7:01 AM Monday1 - March 2021
ಬ್ರೇಕಿಂಗ್ ನ್ಯೂಸ್
ಬಿಜೆಪಿ ಯುವ ಮೋರ್ಚಾ ನರಗುಂದ ಮಂಡಲ ವತಿಯಿಂದ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮ ಜಾತಿ, ಮತ, ಕಟ್ಟುಪಾಡುಗಳನ್ನು ಮೀರಿ ಜನಪದ ಜನಮಾನಸದಲ್ಲಿ ನೆಲೆಗೊಂಡಿದೆ: ಎಡನೀರು ಮಠಾಧೀಶರು ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ ಸಚಿವ ಅಂಗಾರ ತವರಿನಲ್ಲಿ ಭಿನ್ನಮತ ಸ್ಫೋಟ: 3 ಮಂದಿ ಹಿರಿಯ ನಾಯಕರು ಬಿಜೆಪಿಯಿಂದ… ಅಥಣಿ ತಾಲೂಕಿನ ರಡೇರಹಟ್ಟಿ ಗ್ರಾಮದಲ್ಲಿ  ಆಕಸ್ಮಿಕವಾಗಿ ಬೆಂಕಿ ತಗುಲಿ ಗುಡಿಸಲು ಭಸ್ಮ: 4… ಒಂದೂವರೆ ತಿಂಗಳ ಅವಧಿಯಲ್ಲಿ 10 ಬಾರಿ ಇಂಧನ ದರ ಏರಿಕೆ: ಕೆಪಿಸಿಸಿ ಅಧ್ಯಕ್ಷ… ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆ: ಮಿನಿ ವಿಧಾನ ಸೌಧದ ಎದುರು ಎಬಿವಿಪಿ ಪ್ರತಿಭಟನೆ;… ಮಂಗಳೂರು ಮಹಾನಗರಪಾಲಿಕೆ  2020-21ನೇ  ಸಾಲಿನ ತೆರಿಗೆ ಪೂರ್ತಿ ಪಾವತಿಸಿದರೆ ಶೇ. 5% ವಿನಾಯಿತಿ ಮಹಿಳಾ ಸಿಬ್ಬಂದಿಗೆ ಮಾನಸಿಕ ಕಿರುಕುಳ ಪ್ರಕರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ… ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ

ಇತ್ತೀಚಿನ ಸುದ್ದಿ

ಮಂಗಳೂರು ವಿವಿ ಕಾಲೇಜು ಪ್ರಿನ್ಸಿಪಾಲ್ ಹುದ್ದೆಯಿಂದ ಡಾ. ಉದಯ ಕುಮಾರ್ ಪದಚ್ಯುತಿಗೆ ಪಿತೂರಿ?

October 17, 2020, 7:00 AM

ಮಂಗಳೂರು(reporterkarnataka news):

ಎಂ. ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ವಿಶ್ವವಿದ್ಯಾಲಯ ಕಾಲೇಜು ಆಗಿ ಪರಿವರ್ತನೆಗೊಂಡು ಶೈಕ್ಷಣಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಸಾಕಷ್ಟು ಅಭಿವೃದ್ಧಿ ಕಂಡ ಮಂಗಳೂರು ಸರಕಾರಿ ಕಾಲೇಜು (ವಿವಿ ಕಾಲೇಜು) ಮತ್ತೆ ಸದ್ದು ಮಾಡಲಾರಂಭಿಸಿದರು. ಕಾಲೇಜಿನ ಪ್ರಿನ್ಸಿಪಾಲ್ ಡಾ. ಉದಯ ಕುಮಾರ್ ಇರ್ವತ್ತೂರು ಅವರನ್ನು ಹುದ್ದೆಯಿಂದ ಕೆಳಗಿಳಿಸಬೇಕೆಂಬ ಒತ್ತಾಯದೊಂದಿಗೆ ರಾಜಕೀಯ ವಾಸನೆ ಬಡಿಯಲಾರಂಭಿಸಿದೆ.

