಿಗಳ ವಿಲೇವಾರಿ  … ನಟಿ ರಾಗಿಣಿ ದ್ವಿವೇದಿಗೆ ಕೊನೆಗೂ ಸಿಕ್ಕಿತು ಜಾಮೀನು: 140 ದಿನಗಳ ಬಳಿಕ ಬಿಡುಗಡೆ… ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬಿಡನ್ ಪ್ರಮಾಣ ವಚನ ಸ್ವೀಕಾರ: ಕಣ್ಣೀರು ಸುರಿಸಿದ… ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ 29ರಂದು ಮಂಗಳೂರಿಗೆ ಮಂಗಳೂರು ನಗರದ ಹಲವೆಡೆ ನಾಳೆ, ನಾಳಿದ್ದು ನೀರಿಲ್ಲ: ಯಾವೆಲ್ಲ ಪ್ರದೇಶವೆಂದು ನೀವೇ ಓದಿ ಬೈಕಿಗೆ ಸೈಡ್ ಕೊಡದ ನೆಪದಲ್ಲಿ ಸಿಟಿ ಬಸ್ ಚಾಲಕನಿಗೆ  ಪೆಟ್ರೋಲ್ ಸುರಿದು ಬೆಂಕಿ… ಬಿಲ್ಲವ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯಕ್ಕೆ ಬಜೆಟ್ ನಲ್ಲಿ 50… ಜನವರಿ 27, 28 ರಂದು ನಡೆಯಲಿರುವ ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಹ್ವಾನ… ಮಂಗಳೂರಿನಲ್ಲಿ ಮತ್ತೆ ಸದ್ದು ಮಾಡಿದ ಹನಿಟ್ರ್ಯಾಪ್ : ಇಬ್ಬರು ಯುವತಿಯರು ಸೇರಿದಂತೆ 4…

ಇತ್ತೀಚಿನ ಸುದ್ದಿ

ಚುನಾವಣೆ ಸಂದರ್ಭ ನೀಡಿದ್ದ ಭರವಸೆ ಈಡೇರಿಸಿದ್ದೇನೆ: ಶಾಸಕ ವೇದವ್ಯಾಸ ಕಾಮತ್

August 14, 2020, 2:10 PM

ಮಂಗಳೂರು(reporterkarnataka news):

ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಸಂದರ್ಭದಲ್ಲಿ ಜನತೆಗೆ ನೀಡಿದ್ದ ಹಲವಾರು ಭರವಸೆಗಳನ್ನು ಪ್ರಥಮ ಹಂತದಲ್ಲೇ ಈಡೇರಿಸಿದ್ದೇವೆ ಎಂದು ಶಾಸಕ ಡಿ.ವೇದವ್ಯಾಸ್ ಕಾಮತ್ ಹೇಳಿದ್ದಾರೆ.

ಚುನಾವಣೆಯ ಪ್ರಣಾಳಿಕೆಯಲ್ಲಿ ಹೇಳಿರುವ ಅನೇಕ ಅಂಶಗಳನ್ನೊಳಗೊಂಡಂತೆ ಜನರ ಬಹುಕಾಲದ ಬೇಡಿಕೆಯನ್ನು ಬಿಜೆಪಿ ಆಡಳಿತದಲ್ಲಿ ಸಾಕಾರಗೊಳಿಸಲಾಗಿದೆ. ಚುನಾವಣೆಯ ಸಂದರ್ಭದಲ್ಲಿ ಮಂಗಳೂರಿನ ಅಭಿವೃದ್ಧಿಗೆ ಪೂರಕವಾಗಿ ಟಿಡಿಆರ್ ಪ್ರಕ್ರಿಯೆಗೆ ವೇಗ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ಟಿಡಿಆರ್ ಸೆಲ್ ತೆರೆಯುವ ಕುರಿತು ಭರವಸೆ ನೀಡಿದ್ದೆವು. ಆ ಪ್ರಕಾರ ಅಭಿವೃದ್ಧಿ ಕಾಮಗಾರಿ ಸಂಬಂಧಿಸಿ ಖಾಸಗಿ ಜಮೀನಿನ ಅಗತ್ಯತೆ ಇರುವುದರಿಂದ, ಭೂಸ್ವಾಧೀನಪಡಿಸಲು ವೇಗ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ಟಿಡಿಆರ್ ಸೆಲ್ ತೆರೆಯಲು ನಿರ್ಧರಿಸಲಾಗಿದೆ ಎಂದು ಶಾಸಕ‌ ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಉಪ ಕರವನ್ನು ಹಾಗೂ ಉದ್ದಿಮೆಗಳ ಮೇಲೆ ವಿಧಿಸಿರುವ ಘನತ್ಯಾಜ್ಯ ವಿಲೇವಾರಿ ಸೇವಾ ಶುಲ್ಕವನ್ನು ಪರಿಷ್ಕರಿಸುವ ಮೂಲಕ ಜನರಿಗೆ ಚುನಾವಣೆಯ ವೇಳೆ ನೀಡಿದ್ದ ಭರವಸೆಯನ್ನು ಬಿಜೆಪಿ ನೇತೃತ್ವದ ಪಾಲಿಕೆ ಆಡಳಿತ ಉಳಿಸಿಕೊಂಡಿದೆ ಎಂದಿದ್ದಾರೆ.

