11:28 PM Sunday24 - January 2021
ಬ್ರೇಕಿಂಗ್ ನ್ಯೂಸ್
ಬಲ್ಯ ಸಮೀಪ ಕಾರು- ಬೊಲೆರೋ ಅಪಘಾತ:  ಒಬ್ಬ ಸಾವು, 4 ಮಂದಿ ತೀವ್ರ… ಕಾಸರಗೋಡು: ಮೆಡಿಕಲ್ ಶಾಪ್ ಗೆ ಔಷಧ ಖರೀದಿಸಲು ಬಂದ ವ್ಯಕ್ತಿಯನ್ನು ಗುಂಪೊಂದು ಥಳಿಸಿ… ಕಾಳು ಹಾಕಿ ಕೋಳಿ ಕದಿಯುವ ಭಿಕ್ಷುಕರಿದ್ದಾರೆ ಎಚ್ಚರಿಕೆ: ನಿಮ್ಮ ಮನೆಗೂ ಬಂದಾರು ಜೋಕೆ!… ವಿವಾದಾತ್ಮಕ ವಾಟ್ಸಾಪ್ ಚಾಟ್ : ಮಹಾರಾಷ್ಟ್ರ ಸರಕಾರದಿಂದ ಅರ್ನಾಬ್ ಮತ್ತೆ ಬಂಧನ ಸಾಧ್ಯತೆ ವೈರಲ್ ಆಗುತ್ತಿದೆ ಕೆ.ಎಲ್. ರಾಹುಲ್ – ಆಶಿಕಾ ರಂಗನಾಥ್ ಜೋಡಿಯ ಫೋಟೋ: ನೆಟ್ಟಿಗರಿಂದ… ಗಣರಾಜ್ಯೋತ್ಸವ ದಿನ ಬೆಂಗಳೂರಿನಲ್ಲೂ ನಡೆಯಲಿದೆ ರೈತ- ಕಾರ್ಮಿಕರ ಟ್ರ್ಯಾಕ್ಟರ್ ಪರೇಡ್  ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಕೆಪಿಎಸ್ ಇ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ಬಂಧಿತರಿಂದ 24 ಲಕ್ಷ ರೂ.… ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆಯಿತೇ ರಹಸ್ಯ ಸಭೆ: ಬಿಜೆಪಿಯೊಳಗಿನ ಮುನಿಸು ತಣ್ಣಗಾಗಿಲ್ವೇ?  ಶ್ರೀನಿವಾಸಪುರ ತಾಲೂಕಿನ 25 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟ: ವಿವರಕ್ಕೆ ನೀವೇ…

ಇತ್ತೀಚಿನ ಸುದ್ದಿ

ಉದ್ಯೋಗ ಸೃಷ್ಟಿಗೆ ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದ ಸಿಎಂ

August 15, 2020, 6:38 AM

ಬೆಂಗಳೂರು (reporterkarnataka news)

ಕೊರೊನಾ ಸಂಕಷ್ಟದಲ್ಲಿ ರಾಮ ರಾಜ್ಯದ ಕನಸು ನನಸು ಮಾಡಲು ಯತ್ನ  ನಡೆಸಲಾಗಿದೆ. ಕಲ್ಯಾಣ ರಾಜ್ಯವನ್ನು ಕಟ್ಟುವುದು ನಮ್ಮ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲರಿಗೂ ನಮನಗಳು ಎಂದು ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ ತಿಳಿಸಿದ್ದಾರೆ.

ರೈತರು, ಉದ್ಯಮಿಗಳಿಗೆ ಲಾಭವಾಗುವಂತೆ ಭೂಮಿಯನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಉದ್ಯೋಗಾವಕಾಶ ಸೃಷ್ಟಿಗೆ ಹಲವು ಯೋಜನೆ ಕೈಗೊಳ್ಳಲಾಗಿದೆ. ಸವಾಲು ಎದುರಿಸುವಲ್ಲಿ ಸರ್ಕಾರ ಅಚಲವಾಗಿ ಮುನ್ನಡೆದಿದೆ. ಒಂದು ವರ್ಷದ ಅವಧಿಯಲ್ಲಿ ಹಲವಾರು ಸಮಸ್ಯೆಗಳ ನಡುವೆಯೂ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದೇವೆ ಎಂದು ಹೇಳಿದ್ದಾರೆ.

ಆಯುಷ್ಮಾನ್ ಭಾರತ್ ಯೋಜನೆ ಅಡಿ ಸುಮಾರು 1 ಕೋಟಿ ಜನರಿಗೆ ಚಿಕಿತ್ಸೆ ನೀಡಲಾಗಿದೆ. ಲಾಕ್ ಡೌನ್ ಜಾರಿಮಾಡಿದ ಕಾರಣ ಆರ್ಥಿಕ ವ್ಯವಹಾರ ಕುಸಿದಿತ್ತು. ಅದೆಲ್ಲವನ್ನು ಎದುರಿಸಿ ವಾಣಿಜ್ಯ ಚಟುವಟಿಕೆಗಳ ಚೇತರಿಕೆಗೆ ಕ್ರಮಕೈಗೊಳ್ಳಲಾಗಿದೆ. ಸಂಕಷ್ಟದಲ್ಲಿದ್ದ ವಿವಿಧ ವಲಯದ ಜನರಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು