ಇತ್ತೀಚಿನ ಸುದ್ದಿ
ಇಂದು ಅನ್ ಲಾಕ್-4 ಮಾರ್ಗ ಸೂಚಿ: ಮೆಟ್ರೋ ಆರಂಭದ ಸಾಧ್ಯತೆ, ಚಿತ್ರಮಂದಿರ ಓಪನ್ ಇಲ್ಲ
August 26, 2020, 3:08 AM

ನವದೆಹಲಿ(reporterkarnataka news): ಕೇಂದ್ರ ಸರ್ಕಾರ ಇಂದು ಅನ್ ಲಾಕ್-4 ಮಾರ್ಗ ಸೂಚಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದರಿಂದಾಗಿ ಮೆಟ್ರೋ ರೈಲು ಪುನರಾರಂಭ ಸಾಧ್ಯತೆ ಹೆಚ್ಚಾಗಿದೆ. ಕೌಂಟರ್ ಗಳಲ್ಲಿ ಟಿಕೇಟ್ ಪದ್ದತಿಯನ್ನು ತಾತ್ಕಾಲಿಕವಾಗಿ ಕೈ ಬಿಡಲು ನಿರ್ಧರಿಸಲಾಗಿದೆ. ಬದಲಾಗಿ ಆನ್ ಲೈನ್ ಮೂಲಕವೇ ಟಿಕೇಟ್ ಖರೀದಿಸಬೇಕಾದ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.
ಆದರೆ ಚಿತ್ರಮಂದಿರ ಪುನರಾರಂಭ ಸಾಧ್ಯತೆ ಕ್ಷೀಣಿಸಿದೆ. ಶೇಕಡ 50 ಪ್ರೇಕ್ಷಕರಿಗೆ ಮಾತ್ರ ಅವಕಾಶ ಎಂಬ ಪ್ರಸ್ತಾಪಕ್ಕೆ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ.