ಇತ್ತೀಚಿನ ಸುದ್ದಿ
ವಂಚನೆ ಪ್ರಕರಣ: ಮಂಜೇಶ್ವರ ಶಾಸಕ ಎಂ ಸಿ ಕಮರುದ್ದೀನ್ ಜಾಮೀನು ಅರ್ಜಿ ವಿಚಾರಣೆ ಇಂದು
November 30, 2020, 9:11 AM

ಕೊಚ್ಚಿ(reporterkarnataka news): ಚಿನ್ನ ವಂಚನೆ ಪ್ರಕರಣದ ಆರೋಪಿ ಮಂಜೇಶ್ವರ ಶಾಸಕ ಎಂ ಸಿ ಕಮರುದ್ದೀನ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಇಂದು ಕೇರಳ ಹೈಕೋರ್ಟ್ ನಲ್ಲಿ ನಡೆಯಲಿದೆ.
ಯಾವುದೇ ವ್ಯಕ್ತಿಯಿಂದ ನಾನು ನೇರವಾಗಿ ಹಣ ಪಡೆದಿಲ್ಲ ಎಂದು ಕಮರುದ್ದೀನ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಜಾಮೀನು ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಶಾಸಕ ಕಮರುದ್ದೀನ್ ಮಾಲಿಕತ್ವದ ಸಂಸ್ಥೆ ಹಣ ಪಡೆದು ಚಿನ್ನ ನೀಡಿಲ್ಲ ಎಂದು ಆರೋಪಿಸಲಾಗಿದೆ.