5:43 AM Tuesday9 - March 2021
ಬ್ರೇಕಿಂಗ್ ನ್ಯೂಸ್
ಸಾಗರಮಾಲಾ ಯೋಜನೆಯ ಕೋಸ್ಟಲ್ ಬರ್ತ್  ರದ್ದುಪಡಿಸಲು ಒತ್ತಾಯಿಸಿ ಬೆಂಗರೆಯಲ್ಲಿ ಪ್ರತಿಭಟನೆ ಮೂಡುಬಿದರೆ: ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಂದ ಎರಡು ದಿನಗಳ ಶೈಕ್ಷಣಿಕ ಪ್ರವಾಸ, ಚಾರಣ ಮಹಿಳಾ ದಿನಾಚರಣೆ ದಿನದಂದೇ ಶಾಕಿಂಗ್ ನ್ಯೂಸ್: ಪೊದೆಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆ 50 ಟನ್ ಬೂದುಗುಂಬಳ ಬೆಳೆಸಿದ ತೀರ್ಥಹಳ್ಳಿ ರೈತ: ಖರೀದಿಗೆ ಸಗಟು ವರ್ತಕರಿಲ್ಲದೆ ಸೋತ!… ಮಂಗಳೂರಿನ ಸಿಮ್ರಾನ್ ಕೋಚಿಂಗ್ ಸೆಂಟರ್ ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ ರಾಜ್ಯ ಬಜೆಟ್ : ಪೆಟ್ರೋಲ್, ಡೀಸೆಲ್ ಮೇಲೆ ತೆರಿಗೆ ಹೆಚ್ಚಳ ಇಲ್ಲ. 45 ಲಕ್ಷ… ಮಹಿಳೆ ಮತ್ತು ನಾಯಕತ್ವ ಕ್ರೈಸ್ತ ಸಮುದಾಯ ವಿರುದ್ಧ ಸಂಸದ ಪ್ರತಾಪ ಸಿಂಹ ವಿವಾದಿತ ಹೇಳಿಕೆ: ಕಾಂಗ್ರೆಸ್ ಪ್ರತಿಭಟನೆ ಇಂದು ರಾಜ್ಯ ಬಜೆಟ್: ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಮಂಡನೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಥ್ರೋಬಾಲ್ ಪಂದ್ಯಾಟ

ಇತ್ತೀಚಿನ ಸುದ್ದಿ

ಉಡುಪಿ ಕೋವಿಡ್ ಆಸ್ಪತ್ರೆಯ ಮಹಾ ಎಡವಟ್ಟು: ಮೃತದೇಹವೇ ಅದಲು ಬದಲು! !

August 23, 2020, 4:00 PM

ಉಡುಪಿ(reporterkarnataka news): ಆಸ್ಪತ್ರೆಗಳಲ್ಲಿ ಮಕ್ಕಳು ಅದಲು ಬದಲಾಗಿರುವ ಸಾಕಷ್ಟು ಪ್ರಕರಣಗಳನ್ನು ನಾವು ಕೇಳಿದ್ದೇವೆ, ಕಂಡಿದ್ದೇವೆ. ಆದರೆ ಉಡುಪಿಯ ಆಸ್ಪತ್ರೆಯಲ್ಲಿ ಶವವೇ ಅದಲು ಬದಲಾದ ಮಹಾ ಎಡವಟ್ಟಿನ ಘಟನೆ ಭಾನುವಾರ ನಡೆದಿದೆ.

ಇದು ನಡೆದದ್ದು ಉಡುಪಿಯ ಕೋವಿಡ್ ಆಸ್ಪತ್ರೆಯಲ್ಲಿ. ಸಿಬ್ಬಂದಿಗಳ ಬೇಜವಾಬ್ದಾರಿಯಿಂದ ಯಾರದೋ ಶವವನ್ನು ಪ್ಯಾಕ್ ಮಾಡಿ ವಾರಿಸುದಾರರಿಗೆ ನೀಡಿದ್ದಾರೆ. ಇದೆಲ್ಲ ಬೆಳಕಿಗೆ ಬಂದದ್ದು ಇನ್ನೇನು ಶವದ ಅಂತ್ಯಸಂಸ್ಕಾರ ನಡೆಸಬೇಕನ್ನುವಷ್ಟರಲ್ಲಿ. 

ಕುಂದಾಪುರದ ಸ್ಮಶಾನದಲ್ಲಿ ಇನ್ನೇನು ಮೃತದೇಹದ ಅಂತ್ಯ ಸಂಸ್ಕಾರ ನಡೆಸಲು ಮೃತರ ಮಕ್ಕಳು ಹಾಗೂ ಸಂಬಂಧಿಕರು ಸಿದ್ಧತೆ ನಡೆಸುತ್ತಿದ್ದರು.

ಮೃತ ವ್ಯಕ್ತಿಯ ಬಾಯಿಗೆ ಕೊನೆಯ ಬಾರಿಗೆ ನೀರು ಬಿಡುವ ಶಾಸ್ತ್ರ ಮುಗಿಸಲು ಶವದ ಪ್ಯಾಕ್ ನ ಮುಖದ ಭಾಗ ಬಿಚ್ಚುವಾಗ ಮನೆಯವರಿಗೆ ಇದು ತಮ್ಮ ಬಂಧುವಿನ ಶವವಲ್ಲ ಎನ್ನುವ ವಿಚಾರ ತಿಳಿಯಿತು. 

ಆಸ್ಪತ್ರೆಯಲ್ಲಿ ನಮಗೆ ಪಾರ್ಥಿವ ಶರೀರದ ಮುಖ ನೋಡಲು ಅವಕಾಶ ನೀಡಲಿಲ್ಲ. ಆಸ್ಪತ್ರೆ ಸಿಬ್ಬಂದಿಗಳು ಮೃತದೇಹ ಪ್ಯಾಕ್ ಮಾಡಿ ನೀಡಿದ್ದರು. ಇದರಿಂದ ನಮಗೆ ಗೊತ್ತಾಗಿಲ್ಲ ಎಂದು ಮೃತರ ಪುತ್ರ ತಿಳಿಸಿದ್ದಾರೆ.

ಕುಂದಾಪುರದ ಗಂಗಾಧರ್ ಆಚಾರ್ ಅವರ ಶವದ ಬದಲಿಗೆ ಕಾರ್ಕಳದ 25ರ ಹರೆಯದ ಪ್ರಕಾಶ್ ಎಂಬವರ ಮೃತದೇಹವನ್ನು ರವಾನಿಸಲಾಗಿತ್ತು. ಇದರಿಂದ ಆಕ್ರೋಶಗೊಂಡ ಮೃತರ ಸಂಬಂಧಿಕರು ತಮ್ಮ ಬಂಧುವಿನ ಮೃತದೇಹ ನೀಡುವವರೆಗೆ ತಾವು ತಂದ ಶವವನ್ನು ಬಿಟ್ಟು ಕೊಡುವುದಿಲ್ಲ ಎಂದು ಘೆರಾವ್ ನಡೆಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು