ಇತ್ತೀಚಿನ ಸುದ್ದಿ
ಯುಪಿಎ ಅಧ್ಯಕ್ಷ ಸ್ಥಾನ ಸೋನಿಯಾ ಗಾಂಧಿ ತ್ಯಜಿಸುವುದಿಲ್ಲ: ಕಾಂಗ್ರೆಸ್ ಸ್ಪಷ್ಟನೆ
December 11, 2020, 9:37 AM

ನವದೆಹಲಿ(reporterkarnataka news): ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ಗಾಂಧಿ ರಾಜೀನಾಮೆ ನೀಡಲಿದ್ದಾರೆ ಎಂಬ ವರದಿಗಳನ್ನು ಕಾಂಗ್ರೆಸ್ ತಳ್ಳಿಹಾಕಿದೆ.
ಇದು ಆಧಾರ ರಹಿತ ವರದಿ ಎಂದು ಕಾಂಗ್ರೆಸ್ ಹೇಳಿದೆ. ಶರದ್ ಪವಾರ್ ಅವರು ನೂತನ ಯುಪಿಎ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎಂದು ವರದಿಯಾಗಿತ್ತು.
ಇದು ಜನರ ಗಮನ ಬೇರೆಡೆ ಸೆಳೆಯಲು ನಡೆಸುತ್ತಿರುವ ತಂತ್ರ ಎಂದು ಕಾಂಗ್ರೆಸ್ ಟೀಕಿಸಿದೆ.