ಇತ್ತೀಚಿನ ಸುದ್ದಿ
ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದಿಂದ ಆನ್ ಲೈನ್ ಕ್ಲಾಸ್ ಬಂದ್
December 21, 2020, 9:27 AM

ಬೆಂಗಳೂರು(reporterkarnataka news): ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಒಕ್ಕೂಟ ಇಂದಿನಿಂದ ಆನ್ ಲೈನ್ ಕ್ಲಾಸ್ ಸ್ಥಗಿತಗೊಳಿಸಿದೆ. ಆನ್ ಲೈನ್ ನ಼ಡೆಸದಿರಲು ರುಪ್ಸಾ ನಿರ್ಧರಿಸಿದೆ.
ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. ಆತಂಕ ಮನೆ ಮಾಡಿದೆ. ಸರ್ಕಾರದ ಮುಂದೆ 15 ಬೇಡಿಕೆಗಳನ್ನು ಇರಿಸಲಾಗಿತ್ತು.. ಆದರೆ ಈ ಬೇಡಿಕೆ ಕುರಿತು ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ರುಪ್ಸಾ ಆರೋಪಿಸಿದೆ.