3:22 AM Thursday25 - February 2021
ಬ್ರೇಕಿಂಗ್ ನ್ಯೂಸ್
ಸಿದ್ದರಾಮಯ್ಯರಿಗೆ ತಲೆ ಸರಿ ಇಲ್ಲ, ವಕೀಲ ಅಂತ ಹೇಳಿಕೊಳ್ಳಲು ನಾಚಿಗೆಯಾಗಬೇಕು: ಈಶ್ವರಪ್ಪ ಅಡುಗೆ ಅನಿಲ ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ: ಒಂದೇ ತಿಂಗಳಲ್ಲಿ 3ನೇ ಬಾರಿ… ಇಂಧನ ಬೆಲೆಯೇರಿಕೆ, ಇ- ವೇ ಬಿಲ್ ಖಂಡಿಸಿ ನಾಳೆ ಭಾರತ ಬಂದ್ :… ಶ್ರೀನಿವಾಸಪುರ: ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿರ್ಮೂಲನೆ ಕಾರ್ಯಕ್ರಮ ರೋವರ್ ನಿಂದ ಮಂಗಳನ ಮಣ್ಣು ಹಾಗೂ ಕಲ್ಲಿನ  ಸ್ಯಾಂಪಲ್ ಸಂಗ್ರಹ: ಹಾಗಾದರೆ ಅದನ್ನು… ಕಟೀಲು ಮೇಳ ಸೇವೆ ಆಟಗಳು: ಎಲ್ಲಿ ಏನೇನು? ನೀವೇ ಓದಿ ನೋಡಿ ತಂಬಾಕು ಜಾಗೃತಿ ಮೂಡಿಸಲು ‘ಗುಲಾಬಿ ಅಭಿಯಾನ’:  ಬೆಳುವಾಯಿ ಶಾಲಾ ಮಕ್ಕಳಿಂದ ಜಾಥಾ ಪೇಜಾವರ ಶ್ರೀಗಳಿಗೆ ಗುರು ವಂದನೆ: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ… ಆವಿಷ್ಕಾರ ಮತ್ತು ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಮಂಗಳೂರು ಅಭಿವೃದ್ಧಿ: ಡಿಸಿಎಂ ಡಾ. ಅಶ್ವಥನಾರಾಯಣ ಜನರು ಮಾಸ್ಕ್ ಧರಿಸದಿದ್ದರೆ ಮತ್ತೆ ಲಾಕ್ ಡೌನ್: ಮುಖ್ಯಮಂತ್ರಿ ನಾಗರಿಕರಿಗೆ ಎಚ್ಚರಿಕೆ

ಇತ್ತೀಚಿನ ಸುದ್ದಿ

ವಿವಿ ಕಾಲೇಜಿನ ಹಿಂದಿ ಸಪ್ತಾಹ ಆನ್ ಲೈನ್ ಕಾರ್ಯಕ್ರಮ

September 28, 2020, 10:19 AM

ಚಿತ್ರ: ಅನುಷ್ ಪಂಡಿತ್

ಮಂಗಳೂರು(Reporterkarnatakanews): ವಿಶ್ವ ವಿದ್ಯಾ ನಿಲಯ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ ಆರು ದಿನಗಳ ಕಾಲ ಹಿಂದಿ ಸಪ್ತಾಹವು ಇತ್ತೀಚೆಗೆ ಜರುಗಿತು.
ಆ ಪ್ರಯುಕ್ತ ಹಿಂದಿ ಭಾಷಾ ಸ್ಪರ್ಧೆ ಹಾಗೂ ವೆಬಿನಾರ್ ಗಳನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯ ಕ್ರಮದಲ್ಲಿ ಆನ್ ಲೈನ್ ಶಿಕ್ಷಣ ಪದ್ಧತಿ ಬಗ್ಗೆ ಪ್ರಬಂಧ ಲೇಖನ ಸ್ಪರ್ಧೆ, ಹಿಂದಿ ಕಾವ್ಯ ರಚನೆ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಆನ್ ಲೈನ್ ನಲ್ಲಿಯೇ ಬರೆದು ಕಳುಹಿಸಿದ್ದಾರೆ.ಆರು ದಿನಗಳಲ್ಲಿ ಸ್ಪರ್ಧೆ, ವೆಬಿನಾರ್ ಗಳಲ್ಲಿ ಸುಮಾರು 70 ವಿದ್ಯಾರ್ಥಿಗಳು ಪಾಲ್ಗೊಂಡು ಪ್ರಯೋಜನ ಪಡೆದುಕೊಂಡ್ಡಿದ್ದಾರೆ.

