ಇತ್ತೀಚಿನ ಸುದ್ದಿ
ವರ್ಷದ ಕೊನೆಯ ಸೂರ್ಯಗ್ರಹಣ ಡಿಸೆಂಬರ್ 14ರಂದು: ಭಾರತದಲ್ಲಿ ಗೋಚರಿಸುವುದಿಲ್ಲ
December 12, 2020, 9:55 AM

ಬೆಂಗಳೂರು(reporterkarnataka news): ವರ್ಷದ ಕೊನೆಯ ಸೂರ್ಯ ಗ್ರಹಣ ಡಿಸೆಂಬರ್ 14ರಂದು ಸಂಭವಿಸಲಿದೆ. ವರ್ಷದ ಕೊನೆಯ ಚಂದ್ರ ಗ್ರಹಣ ನವೆಂಬರ್ 30ರಂದು ಘಟಿಸಿತ್ತು. ಸೂರ್ಯ ಗ್ರಹಣ, ಚಂದ್ರ ಗ್ರಹಣದ ವೈಜ್ಞಾನಿಕ ಕಾರಣ ನಮಗೆಲ್ಲ ಗೊತ್ತೇ ಇದೆ. ಜ್ಯೋತಿಷ್ಯ ಲೆಕ್ಕಾಚಾರ ಮತ್ತು ಪಂಚಾಂಗದ ಪ್ರಕಾರ, ವರ್ಷದ ಕೊನೆಯ ಸೂರ್ಯಗ್ರಹಣವು ವೃಶ್ಚಿಕ ರಾಶಿ ಮತ್ತು ಜೇಷ್ಠ ನಕ್ಷತ್ರದಲ್ಲಿ ನಡೆಯಲಿದೆ. ಭಾರತೀಯ ಸಮಯದ ಪ್ರಕಾರ, ಈ ಸೂರ್ಯಗ್ರಹಣವು ಡಿಸೆಂಬರ್ 14 ರಂದು ಸಂಜೆ 7 ಗಂಟೆ 3 ನಿಮಿಷಕ್ಕೆ ಆರಂಭಗೊಂಡು ಡಿಸೆಂಬರ್ 15 ರ ರಾತ್ರಿ ಅಂದರೆ 12.23 ಕ್ಕೆ ಮುಕ್ತಾಯಗೊಳ್ಳಲಿದೆ.
ಗ್ರಹಣ ಭಾರತದಲ್ಲಿ ಕಾಣಿಸುವುದಿಲ್ಲ. ಯಾಕೆಂದರೆ ಸೂರ್ಯಾಸ್ತವಾದ ಬಳಿಕ ಗ್ರಹಣ ಆರಂಭವಾಗುತ್ತದೆ. ಹಾಗಾಗಿ ದಕ್ಷಿಣ ಅಮೆರಿಕ, ದಕ್ಷಿಣ ಆಫ್ರಿಕಾ, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಪ್ರಶಾಂತ ಮಹಾಸಾಗರ ಮುಂತಾದ ಪ್ರಾಂತ್ಯಗಳಲ್ಲಿ
ಗ್ರಹಣ ಗೋಚರಿಸಲಿದೆ.