ಡಾ. ಉದಯ ಕುಮಾರ್ ಅವರನ್ನು ಪ್ರಿನ್ಸಿಪಾಲ್ ಹುದ್ದೆಯಿಂದ ಕೆಳಗಿಸಬೇಕೆಂಬ ಬೇಡಿಕೆಯನ್ನು ಎಬಿವಿಪಿ ಈಗಾಗಲೇ ಮಂಡಿಸಿದೆ. ಇದಕ್ಕೆ ವಿವಿ ಕಾಲೇಜಿನ ಕೆಲವು ಉಪನ್ಯಾಸಕರು ಕೂಡ ತೆರೆಯ ಮರೆಯಲ್ಲಿ ಸಾಥ್ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಸಾಮಾನ್ಯವಾಗಿ ಒಬ್ಬರನ್ನು ಹುದ್ದೆಯಿಂದ ಕೆಳಗಿಳಿಸಬೇಕಾದರೆ ಅವರ ಮೇಲೆ ಗುರುತರವಾದ ಆಪಾದನೆ ಇರಬೇಕು. ಆದರೆ ಡಾ. ಉದಯ ಕುಮಾರ್ ಅವರ ವಿಷಯದಲ್ಲಿ ಅದ್ಯಾವುದೂ ಇಲ್ಲ. ವಾಸ್ತವದಲ್ಲಿ ಉದಯ ಕುಮಾರ್ ಪ್ರಿನ್ಸಿಪಾಲರಾದ ಬಳಿಕ ವಿವಿ ಕಾಲೇಜಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ನಡೆದಿದೆ. ವಿಶ್ವಕವಿ ರವೀಂದ್ರನಾಥ ಟಾಗೂರ್ ಭಾಷಣ ಮಾಡಿದ ರವೀಂದ್ರ ಕಲಾಭವನ ಕಟ್ಟಡದ ಪಾರಂಪರಿಕ ಶೈಲಿಗೆ ದಕ್ಕೆ ಬಾರದ ರೀತಿಯಲ್ಲಿ ಕಾಯಕಲ್ಪ ನೀಡಲಾಗಿದೆ. ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಕಟ್ಟಲಾಗಿದೆ. ಆವರಣಗೋಡೆ ನವೀಕರಿಸಿ ಕ್ಯಾಂಪಸ್ ಗೆ ಅಂತಾರಾಷ್ಟ್ರೀಯ ಲುಕ್ ನೀಡಲಾಗಿದೆ. ಪತ್ರಿಕೋದ್ಯಮ ವಿಭಾಗಕ್ಕೆ ಸ್ಟುಡಿಯೋ ಮಾಡಲಾಗಿದೆ.

ಇದು ಒಂದು ಕಡೆಯಲ್ಲಿ ಅಭಿವೃದ್ಧಿ ಕಾಮಗಾರಿಯಾದರೆ, ಇನ್ನೊಂದು ಕಡೆಯಲ್ಲಿ ಶೈಕ್ಷಣಿಕವಾಗಿಯೂ ಕಾಲೇಜು ಸಾಕಷ್ಟು ಪ್ರಗತಿ ಕಂಡಿದೆ. ಫಲಿತಾಂಶದಲ್ಲಿ ಏರಿಕೆ ಇದೆ. ಅನೇಕ ವಿಷಯಗಳಲ್ಲಿ ಸ್ನಾತಕೋತ್ತರ ವಿಭಾಗ ತೆರೆಯಲಾಗಿದೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ರಾಜಮೋಹನ ಗಾಂಧಿ ಅವರಿಂದ ಅತಿಥಿ ಉಪನ್ಯಾಸ ನೀಡಲಾಗಿದೆ. ನ್ಯಾಕ್ ನಿಂದ ಎ ಪ್ಲಸ್ ಶ್ರೇಣಿ ಪಡೆಯಲಾಗಿದೆ. ಇಷ್ಟೇ ಅಲ್ಲದೆ ಸಾಕಷ್ಟು ಶೈಕ್ಷಣಿಕ ಕೆಲಸಗಳು ನಡೆದಿವೆ. ಎಲ್ಲಕ್ಕಿಂತ ಮಿಗಿಲಾಗಿ ಕೇವಲ ಎರಡು ವರ್ಷದಲ್ಲಿ ಉದಯ ಕುಮಾರ್ ಅವರು ನಿವೃತ್ತಿ ಹೊಂದಲಿದ್ದಾರೆ.

ಮಂಗಳೂರು ವಿವಿಯ ಹಿಂದಿನ ಕುಲಪತಿ ಡಾ. ಭೈರಪ್ಪ ವಿರುದ್ಧ ಸಾಕಷ್ಟು ಆರೋಪಗಳಿದ್ದವು. ಭೈರಪ್ಪ ಹಠಾವ್ ಎಂಬ ಅಭಿಯಾನವನ್ನು ಆರಂಭಿಸಲು ಎಬಿವಿಪಿಯಿಂದ ಒಂದೆರಡು ಪ್ರತಿಭಟನೆ ಕೂಡ ನಡೆದಿತ್ತು. ಆದರೆ ಕಾಣದ ಕೈಗಳ ಕೈವಾಡದಿಂದ ಎಬಿವಿಪಿ ಪ್ರತಿಭಟನೆ ಟುಸ್ ಆಗಿರುವುದು ಎಲ್ಲರಿಗೂ ತಿಳಿದ ವಿಚಾರ. ಡಾ. ಭೈರಪ್ಪ ಅವರಿಗೆ ನಿವೃತ್ತರಾಗುವ ವರೆಗೆ ಅವಕಾಶ ಕೊಟ್ಟವರು ಯಾವುದೇ ಆರೋಪಗಳಿಲ್ಲದ ಡಾ. ಉದಯ ಕುಮಾರ್ ಅವರನ್ನು ಪದಚ್ಯುತಿಗೆ ಪ್ರಯತ್ನಿಸುತ್ತಿರುವುದು ದುರದೃಷ್ಟಕರ ಎಂದು ವಿವಿ ಕಾಲೇಜಿನ ಪ್ರಜ್ಞಾವಂತ ಉಪನ್ಯಾಸಕರೇ ಹೇಳುತ್ತಾರೆ.

……………………..

ಇತ್ತೀಚಿನ ಸುದ್ದಿ

ಜಾಹೀರಾತು