ಮೂರನೇಯ ದಿನದ ಆನ್ ಲೈನ್ ಕಾರ್ಯಕ್ರಮವನ್ನು ಮುಂಬೈ ಆರ್.ಬಿ.ಐ ಸಂಸ್ಥೆಯ ಪ್ರಬಂಧಕರು ಡಾ. ಮದುಶೀಲ ಉದ್ಘಾಟಿಸಿದರು ಅವರು ಮಾತನಾಡಿ ಸಾಹಿತ್ಯೇತರ ಕ್ಷೇತ್ರದಲ್ಲಿ ಹಿಂದಿಭಾಷೆಯಿಂದ ಅನೇಕ ಅವಕಾಶ ಗಳಿವೆ ಎಂದು ವ್ಯಖ್ಯಾನ ನೀಡಿದರು.
ನಾಲ್ಕನೇಯ ದಿನದ ಆನ್ ಲೈನ್ ಕಾರ್ಯಕ್ರಮದಲ್ಲಿ ಮುಂಬೈ ಮಣಿ ಬೆನ ನಾನಾವತಿ ಮಹಿಳಾ ಮಹಾ ವಿದ್ಯಾಲಯ ಕಾಲೇಜಿನ ಸಂಪನ್ಮೂಲ ವ್ಯಕ್ತಿ ಯಾಗಿ ಪ್ರಾದ್ಯಾಪಕ ಡಾ.ರವೀಂದ್ರ ಕಾತ್ಯಯಿನ ಮಾತನಾಡಿ ಎಲ್ಲ ರಂಗಗಳಲ್ಲೂ ಹಿಂದಿ ಭಾಷಾ ವಿಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶ ದೊರೆಯುತ್ತದೆ. ಉದ್ಯೋಗ ನಿರ್ಮಾಣ ಸಾಧ್ಯ ಎಂದು ಅವರು ಹಿಂದಿ ಭಾಷಾ ವ್ಯಾಖ್ಯಾನ ಮಾಡಿದರು.

5ನೇಯ ದಿನದ ಆನ್ ಲೈನ್ ಕಾರ್ಯಕ್ರಮ ದಲ್ಲಿ ಮಂಗಳೂರು ವಿಶ್ವ ವಿದ್ಯಾ ನಿಲಯ ಕಾಲೇಜಿನ ಪ್ರಾಧ್ಯಾಪಕರಲ್ಲಿ ಹಿಂದಿ ಪ್ರೇಮ ಬೆಳೆಸಲು ಶುದ್ಧ್ ಲೇಖನ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಅದರಲ್ಲಿ ವಿ.ವಿ ಕಾಲೇಜಿನ ಸುಮಾರು 15 ಪ್ರಾಧ್ಯಾಪಕರು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಭಾರತೀಯರಲ್ಲಿ ಹಿಂದಿ ಪ್ರೇಮದ ಪ್ರಚಾರ ಮಾಡವುದು ಈ ಸ್ಪರ್ಧೆಯ ಉದ್ದೇಶವಾಗಿತ್ತು. ಇನ್ನೂ ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜನವರಿ 10, 2021 ರಂದು ನಡೆಯಲಿರುವ ವಿಶ್ವ ಹಿಂದಿ ದಿನಾಚರಣೆ ಯಲ್ಲಿ ಪುರಸ್ಕಾರ ನಡೆಯಲಿದೆ.

ಆರನೇಯ ದಿನದ ಆನ್ ಲೈನ್ ಸಮರೋಪ ಕಾರ್ಯಕ್ರಮ ಶನಿವಾರ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಡಾ
ಶಿವರಾಮ ಕಾರಂತ ಭವನದಲ್ಲಿ ಜರುಗಿತು.
ಆನ್ ಲೈನ್ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಉದಯ ಕುಮಾರ್ ಎಂ. ಎ ಅಧ್ಯಕ್ಷ ತೆ ವಹಿಸಿದ್ದರು
ಮುಖ್ಯ ಅತಿಥಿಯಾಗಿ ಪುನಾ ವಿಶ್ವ ವಿದ್ಯಾಲಯದ ಹಿಂದಿ ಶೂಧ ಕೇಂದ್ರದ ಪ್ರಾದ್ಯಾಪಕ ಡಾ. ಈಶ್ವರ ಪವರ್ ಮಾತನಾಡಿ ವರ್ತಮಾನ ಸಂದರ್ಭದಲ್ಲಿ ಹಿಂದಿ ಭಾಷೆಯ ಸ್ಥಿತಿ ಗತಿಯ ವಿವರ ನೀಡಿದರು.

ಮಂಗಳೂರು ವಿಶ್ವ ವಿದ್ಯಾ ನಿಲಯ ಕಾಲೇಜಿನ ಹಿಂದಿ ಸಂಘದ ಉಪ ನಿರ್ದೇಶಕರು ಡಾ. ನಾಗರತ್ನ ಎನ್ ರಾವ್, ಹಾಗೂ ಸ್ನಾತಕೋತ್ತರ ವಿಭಾಗದ ಸಂಯೋಜಕಿ, ಡಾ. ಸುಮಾ ಟಿ. ಆರ್ ಕಾರ್ಯಕ್ರಮದ ಆಯೋಜಕರು, ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕಿ ಡಾ. ರಾಜಲಕ್ಷ್ಮಿ ನರಸಜ್ಜನ್,ಹಿಂದಿ ಪ್ರಾದ್ಯಾಪಕರಾದ ಡಾ.ಗುರುದತ್, ವೈಶಾಲಿ ಸಾಲಿಯಾನ್, ಜ್ಯೋತಿ ಹಾಗೂ ಇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು