ಇತ್ತೀಚಿನ ಸುದ್ದಿ
ಅನ್ ಲಾಕ್-4 ಮಾರ್ಗಸೂಚಿ ಬಿಡುಗಡೆ: ಶಾಲೆ, ಸಿನೆಮಾ ಮಂದಿರ ಬಂದ್
August 29, 2020, 5:10 PM

ನವದೆಹಲಿ(reporterkarnataka news): ಸಪ್ಟೆಂಬರ್ 30ರ ತನಕ ಜಾರಿಯಲ್ಲಿರುವ ಅನ್ ಲಾಕ್-4 ಮಾರ್ಗಸೂಚಿಯನ್ನು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದೆ. ಕಂಟೇನ್ ಮೆಂಟ್ ವಲಯ ಹೊರತುಪಡಿಸಿ ಇತರ ಯಾವುದೇ ಪ್ರದೇಶದಲ್ಲಿ ಲಾಕ್ ಡೌನ್ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಯಾವುದೇ ರಾಜ್ಯ ಸರ್ಕಾರವಾಗಲೀ , ಸ್ಥಳೀಯ ಆಡಳಿತವಾಗಲಿ ಮನಸ್ಸಿಗೆ ಬಂದಂತೆ ಲಾಕ್ ಡೌನ್ ಘೋಷಿಸುವುದನ್ನು ನಿರ್ಬಂಧಿಸಲಾಗಿದೆ.
ದೇಶದಲ್ಲಿ ಸಪ್ಟೆಂಬರ್ 30ರ ತನಕ ಶಾಲಾ ಕಾಲೇಜು ಬಂದ್ ಮುಂದುವರಿಯಲಿದೆ. ಸಿನೆಮಾ ಮಂದಿರಗಳ ಬಾಗಿಲುಗಳು ಕೂಡ ಈ ಅವಧಿಯಲ್ಲಿ ತೆರೆಯಲು ಅನುಮತಿ ನೀಡಲಾಗಿಲ್ಲ. ಆದರೆ ಗರಿಷ್ಟ 100 ಮಂದಿ ಪಾಲ್ಗೊಳ್ಳಲು ಸಮಾರಂಭದಲ್ಲಿ ಅವಕಾಶ ಕಲ್ಪಿಸಲಾಗಿದೆ. ಹಂತ ಹಂತವಾಗಿ ಮೆಟ್ರೋ ರೈಲು ಸೇವೆ ಪುನರಾರಂಭಿಸಲು ನಿರ್ಧರಿಸಲಾಗಿದೆ.