ಇತ್ತೀಚಿನ ಸುದ್ದಿ
ವಾರಣಾಸಿ ಸಂಸದೀಯ ಕ್ಷೇತ್ರದಿಂದ ಪ್ರಧಾನಿ ಮೋದಿ ಆಯ್ಕೆ ಪ್ರಶ್ನೆ: ಸುಪ್ರೀಂಕೋರ್ಟ್ ನಿಂದ ಅರ್ಜಿ ವಜಾ
November 24, 2020, 12:59 PM

ನವದೆಹಲಿ(reporterkarnataka news): ಪ್ರಧಾನಿ ಮೋದಿ ಅವರ ಲೋಕಸಭೆ ಆಯ್ಕೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ನೇತೃತ್ವದ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಾಜಿ ಬಿಎಸ್ಎಫ್ ಯೋಧ ತೇಜ್ ಬಹಾದ್ದೂರ್ ಈ ಸಂಬಂಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಪೀಠ ಅರ್ಜಿ ತಳ್ಳಿಹಾಕಿದೆ. 2017ರಲ್ಲಿ ತೇಜ್ ಬಹಾದ್ದೂರ್ ನನ್ನು ಬಿಎಸ್ ಎಫ್ ನಿಂದ ವಜಾಗೊಳಿಸಲಾಗಿತ್ತು.