ಆಡಳಿತ ವ್ಯವಸ್ಥೆಯನ್ನು ಪಾರದರ್ಶಕವಾಗಿಡಲು 

ಬಿಜೆಪಿ ಬದ್ಧವಾಗಿದೆ. ಈ ನಿಟ್ಟಿನಲ್ಲಿ

ಪಾಲಿಕೆಯ ಎಲ್ಲ ವಾರ್ಡುಗಳಲ್ಲಿಯೂ ವಾರ್ಡ್ ಸಮಿತಿ ರಚಿಸಲು ನಿರ್ಣಯ ಕೈಗೊಳ್ಳಲಾಗಿದೆ. ಮಂಗಳೂರಿನ ಜನತೆಯ ಬಹುಕಾಲದ ಬೇಡಿಕೆಯಾಗಿರುವ ವಾರ್ಡ್ ಸಮಿತಿ ರಚನೆಯ ಬೇಡಿಕೆಯನ್ನು ನಮ್ಮ ಅವಧಿಯಲ್ಲಿ  ಅನುಮತಿ ನೀಡುವ‌ ಕುರಿತು ನಾವು ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಪಾಲಿಕೆ ಪರಿಷತ್ ಸಭೆಯಲ್ಲಿ ಅನುಮೋದಿಸಲಾಗಿದೆ ಎಂದು ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿನ ಕೊಳಚೆ ಪ್ರದೇಶಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಸರ್ವರಿಗೂ ಸೂರು ಯೋಜನೆಯಡಿ ಕಣ್ಣೂರು ಗ್ರಾಮದಲ್ಲಿ ಜಿ+3 ಮಾದರಿಯ 500 ಮನೆಗಳ ನಿರ್ಮಾಣ ಯೋಜನೆಗೆ ನಗರ ಸ್ಥಳೀಯ ಪಾಲಿನ ಶೇ.10 ಅನುದಾನ ಒದಗಿಸಲು ಅನುಮೋದನೆ ನೀಡಲಾಗಿದೆ. 6 ಗುಂಪುಗಳ ಜಿ+3 ಮಾದರಿಯ 21 ಬ್ಲಾಕ್ ಗಳನ್ನೊಳಗೊಂಡ‌ ಲೇಔಟ್ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಯಂತೆ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ದರ ಕಡಿಮೆಗೊಳಿಸಿ ಜನತೆಗೆ ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದೆವೆ. ಗೃಹೇತರ, ವಾಣಿಜ್ಯ, ಕಟ್ಟಡ ರಚನೆ, ಸಗಟು ಪೂರೈಕೆ, ಬೃಹತ್ ಕೈಗಾರಿಕೆ ಹಾಗೂ ಗೃಹ ಬಳಕೆ ನೀರಿನ ದರವನ್ನು ಪರಿಷ್ಕರಿಸಲಾಗಿದೆ. ಆ ಮೂಲಕ ಮಂಗಳೂರಿನ ಜನತೆಗೆ ನಾವು ನೀಡಿದ್ದ ಭರವಸೆಯನ್ನು ನಮ್ಮ ಆಡಳಿತದ ಪ್ರಥಮ ಹಂತದಲ್ಲೇ ಈಡೇರಿಸಿದ್ದೇವೆ ಎಂದಿದ್ದಾರೆ.

ಪಾಲಿಕೆಯ ಪದವು ಗ್ರಾಮದಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಹಾಗೂ ರಾಜ್ಯ ಸರ್ಕಾರದ ಅನುದಾನದಡಿ ಮಂಜೂರಾತಿ ಪಡೆದಿರುವ ಜಿ+3 ಮಾದರಿಯ ವಸತಿ ಗೃಹಗಳ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಜಮೀನು ಸಂರಕ್ಷಿತ ಅರಣ್ಯ ಪ್ರದೇಶವಾಗಿದ್ದ ಕಾರಣ ಉಂಟಾಗಿದ್ದ ತೊಡಕನ್ನು ನಿವಾರಿಸಲಾಗಿದೆ. ಅರಣ್ಯ ಇಲಾಖೆಗೆ ಪ್ರತ್ಯೇಕ ಜಮೀನು ನೀಡಲಾಗಿದ್ದು, ಈ ಹಿಂದೆ ಗುರುತಿಸಿದ ಸ್ಥಳದಲ್ಲೇ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಶಾಸಕರುವ ಹೇಳಿದ್ದಾರೆ.

ಪ್ರಸ್ತುತ ರಾಜ್ಯದೆಲ್ಲೆಡೆ ಕೊರೊನಾ ಸಾಂಕ್ರಾಮಿಕ ರೋಗವು ತೀವ್ರ ರೀತಿಯಲ್ಲಿ ಹರಡುತ್ತಿರುವುದರಿಂದ ಪಾಲಿಕೆ ವ್ಯಾಪ್ತಿಯ ಬೋಳೂರು ಸ್ಮಶಾನದಲ್ಲಿರುವ‌ ವಿದ್ಯುತ್ ಚಿತಾಗಾರದ‌ ಸಮೀಪವೇ 65 ಲಕ್ಷ ವೆಚ್ಚದಲ್ಲಿ ವಿದ್ಯುತ್‌ ಚಾಲಿತ ಚಿತಾಗಾರ ನಿರ್ಮಾಣ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಶಾಸಕ‌ ವೇದವ್ಯಾಸ್ ಕಾಮತ್ ಅವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು